People are in fear of their lives when leopards are seen in villages.

ವರದಿ:ಬಂಗಾರಪ್ಪ ಸಿ .
ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದ ಚಿರತೆ ಎನ್ನುವ ವಿಚಾರ ಮನೆಮಾತಾಗಿದೆ,ಈ ಚಿರತೆಯು ದಿನ ಬೆಳಗಾದರೆ ಸಾಕು ನಮ್ಮ ಊರುಗಳಿಗೆ ಬಂದು ಠಿಕಾಣಿ ಹುಡುತ್ತಿದ್ದು ಸರ್ಕಾರದಿಂದ ಸಂಬಳ ಪಡೆಯುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಲೊಕ್ಕನಹಳ್ಳಿ ಗ್ರಾಮದ ಮಹಾಲಿಂಗಂ ಎಂಬುವರಿಗೆ ಸೇರಿದ ಎರಡು ಹಸುಗಳನ್ನು ಕೊಂದು ತಿಂದು ಹೋಗಿದ್ದ ಚಿರತೆ, ಹತ್ತು ದಿನಗಳ ಹಿಂದೆ ಕಂಡಯ್ಯನ ಪಾಳ್ಯ ಗ್ರಾಮಕ್ಕೆ ಹೊಂದಿಕೊಂಡಿರುವ ತೋಟದಲ್ಲಿ ಕೃಷ್ಣ ಎಂಬವರಿಗೆ ಸೇರಿದ ಒಂದು ಹಸುವನ್ನು ಕೊಂದು ತಿಂದು ಹೋಗಿತ್ತು ಈ ಎರಡು ಸಂಗತಿಗಳು ಮಾಸುವ ಮೊದಲೇ ಕಳೆದ ನಾಲ್ಕು ದಿನಗಳ ಹಿಂದೆ ಲೊಕ್ಕನಹಳ್ಳಿ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಚಿರಂಜೀವಿ ಎಂಬುವವರು ತನ್ನ ಮಗನೊಂದಿಗೆ ಸಂಜೆ ಹಾಲು ಕರೆಯುತ್ತಿದ್ದ ಸಮಯದಲ್ಲಿ ಚಿರತೆಯೊಂದು ಅವರ ಮಗನನ್ನು ದಾಟಿಕೊಂಡು ಅವರು ಸಾಕುತ್ತಿದ್ದ ಒಂದು ನಾಯಿಯನ್ನು ಅವರ ಕಣ್ಣೆದುರೇ ಎತ್ತಿಕೊಂಡು ಹೋಯಿತು, ಅವರ ಎದೆಯಲ್ಲಿ ಇದ್ದ ಭಯ ಹೋಗುವುದಕ್ಕೆ ಮೊದಲೇ ಅಂದರೆ ಮಾರನೆಯ ದಿನವೇ ಅವರಿಗೆ ಸೇರಿದ ಒಂದು ಹಸುವನ್ನು ಕೊಂದು ಒಂದು ಹಸುವಿನ ಕರುವನ್ನು ಎಳೆದುಕೊಂಡು ಹೋಗಿ ಅರಣ್ಯದಲ್ಲಿ ಕೊಂದು ಅರ್ಧಂಬರ್ಧ ತಿಂದು ಹೋಗಿತ್ತು. ಈ ಮೂರು ಪ್ರಕರಣಗಳಲ್ಲಿ ಅರಣ್ಯ ಇಲಾಖೆಯವರಿಗೆ ವಿಚಾರ ಮುಟ್ಟಿಸಿದಾಗ ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಚಿರತೆಯನ್ನು ಹಿಡಿಯುತ್ತೇವೆ ಎಂದು ಒಂದು ಬೋನನ್ನು ಇಟ್ಟು ಫೋಟೋವನ್ನು ತೆಗೆದುಕೊಂಡು ತೆರಳುತ್ತಿದ್ದರು, ಇದನ್ನು ಹೊರತುಪಡಿಸಿ ಅವರೇನು ಮಾಡಲಿಲ್ಲ , ಕಳೆದ ಎರಡು ಮೂರು ದಿನಗಳಿಂದ ಲೊಕ್ಕನಹಳ್ಳಿ ಸರ್ಕಾರಿ ಆಸ್ಪತ್ರೆ ಸಮೀಪ ಹಾಗೂ ಲೊಕ್ಕನಹಳ್ಳಿ ವೈನ್ ಸ್ಟೋರ್ ಸಮೀಪ ಸಂಜೆಯ ವೇಳೆ ಚಿರತೆಯು ಸಂಚರಿಸುತ್ತಿರುವುದನ್ನು ಸಾರ್ವಜನಿಕರು ಹಾಗೂ ತೋಟದ ನಿವಾಸಿಗಳು ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಅರಣ್ಯ ಇಲಾಖೆಯವರು ಯಾವುದೇ ಕ್ರಮವನ್ನು ಜರಗಿಸಲಿಲ್ಲ ಅದುದ್ದರಿಂದ ಇಡೀ ಲೊಕ್ಕನಹಳ್ಳಿ ಗ್ರಾಮವೇ ಚಿರತೆಯ ಭಯದಿಂದ ಸಂಜೆ 7, 8 ಗಂಟೆ ಒಳಗೆ ಎಲ್ಲರೂ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ. ಆದುದ್ದರಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ಆದಷ್ಟು ಬೇಗ ಹಿಡಿಯಬೇಕು ಇಲ್ಲದಿದ್ದರೆ ಒಂದು ಎರಡು ದಿನಗಳ ಒಳಗಾಗಿ ಲೊಕ್ಕನಹಳ್ಳಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಲೊಕ್ಕನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದರು .