January 10, 2026

Day: December 2, 2024

Mylara Mallanna fair from 7 ಬೀದರ್: ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ಮೈಲಾರ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ ಡಿ. 7 ರಿಂದ ಜನವರಿ 3 ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.ಡಿ.7 ರಂದು ರಾತ್ರಿ 9.30ಕ್ಕೆ ಮಲ್ಹಾರಿ ಮತ್ತು ಮಾಳಸಾಕಾಂತೆ ಹಾಗೂ ಭಾನು ಅವರ ಮದುವೆಯೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.ಡಿ.10 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಮೇಲೆ ದೇವರ ವಿಗ್ರಹದ ಮೆರವಣಿಗೆ ಜರುಗಲಿದೆ.ಡಿ.14 ರಂದು ರಾತ್ರಿ 8.30ಕ್ಕೆ ನವಿಲು ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ.15 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ, ಕುದುರೆ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ.22 ರಂದು ಪಲ್ಲಕ್ಕಿ ಉತ್ಸವ, ಆನೆಯ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ.29 ರಂದು ಪಲ್ಲಕ್ಕಿ ಉತ್ಸವ, ನಂದಿಯ ಮೇಲೆ ದೇವರ ವಿಗ್ರಹದ ಮೆರವಣಿಗೆ ನಡೆಯಲಿದೆ. ಜ.3 ರಂದು ಬೆಳಿಗ್ಗೆ 11ಕ್ಕೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ.ಭಕ್ತರು ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಬೇಕು ಎಂದು ಮಲ್ಲಣ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ ಮೇತ್ರೆ ವಡಗಾಂವ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.
Kadai Morehoda farmer of the house for the protection of Fengal. ವರದಿ : ಬಂಗಾರಪ್ಪ .ಸಿ.ಹನೂರು.:ಫೆಂಗಲ್ ಚಂಡಮಾರುತದ ಪರಿಣಾಮವಾಗಿ...
2660917/- collected in Anjanadri Hill Temple Dahundi ಗಂಗಾವತಿ, ತಾಲೂಕಿನ ಆನೆಗುಂದಿ (ಚಿಕ್ಕರಾಂಪುರ) ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ದಲ್ಲಿಇಂದು...