Breaking News

ಗೃಹರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನಿಯೋಜಿಸಲು ಒತ್ತಾಯ: ಪಾವಗಡ ಶ್ರೀರಾಮ್

Forced to assign full-time duty to home guards: Pavagada Sriram

ಜಾಹೀರಾತು
ಜಾಹೀರಾತು

ಗಂಗಾವತಿ: ರಾಜ್ಯದಲ್ಲಿ ೨೧೩೨೭ ಪುರುಷ ಗೃಹರಕ್ಷಕರು ಹಾಗೂ ೪೫೫೫ ಮಹಿಳಾ ಗೃಹರಕ್ಷಕರು ಸೇರಿ ಒಟ್ಟು ೨೫೮೮೨ ಗೃಹರಕ್ಷಕರು ೪೨೬ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ರಾಜ್ಯ ಮತ್ತು ಹೊರ ರಾಜ್ಯ ಚುನಾವಣೆ ಕರ್ತವ್ಯ, ತುರ್ತು ಸರ್ಕಾರಿ ಕಾರ್ಯಕ್ರಮಗಳು, ರಾಷ್ಟಿçÃಯ ಮತ್ತು ನಾಡಹಬ್ಬ, ಗಣಪತಿ ಹಬ್ಬ, ದಸರಾ ಮತ್ತು ಜಾತ್ರೆಗಳ ಬಂದೋಬಸ್ತು ಸೇರಿ ವರ್ಷದಲ್ಲಿ ಒಟ್ಟು ಮೂರು ತಿಂಗಳು ಮಾತ್ರ ಕರ್ತವ್ಯ ಸಿಗುತ್ತಿದ್ದು, ಉಳಿದ ೯ ತಿಂಗಳು ಗೃಹರಕ್ಷಕರ ಜೀವನ ಚಿಂತಾಜನಕವಾಗಿರುತ್ತದೆ ಎಂದು ಲೇಬರ್ ರೈಟ್ ಫೋರಂ (ರಿ) ಗೃಹರಕ್ಷಕರ ಪೋಷಕರ ಹಕ್ಕು ಸರಂಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಪಾವಗಡ ಶ್ರೀರಾಮ್ ಕಳವಳ ವ್ಯಕ್ತಪಡಿಸಿದರು.
ಅವರು ಫೆಬ್ರವರಿ-೧೫ ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಗೃಹರಕ್ಷಕರು ಹಾಗೂ ಪೋಷರ ಸಭೆ ನಡೆಸಿ ಮಾತನಾಡಿದರು. ಗೃಹರಕ್ಷಕರ ಅತಂತ್ರ ಕೆಲಸದಿಂದ ಗೃಹರಕ್ಷಕರಿಗೆ ಮದುವೆಯಾಗಲು ಯಾರು ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಸಾವಿರಾರು ಗೃಹರಕ್ಷಕರು ಮದುವೆಯಾಗದೆ ಉಳಿದಿದ್ದು, ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್ ಸೇರಿದಂತೆ ಉನ್ನತ ಶಿಕ್ಷಣ ಪಡೆದ ೫೦೦೦ ಕ್ಕೂ ಹೆಚ್ಚು ಗೃಹರಕ್ಷಕರು ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಸರ್ಕಾರ ವರ್ಷದ ೩೬೫ ದಿನಗಳ ಕೆಲಸ ನಿಯೋಜಿಸಿ, ಇವರಿಗೆ ಭದ್ರತೆ ನೀಡಬೇಕು. ಸರ್ಕಾರ ನಿರ್ಲಕ್ಷಿಸಿದಲ್ಲಿ ಲೇಬರ್ ರೈಟ್ ಫೋರಂ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಗೃಹರಕ್ಷಕರ ಪೋಷಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಿ. ರಾಮಪ್ಪ ಮಾತನಾಡಿ, ಗೃಹರಕ್ಷಕ ಕುಟುಂಬಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದ್ದು, ಅವರು ಕೆಲಸ ಇಲ್ಲದೇ ತಂದೆ ತಾಯಿಯನ್ನು ಪೋಷಣೆ ಮಾಡುವುದಿರಲಿ, ಔಷಧಿ ಕೊಡಿಸಲು ಹಣವಿಲ್ಲದೆ ತೊಂದರೆಯಲ್ಲಿ ಇದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಬೇರೆ ಕೆಲಸ ಮಾಡಲು ಸಾಧ್ಯವಾಗದೆ ಈ ಕೆಲಸ ಬಿಡಲು ಮನಸ್ಸು ಒಪ್ಪದೇ ಅವರ ಕುಟುಂಬಗಳು ಬೀದಿಗೆ ಬರುವ ಪರಸ್ಥಿತಿ ಇದೆ. ಕರ್ನಾಟಕ ಘನ ಸರ್ಕಾರ ಕೂಡಲೇ ಆಂಧ್ರ ಮತ್ತು ತೆಲಂಗಾಣ ಹಾಗೂ ಇತರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ಕರ್ನಾಟಕದಲ್ಲೂ ಕೂಡ ಗೃಹರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡುವುದರ ಮೂಲಕ ಅವರ ಸೇವೆಗೆ ಭದ್ರತೆ ಒದಗಿಸಲು ಸರ್ಕಾರ ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ಮೀರಾಸಾಬ್, ತಿಮ್ಮಣ್ಣ, ಸಂಗಪ್ಪ, ಸಂಜಯಕುಮಾರ, ಎಸ್. ಚಂದ್ರಪ್ಪ, ಗಿರಿಮಲ್ಲ, ಮೌನ, ರಾಮಲಿಂಗಪ್ಪ, ಗೋಪಾಲಶಾಸ್ತಿç, ಅಶೋಕ್ ಕುರುಗೋಡ ನಾಗರಾಜ, ಕಂಚಿ ಮಲ್ಲಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

About Mallikarjun

Check Also

ಬಸಾಪಟ್ಟಣ :ಮಕ್ಕಳ ನಾಯಕತ್ವ ಶಿಬಿರ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಗಾರ

Basapatna: Children’s leadership camp and SSLC students’ result improvement workshop ” ಭಾರತ್ ಸೇವಾದಳದ ವತಿಯಿಂದ ಕೊಪ್ಪಳ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.