Walking competition in Gangavathi by SarvaOgeena Development Struggle Committee.

ಗಂಗಾವತಿ :-16 –ಗಂಗಾವತಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ಮಾಧ್ಯಮ ಅಕಾಡೆಮಿ ಸದಸ್ಯ k ನಿಂಗಜ್ಜ, ಪತ್ರಕರ್ತ ರವಿಕುಮಾರ್, ಹಾಗೂ ವೆಂಕೋಬಣ್ಣ, ಮರಿಯಪ್ಪ, ನಾಗರಾಜ್ ಗೌಡ, ಉಜ್ಜನಗೌಡ ಮತ್ತಿತರ ಸಾರ್ವಜನಿಕರಿಗೆ ಸಂಘದ ಪದಾಧಿಕಾರಿಗಳಾದ ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನದಾಸ ಮತ್ತಿತರರೊಂದಿಗೆ ಸ್ಪರ್ಧೆಯ ಕರಪತ್ರ ವಿತರಿಸಿ ಮಾತನಾಡಿದ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಕಾಲೇಜು ಮೈದಾನದ ಅಭಿವೃದ್ಧಿಗೆ ಒತ್ತಾಯಿಸಲು, ವಾಕಿಂಗ್ ಗೆ ಪ್ರೆರೇಪಿಸಲು ಹಾಗೂ ಮನರಂಜನೆಗಾಗಿ ನಮ್ಮ ಸಂಘಟನೆಯು 40 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ವಾಕಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ.ಆಸಕ್ತರು ಇದೇ ತಿಂಗಳು 22 ರೊಳಗೆ ಜನ್ಮ ದಿನಾಂಕದ ಸಲುವಾಗಿ ಭಾವ ಚಿತ್ರಯುಳ್ಳ ಯಾವುದಾದರೂ ಒಂದು ಝರಾಕ್ಷ ಪ್ರತಿ ನೀಡಬೇಕು. ಸ್ಪರ್ಧೆಯ ದಿನಾಂಕ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನಂತರದಲ್ಲಿ ತಿಳಿಸಲಾಗುವುದು ಎಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.