Attack on journalist Ramanjeenappa. Correspondents’ Association Condemnation

ತಿಪಟೂರು. ತುಮಕೂರು ಜಿಲ್ಲೆಯ ಪಾವಗಡ ನಗರದ ಗಡಿನಾಡು ಮಿತ್ರ ಪತ್ರಿಕೆಯ ಸಂಪಾದಕ ರಾಮಾಂಜಿನಪ್ಪನವರ ಮೇಲೆ ನಾರಾಯಣ ರೆಡ್ಡಿ ಎಂಬಾತನು ತನ್ನ ಸಂಬಂಧಿಗಳಿಂದ ಹಲ್ಲೆ ಮಾಡಿಸಿರುವುದನ್ನು ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಿಪಟೂರು ತಾಲ್ಲೂಕು ಪದಾಧಿಕಾರಿಗಳಾದ. ಡಾ.ಭಾಸ್ಕರ್ . ಎಸ್ ಗಣೇಶ್. ಶಂಕ್ರಪ್ಪ ಬಳ್ಳೆಕಟ್ಟೆ. ಧರಣೇಶ್ ಕುಪ್ಪಾಳು. ಶುಭ ವಿಶ್ವಕರ್ಮ. ಮಂಜು ಗುರುಗದಹಳ್ಳಿ . ರಾಜು ಬೆನ್ನೇನಹಳ್ಳಿ. ಡಿ ಮಂಜುನಾಥ್. ಸೇರಿದಂತೆ ತಾಲ್ಲೂಕು ಘಟಕ ತೀವ್ರವಾಗಿ ಖಂಡಿಸಿದೆ.
ಗಡಿನಾಡು ಪತ್ರಿಕೆಯಲ್ಲಿ ನಾರಾಯಣ ರೆಡ್ಡಿ ಎಂಬಾತನ ಬಗ್ಗೆ ಸುದ್ದಿ ಪ್ರಕಟಿಸಿದ್ದಕ್ಕಾಗಿ ತನ್ನ ಬೆಂಬಲಿಗರನ್ನು ಕರೆದು ಸಂಪಾದಕರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರೋದು ಖಂಡನೀಯವಾಗಿದೆ.
ಪತ್ರಿಕಾ ಸಂಪಾದಕ ರಾಮಾಂಜಿನಪ್ಪನವರ ಮೇಲೆ ಹಲ್ಲೇ ಮಾಡಿರುವ ನಾರಾಯಣ ರೆಡ್ಡಿ ಹಾಗೂ ಆತನ ಬೆಂಬಲಿಗರ ಮೇಲೆ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳು ತಕ್ಷಣ ಬಂದಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.