Samanta Samavesh” Preparatory meeting, site inspection by officials and discussion about preparation

“ಸಮಾನತಾ ಸಮಾವೇಶ ” ಪೂರ್ವಸಿದ್ಧತಾ ಸಭೆ ಇಂದು ದಿನಾಂಕ 19/02/2025ರಂದು ಬಿಜೆಡಿಬಿ ಬಸವಕಲ್ಯಾಣದಲ್ಲಿ ಜರುಗಿತ್ತು, ತಾಲೂಕಾ ಅಧಿಕಾರಿಗಳಿಂದ ಸ್ಥಳ ವೀಕ್ಷಣೆ ಹಾಗೂ ಸಿದ್ಧತೆ ಬಗ್ಗೆ ಚರ್ಚೆ ಮಾಡಿದರು:
ದಿನಾಂಕ 21-22-23ರಂದು ಪೂಜ್ಯ ಡಾ ಸಿದ್ದರಾಮ ಶರಣರು ಬೆಲ್ದಾಳ ಅವರ ನೇತೃತ್ವದಲ್ಲಿ ಜರುಗುತ್ತಿರುವ ” ಅನುಭವ ಮಂಟಪ ಸಂಸತ್ತು 7ನೇ ಅಧಿವೇಶನ” ಮತ್ತು ದಿನಾಂಕ 23ರಂದು ಸಮಾನತಾ ಸಮಾವೇಶ ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣದಲ್ಲಿ ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು, ಸನ್ಮಾನ್ಯ ಡಾ ಹೆಚ್ ಸಿ ಮಹದೇವಪ್ಪ ಮಾನ್ಯ ಸಮಾಜ ಕಲ್ಯಾಣ ಸಚಿವರು, ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಮತ್ತು ಪರಿಸರ ವನ್ಯಜೀವಿ ಸಚಿವರು, ಸನ್ಮಾನ್ಯ ಶ್ರೀ ರಹೀಮಖಾನ ಪೌರಾಡಳಿತ ಸಚಿವರು ಆಗಮಿಸುತ್ತಿದ್ದಾರೆ.
ಆದರಿಂದ ಐದು ಸಚಿವರು ನಗರಕ್ಕೆ ಒಂದೇ ಬರುತ್ತಿದ್ದರಿಂದ ವಿವಿಧ ಇಲಾಖೆಯವರು ಕಾರ್ಯಕ್ರಮದ ಸಿದ್ಧತೆ ಬಗ್ಗೆ ಚರ್ಚೆ ಮಾಡಿದರು, ಸಲಹೆ ಮಾರ್ಗದರ್ಶನ ನೀಡಿದ್ದರು. ತಹಶೀಲ್ದಾರ ಬಸವಕಲ್ಯಾಣ ಶ್ರೀ ದತ್ತಾತ್ರಿ ಗಾದಾ ಮತ್ತು ಹುಲುಸೂರ ಶ್ರೀ ಶಿವಾನಂದ ಮೆತ್ರೆ, ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ರಮೇಶ ಸೂಲ್ಪಿ,ಸಮಾಜ ಕಲ್ಯಾಣ ಅಧಿಕಾರಿ ಶ್ರೀ ದಿಲಿಪಕುಮಾರ , ಹಿಂದುಳಿದ ವರ್ಗಗಳ ಅಧಿಕಾರಿ ಶ್ರೀ ಹಿರೇಗೌಡರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀ ಧನರಾಜ, ತಾಲೂಕಾ ಆರೋಗ್ಯ ಅಧಿಕಾರಿ ಡಾ ಅಶೋಕ ಮೈಲಾರೆ , ಪೊಲೀಸ್ ವೃತ್ತ ನಿರೀಕ್ಷಕ ಶ್ರೀ ಅಲಿಸಾಬ, ತಾಲೂಕಾ ತೋಟಗಾರಿಕೆ ಅಧಿಕಾರಿ ಶ್ರೀಮತಿ ವಿಜಯತಾ, ತಾಲೂಕಾ ಅರಣ್ಯ ಅಧಿಕಾರಿ ಶ್ರೀ ಮಹೇಂದ್ರಕುಮಾರ ಮತ್ತು ಪ್ರೇಮಕುಮಾರ, ತಾಲೂಕಾ ಪಶುವೈದ್ಯಕೀಯ ಅಧಿಕಾರಿ ಶ್ರೀ ರವೀಂದ್ರನಾಥ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಕಾಂತ ಸ್ವಾಮಿ, ಪ್ರಧಾನ ಕಾರ್ಯದರ್ಶಿ, ಸ್ವಾಗತ ಸಮಿತಿ ಬಸವಕಲ್ಯಾಣ.