Breaking News

ಮಕ್ಕಳು ಶಾಲೆಗೆ ತಡವಾಗಿ ಬಂದ್ದಿದ್ದಕ್ಕೆ ಶಾಂತಿನಿಕೇತನ ಶಾಲೆಯಿಂದಮಕ್ಕಳನ್ನು ಗೇಟ್‌ನಿಂದಹೊರಹಾಕಲು ಮುಂದಾಗಿದ್ದು ಖಂಡನೀಯ:ಬಸವರಾಜ ಕೆ.

From school in Santiniketan because the children came late to school Attempting to throw children out of the gate is condemnable: Basavaraja K.

ಜಾಹೀರಾತು
ಜಾಹೀರಾತು

ಗಂಗಾವತಿ: ಫೆಬ್ರವರಿ-೮ ಶನಿವಾರ ಬೆಳಗಿನ ಸಮಯ ಮಕ್ಕಳು ಶಾಲೆಗೆ ಸ್ವಲ್ಪ ತಡವಾಗಿ ಬಂದರು ಎನ್ನುವ ಕಾರಣಕ್ಕೆ ಮಕ್ಕಳನ್ನು ಗೇಟ್‌ನಿಂದ ಹೊರಗಡೆ ನಿಲ್ಲಿಸಿ ಗೇಟ್ ಬೀಗ ಹಾಕಿ ಮನೆಗೆ ವಾಪಸ್ಸು ಕಳಿಸಲು ಮುಂದಾಗಿರುವ ಘಟನೆ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶಾಂತಿಕೇತನ ವಿದ್ಯಾಸಂಸ್ಥೆಯ ವಿಶ್ವಚೇತನ ಶಾಲೆಯಲ್ಲಿ ನಡೆದಿದೆ ಎಂದು ಕನ್ನಡ ಒಕ್ಕೂಟ ಕರ್ನಾಟಕ ರಾಜ್ಯ ಸಂಘಟನೆಯ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಇಂದು ವಿಶ್ವಚೇತನ ಶಾಲೆಯ ಚಿಕ್ಕ ಚಿಕ್ಕ ಮಕ್ಕಳನ್ನು ಶಾಲೆಯಿಂದ ಹೊರಗಡೆ ಕಳುಹಿಸುತ್ತಿರುವುದನ್ನು ತಡೆದು ವಿಡಿಯೋ ಚಿತ್ರೀಕರಿಸಿ ಫೋಟೊ ತೆಗೆದು ಶಾಲೆಯವರನ್ನು ಪ್ರಶ್ನಿಸಿದಾಗ, ಶಾಲೆಯ ಸಮಯ ಎಲ್ಲರಿಗೂ ಒಂದೇ, ಕಡ್ಡಾಯವಾಗಿ ಶಾಲೆಯ ಸಮಯಕ್ಕೆ ಹಾಜರಾಗಲೇ ಬೇಕು, ಈ ರೀತಿ ವಿಡಿಯೋ ಚಿತ್ರೀಕರಣ ಮಾಡಿ, ಫೊಟೋ ತೆಗೆಯುತ್ತೀರಾ ಎಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬಂದಿರುತ್ತಾರೆ. ಶನಿವಾರದ ಸಮಯದಲ್ಲಿ ದೂರ ದೂರದಿಂದ ಶಾಲೆಗೆ ಬರುವ ಮಕ್ಕಳು ಪಾಲಕರ ಮೇಲೆ ಅವಲಂಬಿತರಾಗಿದ್ದು, ಇನ್ನೂ ಕೆಲವು ಸಂದರ್ಭಗಳಲ್ಲಿ ಪಾಲಕರ ಕೆಲಸದ ಒತ್ತಡ, ಮನೆಗಳಲ್ಲಿನ ಸಮಸ್ಯೆಗಳು ಇನ್ನಿತರ ಸಮಸ್ಯೆಗಳಿಂದ ಅನಿವಾರ್ಯ ಕಾರಣಗಳಿಂದ ಮಕ್ಕಳು ಶಾಲೆಗೆ ಬರಲು ಸ್ವಲ್ಪ ವಿಳಂಬವಾದರೂ, ಮಕ್ಕಳ ಮೇಲೆ ಕರುಣೆ ಇಲ್ಲದೇ ಅತಿರೇಕದಿಂದ ಶಾಲೆಯಲ್ಲಿ ವರ್ತಿಸಲಾಗುತ್ತಿದೆ. ಶಾಲೆಯು ಮುಖ್ಯರಸ್ತೆಯಲ್ಲಿರುವುದರಿಂದ ಏಕಾಏಕಿ ಮಕ್ಕಳನ್ನು ಹೊರಗಡೆ ಕಳಿಸುವುದರಿಂದ ಮುಂದೆ ಸಂಭವಿಸಬಹುದಾದ ಅವಘಡಗಳಿಗೆ ಶಾಲೆಯವರೇ ಹೊಣೆಗಾರರಾಗುತ್ತಾರೆ. ಇಂತಹ ಸೂಕ್ಷö್ಮ ಪರಿಸ್ಥಿತಿಯನ್ನು ಶಾಲೆಯವರು ಗಮನಿಸಬೇಕಿದೆ. ಇತ್ತೀಚೆಗೆ ಈ ಶಾಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಒಬ್ಬ ಹುಡುಗ ಇನ್ನೊಬ್ಬ ಹುಡುಗನಿಗೆ ಬಾಟಲಿಯಿಂದ ಚುಚ್ಚಿದ ಘಟನೆ ನಡೆದಿದ್ದು, ಶಾಲೆಯಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ಗಮನಹರಿಸದಿರುವುದು ಶಾಲೆಯ ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ ನಗರದಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗಿರುವ ಬಗ್ಗೆ ಪೊಲೀಸ್ ಇಲಾಖೆಯು ಎಚ್ಚರಿಸಿರುತ್ತದೆ. ಇಂತಹ ಸಂದರ್ಭದಲ್ಲಿ ಪಾಲಕರು ಖುದ್ದಾಗಿ ಮಕ್ಕಳನ್ನು ಶಾಲೆಗೆ ಬಿಟ್ಟು ಹೋಗಿರುವಾಗ ಮಕ್ಕಳನ್ನು ಏಕಾಏಕಿ ಹೊರಗಡೆ ಹಾಕುವುದು ಸರಿಯಾದ ಕ್ರಮವಲ್ಲ. ಕೂಡಲೇ ಕ್ಷೇತ್ರ ಶಿಕ್ಷಣಾಧಿಕರಿಗಳು ಈ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿ, ಮಕ್ಕಳ ಮೇಲೆ ನಿಗಾವಹಿಸಿ ಜವಾಬ್ದಾರಿತನದಿಂದ ವರ್ತಿಸಲು ತಿಳಿಸಬೇಕೆಂದು ವಿನಂತಿಸುತ್ತೇವೆ ಎಂದು ತಿಳಿಸಿದರು.

About Mallikarjun

Check Also

ಗ್ರಾಮಗಳಲ್ಲಿ ಪ್ರತ್ಯಕ್ಷವಾದ ಚಿರತೆಗಳು ಪ್ರಾಣ ಭಯದಲ್ಲಿರುವ ಜನರು

People are in fear of their lives when leopards are seen in villages. ವರದಿ:ಬಂಗಾರಪ್ಪ ಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.