Social work by activists in the city on the occasion of Mayawati’s 69th birthday

ಗಂಗಾವತಿ: ಬಹುಜನ ಸಮಾಜ ಪಕ್ಷದ ಹಿರಿಯ ನಾಯಕಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಜನ್ಮದಿನದ ನಿಮಿತ್ಯ ಜನವರಿ-೧೫ ಬುಧವಾರ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಾಯಾವತಿಯವರ ಜನ್ಮ ದಿನದ ಆಚರಣೆ ಮಾಡಲಾಯಿತು ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಹುಲಿಗೇಶ ದೇವರಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಮಾಯಾವತಿಯವರ ಜನ್ಮದಿನಾಚರಣೆ ನಿಮಿತ್ಯ ನಗರದ ಅನಾಥಾಶ್ರಮದಲ್ಲಿ ಕೇಕ್ ಕಟ್ ಮಾಡಿ, ಅಲ್ಲಿನ ಮಕ್ಕಳಿಗೆ ಹಣ್ಣು-ಹಂಪಲು ವಿತರಿಸಿ ವಿಭಿನ್ನ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಮಾತನಾಡಿದರು. ಮಾಯಾವತಿಯವರು ಸಾಕಷ್ಟು ಏಳುಬೀಳುಗಳನ್ನು ದಾಟಿ ರಾಜಕೀಯ ಪ್ರವೇಶಿಸಿ, ದಲಿತರ ಪರವಾಗಿ, ಶೋಷಿತರ ಪರವಾಗಿ ಅನೇಕ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವರಿಗೆ ಆ ದೇವರು ಹೆಚ್ಚಿನ ಆಯುಷ್ಯ ಆರೋಗ್ಯ ಕರುಣಿಸಿ ರಾಜಕೀಯ ಜೀವನ ವೃದ್ಧಿಸಲಿ ಎಂದು ಹಾರೈಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಮಲ್ಲೇಶ ನಾಯಕ, ರಮೇಶ ಕಾಳೆ, ಶಾಂತಕುಮಾರ, ದೊಡ್ಡ ಮಾರೆಪ್ಪ, ಮಲ್ಲೇಶ ನಾಯ್ಕ, ನಿಂಗಪ್ಪ ನಾಯಕ, ನೀಲಪ್ಪ, ಹುಲುಗಪ್ಪ ಕೊಜ್ಜಿ ಹಾಗೂ ಪಕ್ಷದ ಇತರರು ಹಾಜರಿದ್ದರು.
Kalyanasiri Kannada News Live 24×7 | News Karnataka