MLA MR Manjunath performed Guddali Puja for many works.
ವರದಿ: ಬಂಗಾರಪ್ಪ .ಸಿ .
ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರಿಕರಣ ಸೇರಿದಂತೆ ಹಲವು ಕಾಮಗಾರಿಗೆ ಅಂದಾಜು ವೆಚ್ಚ 17 ಕೋಟಿ ರೂಗಳಿಗೆ ಶಾಸಕರಾದ ಎಮ್ ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೆರಿಸಿದರು .
ಹನೂರು ವಿಧಾನಸಭಾ ಕ್ಷೇತ್ರದ ಹುತ್ತುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನ ಒಡೆಯರ್ ಪಾಳ್ಯದ ಟಿಬೇಟಿಯನ್ ಕಾಲೋನಿಯ ಕೊರಮನಕತ್ರಿ ಗ್ರಾಮದಿಂದ ಎಸ್ ಬಿ ಎಂ ಮಾರ್ಗವಾಗಿ ಓಲ್ಡ್ ಏಜ್ ಹೌಸ್ ವರಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 38 ರ ಸರಪಳಿ 41.40 ಕಿಮೀ (ಒಡೆಯರ್ ಪಾಳ್ಯ) ಬಾಕ್ಸ್ ಕಲ್ವಾಟ್ ನಿರ್ಮಾಣ ಕಾಮಗಾರಿ, ಹಾಗೂ ರಾಜ್ಯ ಹೆದ್ದಾರಿ 38-ರ ಲೊಕ್ಕನಹಳ್ಳಿ ಗ್ರಾಮದಿಂದ ಬೊರೆದೊಡ್ಡಿವರಿಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿ ಹಾಗು ಕೇಂದ್ರದ ನಗರೋತ್ಥಾನ 4 ನೇಯ ಹಂತದ ಅಮೃತ್ 0.2 ಯೋಜನೆಯಡಿ ನೀರಿನ ಟ್ಯಾಂಕ್ ಹಾಗೂ ಮನೆ ಮನೆಗೆ ಶುದ್ದ ಜಲದ ಪೈಪ್ ಲೈನ್ ಮಾಡುವ ಕಾಮಗಾರಿ ಸೇರಿದಂತೆ ಒಟ್ಟು ಸುಮಾರು ಅಂದಜುವೆಚ್ಚ 17 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಎಲ್ಲಾ ಕಾಮಗಾರಿಗೂ ಗುದ್ದಲಿಪೂಜೆ ನೆರವೆರಿಸಿ
ಮಾತನಾಡಿದ ಶಾಸಕರಾದ ಎಮ್ ಆರ್ ಮಂಜುನಾಥ್ ಮುಂದಿನ ತಿಂಗಳು ಫೆಬ್ರವರಿ 15ನೆ ದಿನಾಂಕದಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಹನೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದರು .
ನಂತರ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು
ತಾಲ್ಲೂಕು ಮಟ್ಟದ ಕಚೇರಿಗಳು, ಕುಡಿಯುವ ಮತ್ತು ತೋಟಗಾರಿಕೆಗೆ ನೀರಾವರಿ ಹಾಗು ನಮ್ಮ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು. ವಿವಿಧ ಇಲಾಖೆಗಳಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಲಾಗಿದ್ದು ಸಂಬಂಧಿಸಿದ ಸಚಿವರಿಂದ ಅಗತ್ಯವಾದ ಅನುದಾನವನ್ನು ಪಡೆಯುವ ಕೆಲಸ ನಾಡಲಿದ್ದೆನೆ . ಬುಡಕಟ್ಟು ಜನರಾದ ಸೋಲಿಗರಿಗೆ 3000 ಮನೆಗಳ ನಿರ್ಮಾಣಕ್ಕಾಗಿ(ಘಟಕ ವೆಚ್ಚ 5 ಲಕ್ಷ) ಸಿದ್ದು ನಿವಾಸ ಎಂಬ ಹೆಸರಿನಲ್ಲಿ ಅಂದಾಜು 150 ಕೋಟಿ ಅನುದಾನ ಸಿಗಲಿದೆ ಇದರಿಂದ ಕ್ಷೇತ್ರದಲ್ಲಿ ಗುಡಿಸಲುಮುಕ್ತಮಾಡಬಹುದು ,
ನಾನು ಈಗಾಗಲೇ ಸದನದಲ್ಲಿ
ಮಾನ್ಯ ಮುಖ್ಯಮಂತ್ರಿಗಳಿಗೆ ಹನೂರು ವಿಧಾನ ಸಭಾ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದರಲ್ಲದೆ .
ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಿಂದ ಕೂಡಿರಬೇಕು , ಜೊತೆಗೆ ಹಂತವಾಗಿ ನಡೆಯುವ ಕಾಮಗಾರಿಗಳ ವಿವರಗಳನ್ನು ಜಿಪಿಎಸ್ ಫೋಟೋ ಸಮೇತ ನನ್ನ ಗಮನಕ್ಕೆ ಮಾಹಿತಿಗಾಗಿ ತಿಳಿಸತಕ್ಕದ್ದು ಹಾಗೂ ತೀವ್ರಗತಿಯಲ್ಲಿ ಕೆಲಸವನ್ನು ಮುಗಿಸಿ ರಸ್ತೆಗಳ ಗುಣಮಟ್ಟದ ಕಡೆ ಗಮನ ಹರಿಸಬೇಕಾಗಿದೆ ಎಂದು ಗುತ್ತಿಗೆದಾರರಿಗೆ ಮೌಖಿಕವಾಗಿ ತಿಳಿಸಿದರು.
ಇದೇ ಸಮಯದಲ್ಲಿ ಹನೂರು ಪಟ್ಟಣ ಪಂಚಾಯತಿಯ ಅಧ್ಯಕ್ಷೆಯಾದ ಮುಮ್ತಾಜ್ ಬಾನು, ಉಪಾಧ್ಯಕ್ಷರಾದ ಆನಂದ ಕುಮಾರ, ಮುಖಂಡರುಗಳಾದ ರಾಜೂಗೌಡ, ಮಂಜೆಶ್, ಪೀ.ಜಿ.ಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣ , ರಮೇಶ್ , ಸೇರಿದಂತೆ ಇನ್ನಿತರರು ಹಾಜರಿದ್ದರು.