Crop destruction due to elephant attack in the whirlwind of farmer’s loan.
ವರದಿ : ಬಂಗಾರಪ್ಪ .ಸಿ .
ಹನೂರು : ನಮ್ಮ ಭೂಮಿಯಲ್ಲಿ ಬೆಳೆದ ಬೆಳೆಯಿಂದ ಮಾಡಿದ ಸಾಲವನ್ನು ತೀರಿಸಲು ಪ್ರಯತ್ನ ಮಾಡುವ ಸಮಯದಲ್ಲಿ ಜಮಿನಿಗೆ ಆನೆ ನುಗ್ಗಿ ಬೆಳೆನಾಶ ಮಾಡಿದೆ ಎಂದು ರೈತರಾದ ಬಸವರಾಜು ಕಾಂಚಳ್ಳಿ ತಿಳಿಸಿದರು.
ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಬಸವರಾಜು ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಬಾಳೆ . ಕಬ್ಬು ಬೆಳೆಯನ್ನು ಆನೆಗಳ ದಾಳಿಯಿಂದ ನಾಶವಾಗಿರುವ ಘಟನೆ ಶನಿವಾರ ತಡರಾತ್ರಿ ಬೆಳಕಿಗೆ ಬಂದಿದೆ.
ರೈತರಾದ ಕಾಂಚಳ್ಳಿ ಗ್ರಾಮದ ಬಸವರಾಜು ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 2 ಎಕರೆ 29 ಸೆಂಟು (ಸರ್ವೇ ನಂ :439) ಬೆಳೆಗಳನ್ನು ನಾಶ ಮಾಡಿದೆ. ಸುಮಾರು 3 ರಿಂದ 4 ಲಕ್ಷರೂಪಾಯಿ ಸಾಲ ಮಾಡಿ ಹಾಕಿದ್ದ ಬೆಳೆ ಕಾಡು ಪ್ರಾಣಿಗಳ ಪಾಲಾಗಿದ್ದು, ಹಗಲು ಇರುಳು ಎನ್ನದೆ ಕಾವಲು ಕಾಯ್ದು, ಗೊಬ್ಬರವನ್ನು ಸಹ ಹಾಕಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ರೈತರ ಗೋಳು ಕೇಳುವವರು ಯಾರು ಎಂಬಂತಾಗಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರು ಸಹ ರೈತ ಬೆವರು ಸುರಿಸಿ ಬಿತ್ತನೆ ಮಾಡಿ, ಬೆಳೆಯನ್ನ ಕಾಪಾಡಿಕೊಂಡು ಬಂದಿರುತ್ತಾರೆ, ಆದರೆ ಈಗ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗಿದ್ದು ರೈತನಿಗೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘವು ಆಗ್ರಹಿಸುತ್ತಿದೆ .