Breaking News

ಶಾಮಿದ್ ಮನಿಯಾರ್ ವತಿಯಿಂದ ಯುವ ಕಾಂಗ್ರೆಸ್ ಚನಾವಣೆಯಲ್ಲಿ ಜಯಗಳಿಸಿದ ಯುವಕರಿಗೆ ಸನ್ಮಾನ

On behalf of Shamid Maniar, honoring the youth who won the Youth Congress elections

ಜಾಹೀರಾತು
ಜಾಹೀರಾತು

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಯುವಕರು

ಗಂಗಾವತಿ ವಿಧಾನಸಭಾ ಕ್ಷೇತ್ರದ ಯುವಕರಿಗೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಾಮಿದ್ ಮನಿಯರ್ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಶಾಮಿದ್ ಮನಿಯರ್ ಅವರು ಮಾತನಾಡಿ ಜಯಗಳಿಸಿದ ಯುವಕರಿಗೆ ಅವರಿಗೆ ಸನ್ಮಾನ ಮಾಡಿ ಮಾಜಿ ಸಚಿವರು ಶಾಸಕರಾಗಿರಲಿ ಯಾರ ಬೆಂಬಲವಿಲ್ಲದೆ ಸ್ವಂತ ಬಲದಿಂದ ಆರಿಸಿ ಬಂದಂತ ನಿಮ್ಮೆಲ್ಲರಿಗೆ ಅಭಿನಂದನೆಗಳು ತಿಳಿಸಿದರು. ಯುವ ಕಾಂಗ್ರೆಸ್ ಸದಸ್ಯರು ಯಾರ ಮಾತಿಗೂ ಕಿವಿಗೊಡದೆ ಇಷ್ಟೊಂದು ಮತಗಳನ್ನು ನೀಡಿದ್ದಾರೆ ಅವರೆಲ್ಲ ಆಶಯದಂತೆ ನಿಮ್ಮ ಕೆಲಸವನ್ನು ಮಾಡಿ ತೋರಿಸಿ ಪಕ್ಷವನ್ನು ಕಟ್ಟುವ ಮತ್ತು ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುವ ನಿಮ್ಮ ಕಾರ್ಯವನ್ನು ಪ್ರಾರಂಭಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಯ್ಯೂಬ್ ಖಾನ್ ಅವರು ಮಾತನಾಡಿ ಜಯಗಳಿಸಿದ ಯುವಕರನ್ನು ಅಭಿನಂದಿಸಿ ಎಲ್ಲರೂ ಒಗ್ಗೂಡಿ ಪಕ್ಷವನ್ನು ಕಟ್ಟಿ ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ಹೇಳಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದಂತಹ ಶ್ರೀ ಆಸೀಫ್ ಹುಸೇನ್ ಅವರು ಮಾತನಾಡಿ ಜಯಗಳಿಸುವ ಎಲ್ಲರಿಗೂ ಅಭಿನಂದನೆಗಳು ತಿಳಿಸುತ್ತಾ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಮತ್ತು ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಪಕ್ಷ ಬಲವರ್ಧನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ನನ್ನ ಕರ್ತವ್ಯ ಮತ್ತು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಹಾಗೂ ಜನರ ಕಷ್ಟವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಅದೇ ರೀತಿ ಕೊಪ್ಪಳ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗೇಶ್ ಕಲ್ಗುಡಿಯವರು ಮಾತನಾಡಿ ಬೆಂಬಲಿಸದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದರು ಇದೇ ಸಂದರ್ಭದಲ್ಲಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಾಹಿಲ್ ಅಲಿ ಮತ್ತು ಖಲಂದರ್ ಅದೇ ರೀತಿ ಗಂಗಾವತಿಯ ವಿಧಾನಸಭಾ ಕ್ಷೇತ್ರಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಅದ್ನಾನ್ ಮತ್ತು ಬ್ಲಾಕ್ ಉಪಾಧ್ಯಕ್ಷರಾಗಿ ಆಯ್ಕೆಯಾದ ದೇವರಾಜ್ ಅವರು ಇನ್ನು ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ಗ್ರಾಮಗಳಲ್ಲಿ ಪ್ರತ್ಯಕ್ಷವಾದ ಚಿರತೆಗಳು ಪ್ರಾಣ ಭಯದಲ್ಲಿರುವ ಜನರು

People are in fear of their lives when leopards are seen in villages. ವರದಿ:ಬಂಗಾರಪ್ಪ ಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.