I am handling all my work duties adequately: Minister Bosaraja

ವರದಿ : ಪಂಚಯ್ಯ ಹಿರೇಮಠ..
ಕುಕನೂರು : ನಾನು ಸಣ್ಣ ನೀರಾವರಿ ಸಚಿವನಾಗಿ ರಾಜ್ಯದಲ್ಲಿ ನನಗಿರುವ ಎಲ್ಲಾ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇನೆ ಎಂದು ಸಣ್ಣ ನೀರಾವರಿ ಸಚಿವ ಎನ್. ಎಸ್ ಬೋಸರಾಜು ಅವರು ಹೇಳಿದರು.
ಅವರು ಶುಕ್ರವಾರದಂದು ಕೊಪ್ಪಳ – ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲನೇ ಹಂತದ ಕಾಮಗಾರಿಯ ಜಾಕವೆಲ್ ಮತ್ತು ಪಂಪ್ ಹೌಸ್ ಪರೀವಿಕ್ಷಣೆ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮಗೆ ಬಜೆಟ್ ನಲ್ಲಿ ಇಟ್ಟಿರುವ 3 ಲಕ್ಷ 71 ಸಾವಿರ ಕೋಟಿಯಲ್ಲಿಯೇ 365 ದಿನದಲ್ಲಿ ಖರ್ಚು ಮಾಡಬೇಕು ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲಾ, ಸುಮ್ಮನೆ ರಾಜಕೀಯವಾಗಿ ಟೀಕೆ ಟಿಪ್ಪಣೆಗಳು ಇರುವುದು ಸಹಜ ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲಾ ಎಂದರು.
ಕೆರೆ ತುಂಬಿಸುವ ಯೋಜನೆಯು ಕಳೆದ 6 ವರ್ಷದಿಂದ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿ ಕೈಗೊಂಡು ಪೂರ್ಣಗೊಳ್ಳಿಸುವಂತೆ ಇಂಜನಿಯರ್‌ಗೆ ಸೂಚನೆ ನೀಡಿದರು.
ಕೆರೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುತ್ತಿದ್ದು, ಯಲಬುರ್ಗಾ ಕ್ಷೇತ್ರದಲ್ಲಿ 9 ಕೆರೆಗಳಿಗೆ ನೀರು ತುಂಬಲಿದೆ. ಇದೇ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಇನ್ನೂ ಮೂರು ನಾಲ್ಕು ಕಿ.ಮೀ ಪೈಪ್‌ಲೈನ್ ಹಾಕುವ ಕಾರ್ಯ ಹಾಗೂ ಈಗಾಗಲೇ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಪ್ರಮುಖ್ಯತೆ ನೀಡಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರ ಅಡಿ ಅಂತರ್ಜಲ ಕುಸಿತಗೊಂಡಿತ್ತು. ಇದರಿಂದ ಕೆರೆ ತುಂಬಿಸುವ ಯೋಜನೆ ಸೇರಿದಂತೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಸೇರಿದಂತೆ ಸಣ್ಣ ನೀರಾವರಿ ಯೋಜನೆಯ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಪ್ರಮುಖ್ಯತೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಅಶೋಕ ತೋಟದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಪಪಂ ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ವಕ್ತಾರ ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ತಿಮ್ಮಣ್ಣ ಚವಡಿ, ಮಂಜುನಾಥ ಯಡಿಯಾಪುರ, ಈಶಪ್ಪ ದೊಡ್ಡಮನಿ, ರಾಮಣ್ಣ ಬಂಕದಮನಿ, ಶಿವಕುಮಾರ ಆದಾಪುರ ಇತರರಿದ್ದರು.