Public should arrive at ward camp and collect form-3 through online software : Commissioner Veerupakshamurthy.
ಗಂಗಾವತಿ : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಮಾನ್ಯ ಘನ ಸರಕಾರದ ಸುತ್ತೋಲೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ನಗರದ 30 ಸಾವಿರ ಆಸ್ತಿಗಳಿದ್ದು ಅವುಗಳಿಗೆ ಸಂಬಂಧಿಸಿದಂತೆ ನಮೂನೆ – 3 ನೀಡಲು ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿ ಒಂದೊಂದು ದಿನ ಕ್ಯಾಂಪ್ ಆಯೋಜಿಸಲಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು ಮುಂದಾಗಬೇಕು ಎಂದು ನಗರಸಭೆ ಆಯುಕ್ತರಾದ ವೀರುಪಾಕ್ಷಮೂರ್ತಿ ಹೇಳಿದರು.
ಅವರು ಬುಧವಾರದಂದು ನಗರದ ದುರ್ಗಮ್ಮನ ಹಳ್ಳದ ಬಳಿ ಇರುವ ವೀರಣ್ಣ ದೇವಸ್ಥಾನದಲ್ಲಿ ನಮೂನೆ -03 ವಿತರಣೆ ಕ್ಯಾಂಪ್ ನಲ್ಲಿ ಮಾತನಾಡಿ ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ-3ನ್ನು ವಿತರಿಸಲು ನಗರದ ಎಲ್ಲಾ ವಾರ್ಡ್ ಗಳಲ್ಲಿ ಕ್ಯಾಂಪ್ ಗಳನ್ನು ಒಂದೊಂದು ದಿವಸ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಆಸ್ತಿ ತೆರಿಗೆ ಪಾವತಿದಾರರಿಗೆ ಈ ಸಂಬಂಧ ಸಾರ್ವಜನಿಕ ಮಾಹಿತಿ ನೀಡಿರುವ ಅವರು ಪ್ರತಿಯೊಂದು ವಾರ್ಡ್ ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕ್ಯಾಂಪ್ ನಲ್ಲಿ ಸಾರ್ವಜನಿಕರು ಭೇಟಿ ನೀಡಿ ತಮ್ಮ ತಮ್ಮ ಆಸ್ತಿಗಳ ಅಧಿಕೃತ ದಾಖಲಾತಿಗಳನ್ನು ಅಲ್ಲಿ ನಿಯೋಜಿಸಿರುವ ಸಿಬ್ಬಂದಿ, ಅಧಿಕಾರಿಗಳಿಗೆ ನೀಡಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಆರ್.ಐ, ಆರ್ ಒ, ಕರವಸೂಲಿಗಾರರು, ಬ್ಯಾಂಕ್ ಸಿಬ್ಬಂದಿಗಳು, ಡಾಟಾ ಎಂಟ್ರಿ ಆಫರೆಟರ್, ಕೇಸ್ ವರ್ಕರ್, ಸೇರಿದಂತೆ ನೂರಾರು ಸಾರ್ವಜನಿಕರು ಇನ್ನಿತರರು ಇದ್ದರು.