Breaking News

ಕಿನ್ನಾಳ ಕಾಮನಕಟ್ಟೆ ಗೆಳೆಯರ ಬಳಗದಿಂದ ಅದ್ಧೂರಿ ಹೋಳಿ ರಂಗೋತ್ಸವ.!


A grand Holi performance by Kinna’s Kamanakatte friends

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ. ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಾಮನಕಟ್ಟೆ ಗೆಳೆಯರ ಬಳಗದಿಂದ ಹೋಳಿ ಹಬ್ಬದ ನಿಮಿತ್ಯ ಅದ್ಧೂರಿ ರಂಗೋತ್ಸವ ಆಯೋಜನೆ ಮಾಡಿದರು.

ಕೆಡುಕನ್ನು ಸುಡುವ ಬಣ್ಣದ ಹಬ್ಬ, ಹೋಳಿಯ ಮಹತ್ವವೇನು? ಬಿಳಿ ಬಣ್ಣದ ಬಟ್ಟೆ ಧರಿಸುವುದು ಏಕೆ?

ಎಂದು ಕಾಮನಕಟ್ಟೆ ಗೆಳೆಯರ ಬಳಗದ ಅಧ್ಯಕ್ಷ ವಿರೇಶ ನಾಯಕ (ಸಿದ್ದಾರೋಡ) ಮಾತನಾಡಿ ಹೋಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು. ಇದನ್ನು ದೇಶಾದ್ಯಂತ ಬಹಳ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬ ಬಣ್ಣಗಳಿಂದ ಕೂಡಿರುವುದರಿಂದ ಎಲ್ಲರೂ ಪ್ರೀತಿಸುತ್ತಾರೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚು. ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ ಎಂದರು.

ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸಲಾಗುತ್ತದೆ.

ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದೊಂದಿಗೆ ಸಂಬಂಧವನ್ನು ಹೊಂದಿದೆ. ಈ ದಿನ ಜನರು ತಮ್ಮ ದುಃಖ, ನೋವುಗಳನ್ನು ಮರೆತು ಎಲ್ಲರೂ ಒಂದಾಗಿ ಬಣ್ಣಗಳಿಂದ ಹೋಳಿಯನ್ನು ಸಂಭ್ರಮಿಸುತ್ತಾರೆ.

ಹೋಳಿ ಹಬ್ಬವನ್ನು ಆಚರಿಸುವುದರಿಂದ ವಿವಿಧ ಭಯಗಳನ್ನು ದೂರ ಮಾಡಬಹುದು ಎಂಬ ನಂಬಿಕೆಯಿದೆ. ಹೋಳಿ ಹಬ್ಬದ ದಿನದಂದು ಬೆಳಿಗ್ಗೆ, ಜನರು ತೆರೆದ ಸ್ಥಳಗಳು, ಉದ್ಯಾನವನಗಳು ಮತ್ತು ಬೀದಿಗಳಲ್ಲಿ ಸ್ನೇಹಿತರನ್ನು, ಪ್ರೀತಿ ಪಾತ್ರರನ್ನು ಭೇಟಿ ಮಾಡುವ ಮೂಲಕ ಬಣ್ಣವನ್ನು ಎರಚಿಕೊಳ್ಳುತ್ತಾರೆ. ಹೋಳಿ ಹಬ್ಬದ ಪ್ರಮುಖ ಅಂಶವೆಂದರೆ ಅದು ಸೌಹಾರ್ದತೆಯಾಗಿದೆ. ಈ ದಿನದಂದು, ಎಲ್ಲಾ ವರ್ಗದ ಜನರು ಆಚರಣೆಗಳಲ್ಲಿ ಸೇರುವುದರಿಂದ ಸಾಮಾಜಿಕ ಅಡೆತಡೆಗಳು ದೂರಾಗುತ್ತದೆ ಎಂದು ಅದರ ಮಹತ್ವ ತಿಳಿಸಿದರು.

ಇದರಿಂದ ಪ್ರೀತಿಯು ಪರಸ್ಪರ ಹೆಚ್ಚಾಗುತ್ತದೆ. ಅಪರಿಚಿತರು ಸ್ನೇಹಿತರಾಗುತ್ತಾರೆ ಎಂದರು

ಈ ಸಂಧರ್ಭದಲ್ಲಿ ಕಾಮನಕಟ್ಟೆ ಗೆಳೆಯರ ಬಳಗದ ಪದಾಧಿಕಾರಿಗಳು ಉಪಾಧ್ಯಕ್ಷ ವೀರೇಶ್ ಪಾಂಡಪ್ಪ  ವಾಲ್ಮೀಕಿ ,ಸಚಿನ್ ಮೇಣದಾಳ , ರಾಜಶೇಖರ್, ವೀರೇಶ್ ದೇವಿ, ರೆಡ್ಡಿ ಪ್ರವೀಣ, ವಾಲ್ಮೀಕಿ ಸಂತೋಷ್, ಚಂಡಿ ಶಂಕರ್ ದೇವಿ, ಲಕ್ಷ್ಮಿಕಾಂತ್ ದೇವಿ, ನಾಗರಾಜ್ ಅರ್ತಿ, ಸಂತೋಷ್ ಅರೇರ್, ಪವನ್ ಆರೇರ್, ಪ್ರಶಾಂತ್ ಕುಲಕರ್ಣಿ, ಬಸವರಾಜ್ ಕುರಿ, ಅರುಣ್ ವಾಲ್ಮೀಕಿ, ನಾಗರಾಜ್ ಬಾಂಗಡಿ, ನಾಗರಾಜ್ ಗುಡ್ಲಾನೂರ್, ಮುತ್ತು ಬಂಕಾ, ಹಾಗೂ ಇತರರೆಲ್ಲರೂ ಉಪಸ್ಥಿತರಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.