BJP needs to learn to hold its tongue: Sangamesh Gutti

ವರದಿ : ಪಂಚಯ್ಯ ಹಿರೇಮಠ.
ಕೊಪ್ಪಳ : ಬಿಜೆಪಿಯವರುನಾಲಿಗೆಗೆಎಲುಬಿಲ್ಲಾವೆಂದು ಬಾಯಿಗೆ ಬಂದಂತೆ ಮಾತನಾಡುವುದನ್ನು ಬೀಡಬೇಕು ಎಂದು ಕುಕನೂರು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.
ಅವರು ಕುಕನೂರು ಪಟ್ಟಣದ ಎಪಿಎಂಸಿಯ ಗೊಡೌನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೊನ್ನೆ ಡಿ.29ರಂದು ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ರಾಜಕೀಯ ಪ್ರೇರಿತ ಚುನಾವಣೆಯಲ್ಲದಿದ್ದರೂ ಇದರಲ್ಲಿ ಬಿಜೆಪಿ ಪಕ್ಷದವರು ಗೊಂದಲ ಸೃಷ್ಠಿಸಿ ಮತ ಎಣಿಕೆಯಾಗದಂತೆ ಮಾಡಿದರು ಎಂದು ಆರೋಪಿಸಿದ ಅವರು, ಎರಡು ಬೂತ್ ನ ಮತಗಳನ್ನು ಎಣಿಕೆ ಮಾಡಲು ಸೂಚಿಸಿದರೇ ತಗಾದೇ ತೆಗೆದು ಪ್ರತಿಭಟನೆಗೆ ನಿಂತ ಬಿಜೆಪಿಗರು ಪ್ರತಿಭಟನೆ ನೆಪದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಭಿವೃದ್ದಿ ಸಹಿಸದೇ ಬಾಯಿಗೆ ಬಂದಂತೆ ಮಾತನಾಡಿದರು. ಮೊದಲು ಮಾತನಾಡುವ ಸಂಸ್ಕೃತಿಯನ್ನು ಮಾಜಿ ಸಚಿವರು ಹಾಗೂ ಅವರ ಹಿಂಬಾಲಕರು ಕಲಿಯಬೇಕು ಎಂದು ಎಚ್ಚರಿಸಿದರು.
ಹುಬ್ಬಳ್ಳಿ ಈರಣ್ಣ ಎನ್ನುವ ಬಿಜೆಪಿ ಹಿರಿಯ ವಕ್ತಾರ ಎಲ್ಲಿ, ಯಾರಿಗೆ, ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಯಬೇಕು, ತಾವು ತಮ್ಮ ಹಿರಿತನಕ್ಕೆ ತಕ್ಕಂತೆ ಸೌಜನ್ಯ ರೀತಿಯಲ್ಲಿ ಮಾತನಾಡದೇ ಸಭೆಯಲ್ಲಿ ಅವಾಚ್ಯ ಪದಗಳನ್ನು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮಗೂ ಮಾತನಾಡಲು ಬರುತ್ತದೆ ನಾವು ಅಷ್ಟು ಕೀಳ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲಾ, ನಮಗೆ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರು ಮಾತಿನ ಸಂಸ್ಕೃತಿಯನ್ನು ಕಲಿಸಿದ್ದಾರೆ ಎಂದರು.
ನೀವು ಸಹ ಶಾಸಕ ಸಚಿವ ಸ್ಥಾನದಲ್ಲಿ ಮೂರು ಹುದ್ದೆಗಳನ್ನು ನಿಭಾಯಿಸಿ ಆಡಳಿತ ನಡೆಸಿದ್ದೀರಿ ನೀವು ಅಧಿಕಾರದಲ್ಲಿದ್ದಾಗ ತಾಲೂಕಿಗೆ ಏನು ಕಿತ್ತು ಗುಡ್ಡೆ ಹಾಕಿದ್ದಿರಿ, ತಾಲೂಕಿನಲ್ಲಿ ಏನು ಅಭಿವೃದ್ದಿ ಮಾಡಿದ್ದಿರಿ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹಾಲಪ್ಪ ಆಚಾರ್ ಗೆ ಸಂಗಮೆಶ ಗುತ್ತಿ ತಿರುಗೇಟು ನೀಡಿದರು.
ನಮ್ಮ ಶಾಸಕ ಬಸವರಾಜ ರಾಯರಡ್ಡಿ ಆಡಳಿತಾವಧಿಯಲ್ಲಿ ಮಾಡಿದ ಕೆಲಸಗಳನ್ನೇ ನಿಮಗೆ ಉಳಿಸಿ ಬೆಳಸಲಾಗಲಿಲ್ಲಾ ನಮ್ಮ ಶಾಸಕರು ಚಿಲ್ಲರೇ ಕೆಲಸ ಮಾಡವಷ್ಟು ಹೀನ ಪ್ರವೃತ್ತಿಯವರಲ್ಲಾ ಅವರು ತಾಲೂಕಿನಲ್ಲಿ ಮಾಡುತ್ತಿರುವ ಅಭಿವೃದ್ದಿ ನಿಮಗೆ ಸಹನೆ ಇಲ್ಲಾ ಅದಕ್ಕೆ ಮನ ಬಂದಂತೆ ನೀವು ನಿಮ್ಮ ಹಿಂಬಾಲಕರು ಭ್ರಮೆಗೊಂಡು ಮಾತನಾಡುತ್ತಿದ್ದಾರೆ ಎಂದರು.
ಶಾಸಕ ಬಸವರಾಜ ರಾಯರಡ್ಡಿ ನಲವತ್ತು ವರ್ಷ ಆಡಳಿತಾವಧಿಯಲ್ಲಿ ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ, ನಮ್ಮ ತಾಲೂಕು ಯಾರಿಂದ ಅಭಿವೃದ್ದಿಯಾಗಿದೆ ಎನ್ನುವುದು ನಮ್ಮ ತಾಲೂಕಿನ ಮತದಾರರಷ್ಟೇ ಅಲ್ಲಾ ರಾಜ್ಯದ ಜನ ಹೇಳುತ್ತಿದ್ದಾರೆ. ಯಾರೋ ಏನೋ ಎಂದರು ಅಂದರೆ ನಮ್ಮದೇನು ಹಾಳಾಗುವುದಿಲ್ಲಾ, ಆನೆ ಹೋಗ್ತಿರುತ್ತೆ ಶ್ವಾನ ಬೋಗಳ್ತಿರುತ್ತೆ ಅಂತ ಆನೆ ತಲೆ ಕೆಡಸಿಕೊಳ್ಳೊದಿಲ್ಲಾ ಎಂದು ವ್ಯಂಗವಾಗಿ ತಿರುಗೇಟು ಟಾಂಗ್ ನೀಡಿದರು.
ಎಪಿಎಂಸಿ ಆವರಣದಲ್ಲಿ ಭಜನೆ ಮಾಡಿದವರು ಮುಂದೆಯು ಭಜನೆಯನ್ನೇ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿ ಅವರಿಗೆ ಕಾನೂನು, ಸಂವಿಧಾನ ಎಂದರೇ ಏನು ಎನ್ನುವುದು ಗೊತ್ತಿಲ್ಲಾ ಮತ್ತು ಇವರ ಬಿಜೆಪಿ ಹಿರಿಯ ಹಾಗೂ ಕೇಂದ್ರ ಮಂತ್ರಿ ಅಮಿತ್ ಶಾ ಅವರು ಕೂಡಾ ನಾಲಿಗೆ ಹಿಡಿತವಿಲ್ಲದವರು ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಅವರು ಕೂಡಾ ಕ್ಷಮೆಯಾಚಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ನಂತರ ಸಿದ್ದಯ್ಯ ಕಳ್ಳಿಮಠ ಮಾತನಾಡಿ ಕೃಷಿ ಪತ್ತಿನ ಚುನಾವಣೆಯಲ್ಲಿ ಗೆದ್ದರೇ ನಮಗೇನು ಇಂದ್ರನ ಪದವಿ ದೊರೆಯುತ್ತದೆ ಎಂದು ನಾವು ಚುನಾವಣೆಗೆ ಸ್ಪರ್ಧಿಸಿಲ್ಲಾ, ಅಲ್ಲಿರುವ ಭ್ರಷ್ಟಾಚಾರವನ್ನು ಬಹಿರಂಗ ಪಡಿಸಲು ಚುನಾವಣೆಗೆ ಸ್ಪರ್ಧಿಸಿದ್ದೇವೆ, 1700 ಸದಸ್ಯರ ಮತದಾನ ಹಕ್ಕು ಇದ್ದದ್ದನ್ನು ಕೇವಲ 300 ಸದಸ್ಯರ ಮತದಾನ ಹಕ್ಕನ್ನು ಮಾಡಿಕೊಂಡವರು ತಮಗೆ ಬೇಕಾದವರಿಗೆ ಮಾತ್ರ ಮತದಾನ ನೀಡುತ್ತಿದ್ದರಿಂದ ನಾವು ಸಹ ಕಾನೂನು ಚೌಕಟ್ಟಿನಲ್ಲಿ ರೈತಪರ ಕಾಳಜಿಯಿಂದ ಸ್ಪರ್ಧೆಗೆ ಇಳಿದಿದ್ದೇವು.
ಆದರೆ ಯಲಬುರ್ಗಾ ಬಿಜೆಪಿ ವಕ್ತಾರ ಈರಣ್ಣ ಹುಬ್ಬಳ್ಳಿ ಶಾಸಕರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನಾಡಿದ್ದು ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿ ಪಟ್ಟಣದ ಪೋಲಿಸ್ ಇಲಾಖೆಗೆ ತೆರಳಿ ಪಿಎಸ್ಐ ಟಿ. ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಧೀರ ಕೊರ್ಲಳ್ಳಿ, ಗಗನ್ ನೋಟಗಾರ, ಮುತ್ತು ವಾಲ್ಮೀಕಿ, ಯಮನೂರಪ್ಪ ಕಟ್ಟಿಮನಿ, ರಫಿ ಮಂಡಲಗಿರಿ, ಹಂಪಯ್ಯ ಹಿರೇಮಠ, ದಾನರಡ್ಡಿ, ರಾಮಣ್ಣ ಬಂಕದಮನಿ, ವೀರಯ್ಯ ತೋಂಟದಾರ್ಯಮಠ, ಕೆರಿಬಸಪ್ಪ ನಿಡಗುಂದಿ, ಶಿವಾನಂದ ಬಣಕಾರ, ಪ್ರಶಾಂತ ಆರಬೆರಳಿನ, ಅಶೋಕ ತೋಟದ, ದಸ್ತಗಿರಸಾಬ ರಾಜೂರ, ರಫಿ ಹಿರೇಹಾಳ, ನಿಂಗಪ್ಪ ಗೊರ್ಲೆಕೊಪ್ಪ ಇನ್ನಿತರರು ಇದ್ದರು.