Breaking News

ನಧಾಫ್ ಪಿಂಜಾರ್ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹ,,

Demand to provide basic facilities to Nadaf Pinjar communities,

ಜಾಹೀರಾತು
ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.

ಕಲ್ಯಾಣ ಸಿರಿ ವಾರ್ತೆ ಕೊಪ್ಪಳ.
ಕುಕನೂರು : ಪ್ರಸಕ್ತಸಾಲಿನ ಬಜೆಟ್ ನಲ್ಲಿ ನದಾಫ್ ಪಿಂಜಾರ ಸಮುದಾಯಗಳ ನಿಗಮ ಮಂಡಳಿಗೆ ಯಾವುದೇ ಅನುದಾನ ನೀಡದೇ ಇರುವುದು ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿರಾಜುದ್ದಿನ್ ಕೊಪ್ಪಳ ಹೇಳಿದರು.

ಅವರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ
ರಾಜ್ಯದಲ್ಲಿ ನದಾಫ್, ಪಿಂಜಾರ ಸಮುದಾಯದಲ್ಲಿ ಒಟ್ಟು 13 ಉಪಜಾತಿ ಸಮುದಾಯಗಳಿದ್ದು ಸುಮಾರು 25 ಲಕ್ಷ ಜನಸಂಖ್ಯೆ ಇದೆ, ನಮ್ಮ ಜನಾಂಗದವರ ಕುಲ ಕಸುಬು ಹತ್ತಿಯಿಂದ ಹಾಸಿಗೆ, ದಿಂಬು, ಹಗ್ಗ, ಕಣ್ಣಿ ಇತ್ಯಾದಿ ಉತ್ಪನ್ನಗಳನ್ನು ಮಾಡಿ ಜೀವನೋಪಾಯ ಮಾಡುತ್ತಿದ್ದೇವೆ. ನಮ್ಮ ಸಮಾಜದವರು ಅರೆ ಅಲೆಮಾರಿಗಳಾಗಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿರುತ್ತದೆ ಆದರೂ ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದರು.

ನಂತರ ಕುಕನೂರು ತಾಲೂಕಾಧ್ಯಕ್ಷ ದಸ್ತಗಿರಸಾಬ ರಾಜೂರ ಮಾತನಾಡಿ, ನಮ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜವೆಂದು ಸರ್ಕಾರ ಗುರುತಿಸಿ, 1993 ರಲ್ಲಿ ವೃತ್ತಿ ಆಧಾರದ ಮೇಲೆ ಪ್ರವರ್ಗ-1 ರಲ್ಲಿ ಮೀಸಲಾತಿಯನ್ನು ನೀಡಿತ್ತು. ಪ್ರವರ್ಗ-1 ರಲ್ಲಿ ಇತರೆ 117 ಜಾತಿಯವರೊಂದಿಗೆ ಶೇರ್ ಮಾಡಿ ಶೇ.4 ರ ಒಟ್ಟು ಮೀಸಲಾತಿಯಲ್ಲಿ ಸರಕಾರಿ ಹುದ್ದೆಗೆ ಆಯ್ಕೆಯಾಗುವುದು ಕಷ್ಟಸಾಧ್ಯವಾಗಿದ್ದು ನದಾಫ್, ಪಿಂಜಾರ ಜನಾಂಗದವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

2023 ರಲ್ಲಿ ಸರ್ಕಾರ ಹಿಂದುಳಿದ ವರ್ಗಗಳ ಪ್ರವರ್ಗ-1 ರ ನದಾಫ್, ಪಿಂಜಾರ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶವಾಗಿರುತ್ತದೆ. ಕಳೆದ 02 ವರ್ಷಗಳಿಂದ ಸಂಬಂಧಪಟ್ಟ ಸಚಿವರಿಗೆ ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದರು ಪ್ರಯೋಜನವಾಗಿಲ್ಲಾ ಎಂದರು.

2024 ರಲ್ಲಿ ಹಾಗೂ 18.02 2025 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ಮುಖಂಡರುಗಳೊಂದಿಗೆ ನಡೆದ ಸಭೆಯಲ್ಲಿ ಸಹ ಭಾಗಿಯಾಗಿ ವಿಷಯವನ್ನು ಪ್ರಸ್ತಾಪಿಸಲಾಗಿತ್ತು ಹಾಗೂ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತಾದರು ಪರಿಗಣಿಸದೇ ಯಾವುದೇ ಅನುದಾನ ನೀಡಿಲ್ಲಾ ಆದ್ದರಿಂದ ನಮ್ಮ ಸಮುದಾಯಗಳಿಗೆ ಮಾನ್ಯ ಮುಖ್ಯಮಂತ್ರಿಗಳು ನ್ಯಾಯ ದೊರಕಿಸಿಕೋಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮೂಲಕ ಗಮನ ಸೆಳೆಯಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಯಲಬುರ್ಗಾ ತಾಲೂಕಾಧ್ಯಕ್ಷ ಎಮ್.ಎಫ್ ನದಾಫ್, ಜಾಕೀರ್ ಹುಸೇನ್ ಕೊಪ್ಪಳ, ವಜೀರಸಾಬ ತಳಕಲ್, ಖಾಜಾಸಾಬ ನದಾಫ್, ಹುಸೇನ್ ಸಾಬ ನೂರಬಾಷಾ, ರಿಜ್ವಾನ ನದಾಫ್, ರಜಾಕ್ ಇಲಕಲ್, ಶಂಸದಾ ಬೇಗಂ, ರಜೀಯಾ ಬೇಗಂ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಹೊಸಕೇರಾ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿಬರುವಕೋಟಯ್ಯಕ್ಯಾಂಪ್ ಗ್ರಾಮದಲ್ಲಿ ಅಕ್ರಮ ಮಧ್ಯಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ.

Protest demanding an end to illegal middlemen in Kotayya Camp village, which falls under the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.