Breaking News

ರಾಜ್ಯದ ಹಲವಡೆ ಕಳ್ಳತನ ಮಾಡುತ್ತಿದ್ದ ಕಳ್ಳರ ಸೆರೆ ಹಿಡಿಯುವಲ್ಲಿತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ. ಯಶಸ್ವಿ.

In arresting many thieves who were stealing in the state Tipatur Rural Police Station. Successful.

ಜಾಹೀರಾತು

ವರದಿ ಮಂಜು ಗುರುಗದಹಳ್ಳಿ.

ತಿಪಟೂರು ಸೇರಿದಂತೆ ರಾಜ್ಯದ ಹಲವಡೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನ ಹಾಕಿ ಮನೆಗಳಲ್ಲಿರುವಚಿನ್ನಾಭರಣ, ಬೆಳ್ಳಿ ನಗದು ಹಣ, ಇತರೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು, ಸದರಿ ಆಸಾಮಿಯು ಒಂಟಿ ಮನೆ, ತೋಟದಮನೆಗಳನ್ನು ತನ್ನ ಬೈಕ್‌ ನಂ KA 13 X 3793ರಲ್ಲಿ ಓಡಾಡಿಕೊಂಡು ಗುರ್ತಿಸಿ ಕಳ್ಳತನ ಮಾಡುತ್ತಿರುತ್ತಾನೆ.
ಆರೋಪಿತನ,ವಿರುದ್ದ ಈಗಾಗಲೇ ಹಾಸನ ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ,ಪ್ರಕರಣಗಳು ದಾಖಲಾಗಿರುತ್ತವೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣಗಳನ್ನು ಪತ್ತೆ ಮಾಡಲು ತಂಡವನ್ನು ರಚನೆ ಮಾಡಿದ್ದು, ಅದರಂತೆ ಕಾರ್ಯ ಪ್ರವೃತ್ತರಾದ ತಂಡವು ಸಂತೋಷ @ ರಂಗೇಗೌಡ ಎಂ, ಎ@ ಐಪಿಎಲ್ ಸಂತು ! ಮುದಿಗೆರೆ ಸಂತು ಬಿನ್ ವೆಂಕಟೇಶ್‌, ಸುಮಾರು 38 ವರ್ಷ, ಜಿರಾಯ್ತಿ, ಮುದಿಗೆರೆ,ದೊಡ್ಡಕನಗಲ ಪೋಸ್ಟ್, ಕಸಬಾ ಹೋಬಳಿ, ಆಲೂರು ತಾಲ್ಲೋಕ್, ಹಾಸನ ಜಿಲ್ಲೆ ರವರನ್ನು ಬಂಧಿಸಿರುತ್ತೆ.ಈತನ ದಸ್ತಗಿರಿಯಿಂದ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೊ. ನಂ. 44/2023 ಕಲಂ: 454, 380,ಐಪಿಸಿ ಮತ್ತು ಮೊ.ನಂ. 34/2024 ಕಲಂ: 454, 380 ಐಪಿಸಿ ಕೇಸಿನಲ್ಲಿ ಕಳ್ಳತನವಾದ ಮಾಲುಗಳು ಪತ್ತೆಯಾಗಿದ್ದು, ಕಳವು,ಮಾಡಿದ 127ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿರುತ್ತೆ. ಇದರ ಅಂದಾಜು ಮೌಲ್ಯ ಸುಮಾರು 900000/-ರೂಪಾಯಿ
ಆಗಿರುತ್ತೆ.ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಶೋಕ್.ಕೆ.ವಿ ರವರ ಮಾರ್ಗದರ್ಶನದಲ್ಲಿ, ತುಮಕೂರು.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ,ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್,ನೇತೃತ್ವದಲ್ಲಿದಲ್ಲಿ, ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿನಾಯಕ ಎನ್ ಶೆಟ್ಟಿಗೇರಿ ರವರ
ಮಾರ್ಗಸೂಚನೆ ಮೇರೆಗೆ ತಿಪಟೂರು ಗ್ರಾಮಾಂತರ ಠಾಣಾ ಇನ್ಸೆಕ್ಟರ್ ರವಿ.ಕೆ. ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಸಬ್‌ ಇನ್ಸೆಕ್ಟರ್ ನಾಗರಾಜು.ಐ.ಡಿ, ಸಿಬ್ಬಂದಿಯವರಾದ ಹನುಮಂತ ಕಮಕೇರಿ, ಶರತ್ ಎನ್.ಜೆ, ಚೇತನ್ ಕುಮಾರ್ ಜಿ.ಈ,ಇಮ್ರಾನ್ ಕೆ.ಆರ್, ಜೀಪ್ ಚಾಲಕ ಜೀವನ್ ಮತ್ತು ಮಲ್ಲಿಕಾರ್ಜುನ ಎಂ.ಆರ್. ರವರು ಆರೋಪಿತನನ್ನು ಬಂಧಿಸುವಲ್ಲಿಯಶಸ್ವಿಯಾಗಿರುತ್ತಾರೆ. ಸದರಿ ಪತ್ತೆ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರುಪ್ರಶಂಸಿರುತ್ತಾರೆ

ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಡಾಕ್ಟರ್ ಕ್ಯಾಂಪ್‌ನ ರವಿ ಅವರಿಗೆ ಡಾಕ್ಟರೇಟ್ ಪದವಿ

Ravi from Doctor Camp receives his doctorate degree ಗಂಗಾವತಿ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.