To the residence of deceased Renuka of Adura village,! MLA Basavaraja Rayardi met and consoled.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎಂಬುವರ ಪತ್ನಿ ರೇಣುಕಾ ಹಾಗೂ ಮಗು ವೈದ್ಯರ ನಿರ್ಲಕ್ಷದಿಂದ ಇತ್ತಿಚಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮೃತರ ನಿವಾಸಕ್ಕೆ ಶಾಸಕ ಬಸವರಾಜ ರಾಯರಡ್ಡಿಯವರು ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಸೋಮವಾರದಂದು ಸಾಯಂಕಾಲ ಪ್ರಕಾಶ ಹಿರೇಮನಿಯವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು ವಯಕ್ತಿಕವಾಗಿ ಹತ್ತು ಸಾವಿರ ಧನ ಸಹಾಯ ಮಾಡಿದರು.
ಈ ವೇಳೆ ಮಾತನಾಡಿ ನಾನು ನನ್ನ ವಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಕುಟುಂಬಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರಯ್ಯ ಹಿರೇಮಠ, ಶಿವನಗೌಡ ದಾನರೆಡ್ಡಿ, ಸಂಗಮೇಶ ಗುತ್ತಿ, ಹಂಪಯ್ಯ ಹಿರೇಮಠ, ವೀರುಪಾಕ್ಷಪ್ಪ ದೊಡ್ಮನಿ, ಅರವಿಂದ, ಶಿವುಕುಮಾರ ಆದಾಪೂರ, ರಾಘು ಕಾತರಕಿ, ನಿಂಗಪ್ಪ ಗೊರ್ಲೆಕೊಪ್ಪ, ಕಾರ್ತಿಕ ಜಾಧವ್, ಇನ್ನಿತರರು ಇದ್ದರು.