International Women’s Day celebrated in Kotturu

ಕೊಟ್ಟೂರು ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಫ್.ಐ.ಡಬ್ಲುದ ಉಪಾಧ್ಯಕ್ಷರಾದ ಕಾ|| ವೈ.ಮಹಾದೇವಮ್ಮ ವಹಿಸಿ ಅವರು ಸಮಾಜದಲ್ಲಿನ ಮಹಿಳೆಯರ ಸ್ಥಿತಿಗತಿಗಳು ಮುಂದಿನ ವರ್ತಮಾನವನ್ನು ಹೇಗೆ ಎದುರುಗೊಳ್ಳಬೇಕೆಂದು ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾದ ವಿಶಾಲಾಕ್ಷಿ ಮೇಡಂ ಅವರು ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಅವರು ಅಪಮಾನಗಳನ್ನು ಎದುರಿಸಿ ಮೊಟ್ಟ ಮೊದಲಿಗೆ ಮಹಿಳೆಯರಿಗೆ ಶಿಕ್ಷಣ ನೀಡಿದರು. ಸಾವಿತ್ರಿ ಪುಲೆಯವರ ಹಾದಿಯಲ್ಲಿ ಅವರ ಮಾರ್ಗದರ್ಶನದಂತೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಂತೆ ಬಸವಣ್ಣನವರ ಸಮಾನತೆ ಗುಣಗಳನ್ನು ಅನುಸರಿಸಿ ನಡೆಯಬೇಕು. ಮಹಿಳೆಯರು ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಶಿಕ್ಷಣವಂತರಾಗಿ ಬಾಲ್ಯ ವಿವಾಹ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಮಹಿಳೆಯರ ಮೇಲೆ ಇರುವ ಕಪ್ಪು ಕಳಂಕಗಳನ್ನು ತೊಡೆದು ಹಾಕಬೇಕು ಸಮಾನತೆಯಿಂದ ಬಾಳಬೇಕು ಎಂಬುವುದು ಟಿಜಿiತಿ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ಸಮಾನತೆ ಸಾರುತ್ತದೆ ಎಂದು ಹೇಳಿದ್ದರು.
ಪ್ರಾಧ್ಯಾಪಕರಾದ ನಿರ್ಮಲ ಶಿವನ ಗುತ್ತಿ ಅವರು ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗಳು ಕೊನೆಯಾಗಬೇಕು ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು ಮಹಿಳೆಯರು ದುರ್ಬಲರಲ್ಲ ಅಬಲೆಯರಲ್ಲ, ಸಬಲರು ಆದರೆ, ಮಹಿಳೆಯರನ್ನು ಪುರುಷರು ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದಾರೆ. ಸಮಾನತೆಯ ಹಾದಿಯಲ್ಲಿ ಮಹಿಳೆಯರು ಸಾಗಬೇಕು. ಮಹಿಳೆಯರು ಯಾಕೆ? ಎನ್ನುವ ಮನೋಭಾವನೆಯನ್ನು ಕಿತ್ತು ಎಸೆಯಬೇಕು ಮಹಿಳೆ ಮತ್ತು ಪುರುಷ ಸಮಾನರು. ದಿನನಿತ್ಯ ಮಹಿಳೆಯರು ಮನೆಯಲ್ಲೇ ಮಾಡುವ ಕೆಲಸಕ್ಕೆ ಕೂಲಿ ಎಷ್ಟು ಕೊಟ್ಟರು ಸಾಲದು ಆ ಮಹಿಳೆಗೆ ಯೌವನದಲ್ಲಿ ತಂದೆ ತಾಯಿಯ ಮಾತು ಕೇಳಬೇಕು, ಮದುವೆ ಮದುವೆಯಾದ ನಂತರ ಗಂಡನ ಚೌಕಟ್ಟಿನಲ್ಲಿ ಬದುಕಬೇಕು. ಮಕ್ಕಳಾದ ಮೇಲೆ ಮಕ್ಕಳ ಹೇಳಿದ ಹಾಗೆ ಕೇಳಬೇಕು ಇದು ಪುರುಷ ಪ್ರಧಾನವಾದ ದೇಶ ಇಲ್ಲಿ ಮಾತೃ ಪ್ರಧಾನತೆಗೆ ಮಾನ್ಯತೆ ಇಲ್ಲ ಅದಕ್ಕಾಗಿ ಮಾತೃ ಪ್ರಧಾನಕ್ಕೆ ಸಮಾನತೆಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಗೌರವಿಸಬೇಕು ಎಂದು ನಿರ್ಮಲ ಮೇಡಂ ಮಾತನಾಡಿದರು.