Public awareness at ESI Hospital, Rajajinagar as part of World Leprosy Day

ಬೆಂಗಳೂರು, ಜ. 30: ವಿಶ್ವ ಕುಷ್ಠ ರೋಗದ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐ ಮಾದರಿ ಆಸ್ಪತ್ರೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
“ಒಟ್ಟಾಗಿ, ಕಾರ್ಯನಿರ್ವಹಿಸಿ, ನಿರ್ಮೂಲನೆ ಮಾಡಿ” ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.
ಡೀನ್ ಡಾ ಸಂಧ್ಯಾ ಆರ್ ಜಾಥಗೆ ಚಾಲನೆ ನೀಡಿದರು. ಪ್ರಭಾರಿ ವೈದ್ಯಕೀಯ ಅಧೀಕ್ಷಕರು ಡಾ ಯೋಗಾನಂದನ್ ಕೆ. ಎಸ್, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ ಗಿರೀಶ್ ಎಂ ಎಸ್, ಡಾ ಬಿಂದುಶ್ರೀ, ಡಾ ಚೇತನ್, ಡಾ ವಿಜಯಲಕ್ಷ್ಮೀ, ಡಾ ವಿದ್ಯಾಶ್ರೀ, ಡಾ ಮನೋಜ್ ಹಾಗೂ ಸಮುದಾಯದ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಡಾ ಸುರೇಶ್ ಕುಂಬಾರ್, ಡಾ ಅಮೀನಾ,ಡಾ ನಿಶಾ, ಡಾ ಸ್ವಾತಿ, ಡಾ ಗಾಯತ್ರಿ, ಡಾ ಶ್ರೀ ಲಕ್ಷ್ಮಿ, ಮತ್ತು ಮೈಕ್ರೋ ಬಯಾಲಜಿ ಮುಖ್ಯಸ್ಥರಾದ ಡಾ ರವಿ ಜಿ ಎಸ್ ಪಾಲ್ಗೊಂಡಿದ್ದರು.
ವೈದ್ಯಕೀಯ ವಿದ್ಯಾರ್ಥಿಗಳಾದ ಸುಮುಖ್ ಹಾಗೂ ಧನುಷ್ ಹಾಗೂ ತಂಡದವರಿಂದ ಕುಷ್ಟ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಿರು ನಾಟಕ ಪ್ರದರ್ಶನವನ್ನು ಆಸ್ಪತ್ರೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ರೋಗಿಗಳು(ಐ ಪಿ ) ಹಾಗೂ ಆಸ್ಪತ್ರೆ ಸಿಬ್ಬಂದಿಯವರು ಹಾಜರಿದ್ದರು.