Manavi; Minister N.S. Bosaraju drives municipal garbage collection tractors
ರಾಯಚೂರು ಜ.06,(ಕರ್ನಾಟಕ ವಾರ್ತೆ):- 2021-22ನೇ ಸಾಲಿನ 15ನೇ ಹಣಕಾಸಿನ ಯೋಜನೆಯಡಿ ಮಾನವಿ ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗಾಗಿ 30 ಲಕ್ಷ ರೂ. ವೆಚ್ಚದಲ್ಲಿ ನೂತನ 3 ಟ್ರಾಕ್ಟರ್ ವಾಹನಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಜನವರಿ 06ರಂದು ಚಾಲನೆ ನೀಡಿದರು.
ಮಾನವಿ ಪಟ್ಟಣದ ಪುರಸಭೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮಾತನಾಡಿದ ಸಚಿವರು, ಮಾನವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ 27 ವಾರ್ಡಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಕಸ ಸಂಗ್ರಹಣೆಗಾಗಿ 30 ಲಕ್ಷ ರೂ.ವೆಚ್ಚದಲ್ಲಿ ಮೂರು ಟ್ರಾಕ್ಟರ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಪುರಸಭೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು 5 ವಾರ್ಡಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜುಮ್ಮಲದೊಡ್ಡಿಯಲ್ಲಿ ನೀರು ಸಂಗ್ರಹಣೆ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಟ್ಯಾಂಕ್ ನಲ್ಲಿ ನೀರು ಸಂಗ್ರಹಣೆಗೆ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಇದೆ ವೇಳೆ ಸಚಿವರು ಸೂಚನೆ ನೀಡಿದರು.
ಮಾನವಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕಾತರಕಿ ಜಾಕ್‌ವೆಲ್ ಪಂಪ್‌ಸೇಟಗೆ ನಿರಂತರವಾಗಿ ವಿದ್ಯುತ್ ಪೂರೈಸುವುವುದಕ್ಕೆ ಕ್ರಮಕೈಗೊಳ್ಳಬೇಕು. ಹಾಗೂ ವಿದ್ಯುತ್ ಪರಿವರ್ತಕ ಕೆಟ್ಟಿದ್ದು, ಬದಲಾಯಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಚಿವರು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಡಿ.ವೀರೇಶ, ಉಪಾಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ, ಪಂಚಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷರಾದ ಬಿ.ಕೆ.ಅಮರೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಬಿ.ದೇವರಮನಿ, ಮುಖಂಡರಾದ ಅಬ್ದುಲ್ ಗಾಪೂರ್ ಸಾಬ್, ರಾಜಾ ಸುಭಾಶ್ಚಂದ್ರ ನಾಯಕ, ಪುರಸಭೆಯ ಹಿರಿಯ ಸದಸ್ಯರಾದ ಲಕ್ಷ್ಮಿ ದೇವಿ ನಾಯಕ, ವೆಂಕಟೇಶ, ರೇವಣಸಿದ್ದಯ್ಯ ಸ್ವಾಮಿ, ಭಾಷಾ ಸಾಬ್, ಬಸವರಾಜ ಭಜಂತ್ರಿ ಸೇರಿದಂತೆ ಇತರರು ಇದ್ದರು