Protest demanding an end to illegal middlemen in Kotayya Camp village, which falls under the jurisdiction of Hosakera Gram Panchayat.

ಗಂಗಾವತಿ: ಇಂದು ತಾಲೂಕಿನ ಹೊಸಕೇರಾ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂದೆ ಕೋಟಯ್ಯಕ್ಯಾಂಪಿನ ಗ್ರಾಮಸ್ಥರಿಂದ, ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದೆ. ಪ್ರತಿನಿತ್ಯ ರಾತ್ರಿ ಹೊತ್ತು ಓಡಾಡುವಾಗ ಮಹಿಳೆಯರು ಮಕ್ಕಳು ಇರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಹಾಗೂ ಗ್ರಾಮದಲ್ಲಿ ಡಬ್ಬಿ ಅಂಗಡಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಹೋಟೆಲ್‌ಗಳಲ್ಲಿ ಮಧ್ಯ ಮಾರಾಟ ದಂಧೆ ಅಕ್ರಮವಾಗಿ ನಡೆಯುತ್ತದೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊಸಕೇರಾ ಡಗ್ಗಿ, ಹೊಸಕೇರಾ ಕ್ಯಾಂಪ್, ಸವಳ ಕ್ಯಾಂಪ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ಹೆಚ್ಚಾಗಿ ನಡೆಯುತ್ತಿದೆ ಆದ್ದರಿಂದ ಇಂದು ಪ್ರತಿಭಟನೆ ಮೂಲಕ ಮಾನ್ಯ ತಸಿಲ್ದಾರರಿಗೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಮುಖಾಂತರ ಹೋರಾಟದ ಮೂಲಕ ಮನವಿ ಪತ್ರ ಸಲ್ಲಿಸಿ, ಆದಷ್ಟು ಬೇಗನೆ ನಮ್ಮ ಗ್ರಾಮಗಳಲ್ಲಿ ಮಧ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಮಹಿಳೆಯರು ಹಾಗೂ ಯುವಕರು ಗ್ರಾಮದ ಸಾರ್ವಜನಿಕರು ಒತ್ತಾಯಿಸಿ ಮಹಿಳೆಯರಿಗೆ ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕಿರಣ್‌ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀನಿವಾಸ್, ಶಿವಕುಮಾರ ಪಾಟೀಲ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ವಿರುಪಯ್ಯಸ್ವಾಮಿ, ದೊಡ್ಡಬಸವ, ಮಾರುತಿ, ಊರಿನ ಗ್ರಾಮಸ್ಥರಾದ ಈರಣ್ಣ, ಅವುಲ್, ದೇವಪ್ಪ, ಅಶೋಕ, ದುರಗಪ್ಪ, ಕುಮಾರ, ವಿಜಯ, ಈರಮ್ಮ, ಲಕ್ಷ್ಮೀ, ಲಕ್ಷ್ಮೀ ಹರಿಜನ, ಹುಲಿಗೆಮ್ಮ ಸೇರಿದಂತೆ ಇನ್ನು ಮುಂತಾದವರು ಮಹಿಳೆಯರು ಯುವಕರು ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿದರು.