City police station PI Prakash Male returns lost expensive mobile phones:

ಗಂಗಾವತಿ:17 ನಗರದಲ್ಲಿರುವ ಸಾರ್ವಜನಿಕರು ತಮ್ಮ ಕೈಯಲ್ಲಿನ ದುಬಾರಿಗೆ ಬೆಲೆಬಾಳುವ ಮೊಬೈಲ್ ಗಳನ್ನು ಕಳೆದುಕೊಂಡು ಪಶ್ಚಾತಾಪ ಪಡುತ್ತಿರುವ ಈ ಸಂದರ್ಭದಲ್ಲಿ. ಸಾರ್ವಜನಿಕರು ಮೊಬೈಲ್ ಗಳನ್ನು ಕಳೆದುಕೊಂಡು ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ನಗರ ಠಾಣೆಯ ಪಿ.ಐ.ಪ್ರಕಾಶ್ ಮಾಳೆ ಅವರು ಕಳೆದು ಹೋದ ಮೊಬೈಲಗಳನ್ನು ಸಿ.ಈ.ಐ.ಆರ್. (CEIR) ಪೋರ್ಟಲ್ ಮುಖಾಂತರ ಪತ್ತೆ ಮಾಡಿ 5 ಮೊಬೈಲಗಳನ್ನು ಕಳೆದುಕೊಂಡ ಸಂಬಂಧಪಟ್ಟವರಿಗೆ ಈ ದಿನ ಹಿಂತಿರುಗಿಸಿದರು. ಮೊಬೈಲ್ ಗಳನ್ನು ಕಳೆದುಕೊಂಡ ಸಾರ್ವಜನಿಕರಿಗೆ ಪುನಹ ಮೊಬೈಲ್ ತಮ್ಮ ಕೈ ಸೇರಿದ ತಕ್ಷಣ ಖುಷಿಯಾಗಿದ್ದಾರೆ. ನಗರ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರು ಅತ್ಯಂತ ಸಂತಸ ಪಟ್ಟು ಇಲಾಖೆ ಯನ್ನು ಕೊಂಡಾಡಿದರು.
ನಗರ ಠಾಣೆಯ ಪಿ.ಐ.ಪ್ರಕಾಶ್ ಮಾಳೆ ಮಾತನಾಡಿ, ಸಾರ್ವಜನಿಕರು ತಮ್ಮದು ಯಾವುದೇ ವಸ್ತು ಕಳವಾದಲ್ಲಿ ತಕ್ಷಣ ಇಲಾಖೆಗೆ ಬಂದು ದೂರನ್ನು ದಾಖಲಿಸಬೇಕು. ಜೊತೆಗೆ ಅಗತ್ಯ ದಾಖಲಾತಿಗಳನ್ನು ಸಹ ಹೊಂದಿರಬೇಕು. ಸಾರ್ವಜನಿಕರು ಯಾವತ್ತಿಗೂ ಕಾನೂನನ್ನು ಗೌರವಿಸಬೇಕು ಕಾನೂನು ಸಹ ಸಾರ್ವಜನಿಕರನ್ನು ಸದಾ ಗೌರವಿಸುತ್ತದೆ. ಪೊಲೀಸ ಇಲಾಖೆ ಅಂದರೆ ಭಯಪಡುವ ಅಗತ್ಯವಿಲ್ಲ. ಇದು ನಿಮ್ಮದೇ ಆದ ವಿಶ್ವಾಸನಿಯ ಇಲಾಖೆಯಾಗಿದ್ದು, ತಮ್ಮದು ಯಾವುದೇ ದೂರು ಇದ್ದರೂ ಸಹ ಬಂದು ಪ್ರೀತಿ ಸಹನೆಯಿಂದ ಹಂಚಿಕೊಳ್ಳಬಹುದು. ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಗಳಿಗೆ ಕುಂದು ಕೊರತೆಗಳಿಗೆ ಪರಿಹಾರ ಇದ್ದೇ ಇರುತ್ತದೆ, ತಮಗೆ ಅಗತ್ಯ ಎನಿಸಿದಲ್ಲಿ ನಗರ ಠಾಣೆಗೆ ಬಂದು ವಿಷಯಗಳನ್ನು ಚರ್ಚಿಸಬಹುದು ಎಂದು ಅವರು ಹೇಳಿದರು
ಈ ಸಂದರ್ಭದಲ್ಲಿ ನಗರ ಠಾಣೆಯ ಎ.ಎಸ್.ಐ. ಶಿವಶರಣಪ್ಪ, ಸಿಬ್ಬಂದಿಗಳಾದ ವಿಶ್ವನಾಥ, ಚಿರಚೀವಿ,ಮೈಲಾರಪ್ಪ, ಮಹೇಶ್,ಮರಿಶಾಂತಗೌಡ,ಗ್ಯಾನಪ್ಪ ಕುರಿ ಸೇರಿದಂತೆ ಇತರರು ಇದ್ದರು