Mahadevaswamijis are regular Kayakayogis: Sri Shantamallikarjuna Swamijis are like.

ವರದಿ: ಬಂಗಾರಪ್ಪ .ಸಿ .
ಹನೂರು : ನಿತ್ಯ ಅಕ್ಷರ ಜ್ಞಾನಿ ,ಅನ್ನ ದಾಸೋಹ ಮಾಡಿ ನಮ್ಮೇಲ್ಲರಿಗೂ ಮಾರ್ಗದರ್ಶನ ನೀಡಿದ ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಪಣತೋಟ್ಟು ಲಿಂಗೈಕ್ಯರಾದ ಶ್ರೀ ಪಟ್ಟದ ಮಹದೇವಸ್ವಾಮೀಜಿಗಳ ಕೊಡುಗೆ ಅಪಾರವಾದದ್ದು ಎಂದು ಶ್ರೀ ಶ್ರೀ ಸಾಲೂರು ಬೃಹ್ನಮಠದ ಪೀಠಾಧಿಪತಿಗಳಾದ ಡಾ.ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿನ
ಮ.ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಅವರಣದಲ್ಲಿ ಲಿಂಗೈಕ್ಯ ಶ್ರೀಪಟ್ಟದ ಮಹದೇವ ಸ್ವಾಮೀಜಿ ಅವರ 31ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಿನ್ನೆಲೆಯಲ್ಲಿ ಭಾವಚಿತ್ರದ ಪಲ್ಲಕ್ಕಿ ಉತ್ಸವ ,ನಂದಿಕುಣಿತ ಸೇರಿದಂತೆ ಇನ್ನಿತರರ ಮೂರ್ತಿಗಳ ಹಲವಾರು ಸ್ವಾಮೀಜಿಗಳ ಸಮ್ಮುಖದಲ್ಲಿ ಚಾಲನೆ ನೀಡಿದ ಸಮಯದಲ್ಲಿ ಮಾತನಾಡಿದ ಅವರು
ಶ್ರೀಗಳಿಗೆ ಸಾಮಾಜಿಕ ಕಳಕಳಿಯೊಂದಿಗೆ ಕಾಯಕದ ಜೊತೆಯಲ್ಲಿ ನಮ್ಮ ಭಾಗದಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಮಠದ ಅಭಿವೃದ್ಧಿಗೆ ಶ್ರಮಿಸಿದ್ದರು. ಗಿರಿಜನರು, ದೀನದಲಿತರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಮ.ಬೆಟ್ಟ ಸೇರಿದಂತೆ ತಾಲೂಕಿನ ವಿವಿಧೆಡೆ ಶಿಕ್ಷಣ ಸಂಸ್ಥೆಯನ್ನು ತೆರೆದರು. ಅನಾಥ ಮಕ್ಕಳಿಗೆ ವಿದ್ಯಾರ್ಥಿನಿಲಯ ಸ್ಥಾಪಿಸಿದರು. ಇನ್ನು ಸಾಲೂರು ಮಠದ ಕಟ್ಟಡ ನಿರ್ಮಿಸಿದ ಶ್ರೀಗಳು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವುದನ್ನು ಕಾಣಬಹುದು ಎಂದರು . ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಅವರಿಗೆ ಪಾದ ಪೂಜೆ ನೆರವೇರಿಸಲಾಯಿತು. ಟ್ರ್ಯಾಕ್ಟರ್‌ನಲ್ಲಿ ಪಲ್ಲಕ್ಕಿಯಲ್ಲಿ ಭಾವಚಿತ್ರವನ್ನಿರಿಸಿ ಮೆರವಣಿಗೆಗೆ ಮಾಡಲಾಯಿತು. ಮಂಗಳವಾದ್ಯ, ವಿವಿಧ ಕಲಾ ತಂಡದೊಂದಿಗೆ ಹೊರಟ ಮೆರವಣಿಗೆ ಮಾದಪ್ಪನ ದೇಗುಲ, ಅಂತರಗಂಗೆ ರಸ್ತೆ, ತಂಬಡಿಗೇರಿ ಹಾಗೂ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂದಿಧ್ವಜ ಕಂಬ ಕುಣಿತ, ವೀರಗಾಸೆ ಕುಣಿತ ಮೆರವಣಿಗೆಗೆ ಮೆರುಗು ತಂದಿತ್ತು. ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಮಠದ ವತಿಯಿಂದ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು .
ಸಾಲೂರು ಬೃಹನ್ಮಠದಲ್ಲಿ ಚಾ.ನಗರ ರೆಡ್ ಕ್ರಾಸ್ ಸಂಸ್ಥೆ, ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ಮರಿಯಾಲ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ಇವರ ವತಿಯಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಮಾಡಲಾಗಿದೆ .
ಇದೇ ಸಂದರ್ಭದಲ್ಲಿ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ತಮಿಳುನಾಡು ಬರಗೂರು ಮಠದ ಅಶೋಕ ಸ್ವಾಮೀಜಿ, ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ,ಹಾಗೂ ಮಠದ ಭಕ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು.