Breaking News

ಕಾರ್ಖಾನೆಗಳಿಂದ ಬಾಧಿತವಾದಪ್ರದೇಶಗಳಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆಕೊಪ್ಪಳಕ್ಕೆ ಕಾರ್ಖಾನೆಗಳಿಂದ ಲಾಭವೇ ಇಲ್ಲ, ನಷ್ಟವೇ ಎಲ್ಲಾ : ಅಲ್ಲಮಪ್ರಭು

Awareness drive in areas affected by factories Koppal has no profit from factories, only loss: Allama Prabhu

ಜಾಹೀರಾತು

ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಆರಂಭಿಸಿರುವ ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ ಜನಾಂದೋಲನದ ಭಾಗವಾಗಿ ಜನಜಾಗೃತಿ ಕಾರ್ಯಕ್ರಮಕ್ಕೆ ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು, ನಮ್ಮಲ್ಲಿ ಈಗಿರುವ ಕಾರ್ಖಾನೆಗಳಿಂದ ಧೂಳೂ, ವಿಷ ಮತ್ತು ಪರಿಸರ ಮಾಲಿನ್ಯವನ್ನು ಎದುರಿಸಿದ್ದೇವೆ ಹೊರತು ನಮಗೆ ಯಾವುದೇ ಪ್ರಯೋಜನವಾಗಿಲ್ಲ, ಅವುಗಳಿಂದ ಲಾಭಕ್ಕಿಂತ ನಷ್ಟವನ್ನೇ ಜನರು ಅಮನುಭವಿಸಿದ್ದಾರೆ, ಇದರ ಮೇಲೆ ಬೆಂಕಿಗೆ ತುಪ್ಪು ಸುರಿದ ಹಾಗೆ ಹೊಸ ಕಾರ್ಖಾನೆ ನಮ್ಮನ್ನು ಸಂಪೂರ್ಣವಾಗಿ ಸುಡಲು ಬರುತ್ತಿರುವದು ದುರಂತವೇ ಸರಿ. ಯಾವುದೇ ಕಾರಣಕ್ಕೂ ಅದನ್ನು ಆಗಲು ಬಿಡುವದಿಲ್ಲ ಜನರು ಎಚ್ಚರಗೊಳ್ಳಬೇಕು ಎಂದು ಕರೆ ನೀಡಿದರು.
ಸಿಂಧನೂರಿನ ಪ್ರಗತಿಪರ ಹೋರಾಟಗಾರ ಎಚ್.ಎನ್. ಬಡಿಗೇರ್ ಮಾತನಾಡಿ, ಇಲ್ಲಿನ ಜನ ಜಾನುವಾರುಗಳು, ಕೃಷಿ, ಜನಜೀವನವನ್ನೇ ಹಾಳು ಮಾಡಿರುವ ಇಲ್ಲಿನ ಕಾರ್ಖಾನೆಗಳು ಅವೈಜ್ಞಾನಿಕವಾಗಿ ಒಂದೇ ಕಡೆಗೆ ಬೀಡುಬಿಟ್ಟು ಇಲ್ಲಿನ ಪರಿಸರ ಹಾಳು ಮಾಡಿರುವದರಿಂದ ತೀವ್ರ ಸ್ವರೂಪದ ಹೋರಾಟ ಬೇಕಿದೆ, ಅದಕ್ಕಾಗಿ ಈ ಆಂದೋಲನದ ಭಾಗವಾಗಿ ಬಂದಿದ್ದೇವೆ ಜನ ಸಹಕಾರ ಕೊಡಬೇಕು ಎಂದರು.
ಯುವ ಮುಖಂಡ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಇಲ್ಲಿನ ಕಾರ್ಖಾನೆಗಳಿಂದ ಜನ ರೋಗಗಳನ್ನು ಪಡೆದಿದ್ದಾರೆ, ಆಹಾರವೇ ವಿಷವಾಗಿ ಆಯುಷ್ಯವೇ ಅರ್ಧಕ್ಕೆ ಬಂದಿರುವದು ದುರಾದೃಷ್ಟಕರಥಿಲ್ಲಿ ಕಾರ್ಖಾನೆಗಳು ಬಂದರೂ ಕೆಲಸ ಇಲ್ಲಿಯ ಜನರಿಗೆ ಸಿಗುವದಿಲ್ಲ, ಕಮ್ಮಿ ಸಂಬಳಕ್ಕೆ ಕೆಲಸ ಮಾಡುವ ಉತ್ತರದ ಜನರನ್ನು ಕರೆ ತರುತ್ತಾರೆ, ಅವರು ಬರುವಾಗಿ ಇಲ್ಲಿಗೆ ಹಲವು ರೋಗಗಳನ್ನು ಹರಡುತ್ತಿದ್ದಾರೆ, ಅದರಲ್ಲಿ ಕುಷ್ಠರೋಗ, ಚರ್ಮ ರೋಗ ಮತ್ತು ಏಡ್ಸ್ ಅಂತಹ ಭಯಾನಕ ಕಾಯಿಲೆಗಳು ಸಹ ಸೇರಿವೆ. ಇಲ್ಲಿನ ಉಷ್ಣಾಂಶವೂ ಸಹ ಹೆಚ್ಚಾಗಿದೆ, ಆದ್ದರಿಂದ ಈಗಲೇ ತಡವಾಗಿದ್ದು ಇನ್ನೂ ತಡವಾಗಬಾರದು ಫೆ. ೨೪ ರಂದು ಕೊಪ್ಪಳ ಭಾಗ್ಯನಗರ ಬಂದ್ ಕರೆಯಲ್ಲಿ ಎಲ್ಲರೂ ಭಾಗವಹಿಸಿಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯ ಅಧ್ಯಕ್ಷ ಡಿ.ಹೆಚ್.ಪೂಜಾರ್, ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಮುಖಂಡ ಮಂಗಳೇಶ್ ರಾಥೋಡ್ ಮಾತನಾಡಿದರು.
ಕರ್ನಾಟಕ ರೈತ ಸಂಘದ ಮುಖಂಡ ಮೂಕಪ್ಪ ಮೇಸ್ತಿç, ಪ್ರಗತಿಪರ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ತಿಮ್ಮಣ್ಣ ಕನಕಗಿರಿ, ಎಐಯುಟಿಯುಸಿ ಶರಣು ಗಡ್ಡಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಟಿ.ಯು.ಸಿ.ಐ. ರಾಯಚೂರು ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ, ದಲಿತ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಸುಂಕಪ್ಪ ಮೀಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ರಮೇಶ್ ಬೇಳೂರು, ಕರ್ನಾಟಕ ರೈತ ಸಂಘದ ಸಿಂಧನೂರು ತಾಲೂಕಾ ಅಧ್ಯಕ್ಷ ರಮೇಶ್ ಪಾಟೀಲ್ ಬೇರಗಿ, ಭಾರತೀಯ ಭೀಮ ಸೇನೆಯ ಜಿಲ್ಲಾ ಅಧ್ಯಕ್ಷ ಕಾಶಪ್ಪ ಚಲವಾದಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಅಧ್ಯಕ್ಷ ರಾಘು ಚಾಕರಿ, ಮುಖಂಡ ಮಂಜುನಾಥ ದೊಡ್ಡಮನಿ ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

ಜಂಬೂರ್ ಬಸಮ್ಮನವರಿಗೆ ಶತಮಾನೋತ್ಸವದ ಸಂಭ್ರಮ

Centenary celebrations for Jambur Bassam ಕೊಟ್ಟರು,: ಇತ್ತೀಚೆಗೆ ಮನುಷ್ಯನ ಒತ್ತಡದ ಕಾರಣಕ್ಕಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.