Breaking News

ಶರಣರ ಶಕ್ತಿ ಎಂಬ ಕುಲಗೆಟ್ಟ ಚಲನ ಚಿತ್ರಕ್ಕೆ ಪ್ರೋತ್ಸಾಹ ಕೊಡುವ ಸ್ವಾಮಿಗಳಿಗೆ ಧಿಕ್ಕಾರ

Contempt for the Swami who encouraged Sharanara Shakti

ಜಾಹೀರಾತು

ಶರಣರ ಶಕ್ತಿ ಎಂಬ ಕುಲಗೆಟ್ಟ ಚಲನ ಚಿತ್ರಕ್ಕೆ ಪ್ರೋತ್ಸಾಹ ಕೊಡುವ ಸ್ವಾಮಿಗಳಿಗೆ ಧಿಕ್ಕಾರ
ಬಸವಣ್ಣನವರನ್ನು ಬೆನ್ನು ಬಿದ್ದ ಅನೇಕ ಸಂಘ ಸಂಸ್ಥೆಗಳು ಸಂಘಟನೆ ಆರ್ ಎಸ್ ಎಸ್ ಸಂಘ ಪರಿವಾರ ವಿಶ್ವ ಹಿಂದೂ ಪರಿಷತ್ ಮುಂತಾದ ಅನೇಕ ಸಂಘ ಸಂಸ್ಥೆಗಳು ಇಂದು ಬಸವಣ್ಣನವರ ಚರಿತ್ರೆಯ ಬಗ್ಗೆ ಕೃತಿ ರಚಿಸುತ್ತಿದ್ದಾರೆ. ಚಲನ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅವರೆಲ್ಲರ ಒಟ್ಟು ಉದ್ದೇಶ ಲಿಂಗಾಯತ ಧರ್ಮವು ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ ಎಂದು ಸಾಬೀತುಪಡಿಸುವ ಹುನ್ನಾರವಷ್ಟೇ.
ಈ ಪ್ರಯತ್ನವಾಗಿ ವಚನ ದರ್ಶನ ಎಂಬ ಅತ್ಯಂತ ಕಳಪೆ , ತತ್ವರಹಿತ ಪುಸ್ತಕವನ್ನು ಸಂಘ ಪರಿವಾರದವರು ರಚಿಸಿ ಊರೂರು ಅಲೆದು ಬಿಡುಗಡೆಗೊಳಿಸಿ
ಪುಸ್ತಕಗಳನ್ನು ಮಾರಿದರು. ನಮ್ಮ ಅನೇಕ ಲಿಂಗಾಯತ ಮಠಾಧೀಶರು ಇಂತಹ ಕೃತಿಗಳ ಹಿಂದಿನ ಪ್ರೇರಕ ಶಕ್ತಿಗಳು. ಕರ್ನಾಟಕದಲ್ಲಿ ಎರಡು ಮೂರು ಸಂಘ ಸಂಸ್ಥೆಗಳಿಂದ ಪ್ರತಿಭಟನೆ ಬಂದಿತೇ ಹೊರತು ಉಳಿದ ಅನೇಕ ಸ್ವಾಮಿಗಳು ಜನ ಮೌನಕ್ಕೆ ಜಾರಿದರು.
ದಿಲೀಪ ಶರ್ಮ ಎಂಬ ವೈದಿಕ ಮನಸ್ಸಿನವರು ಶರಣರ ಶಕ್ತಿ ಎಂಬ ಬಸವಾದಿ ಶರಣರ ಕುರಿತಾದ ಶರಣರ ಶಕ್ತಿ ಎಂಬ ಅತ್ಯಂತ ಕಳಪೆ ಮಟ್ಟದ ಯಾವುದೇ ಇತಿಹಾಸಿಕ
ಘಟನೆಗಳಿರದ ಕುಲಗೆಟ್ಟ ಚಲನ ಚಿತ್ರವನ್ನು ನೋಡಲು ಭಾಲ್ಕಿ ಹಿರೇಮಠದ ಡಾ ಬಸವಲಿಂಗ ಪಟ್ಟದದೇವರು ,ಗದಗ ತೋಂಟದಾರ್ಯ ಮಠದ ಡಾ ಸಿದ್ಧರಾಮ ಸ್ವಾಮಿಗಳು ಸಿದ್ಧಗಂಗೆಯ ಸ್ವಾಮಿಗಳು , ಮೂರು ಸಾವಿರ ಮಠದ ಸ್ವಾಮಿಗಳು ,ಪಂಚಮಸಾಲಿ ಸ್ವಾಮಿಗಳು ಇನ್ನೂ ಅನೇಕ ಸ್ವಾಮಿಗಳು ಶರಣರ ಶಕ್ತಿ ಚಲನ ಚಿತ್ರ ನೋಡಲು ನಿರ್ಮಾಪಕ ನಿರ್ದೇಶಕರ ಪರವಾಗಿ ಜನತೆಗೆ ಕೋರಿಕೆ ಮಾಡಿಕೊಂಡಿದ್ದಾರೆ.
ಚಲನ ಚಿತ್ರ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲಿ ಚಲನಚಿತ್ರ ಮಂದಿರದಲ್ಲಿ ನೊಣ ಹೊಡೆಯುವವರು ದಿಕ್ಕಿಲ್ಲ . ಇಂತಹ ಚಲನ ಚಿತ್ರವನ್ನು ನೋಡಿ ಪ್ರಮಾಣ ಪತ್ರ ನೀಡುವ ಲಿಂಗಾಯತ ಮಹಾಸಭೆ ಸಂಘ ಸಂಸ್ಥೆಗಳು ಲಿಂಗಾಯತ ಸಮಾಜವನ್ನು ದಿಕ್ಕುತಪ್ಪಿಸುತ್ತವೆ ಎನ್ನುವದರಲ್ಲಿ ಎರಡು ಮಾತಿಲ್ಲ.
ಶರಣರ ಶಕ್ತಿ ಚಲನ ಚಿತ್ರ ನೋಡು ಎನ್ನುವುದು ಬಸವ ದ್ರೋಹದ ಕಾರ್ಯ ಅದರಂತೆ
ಇಂತಹ ಚಲನ ಚಿತ್ರ ನೋಡುವುದು ಕೂಡ ಲಿಂಗಾಯತ ವಿರೋಧಿ ನೀತಿ.
ಈ ಮಠಾಧೀಶರಿಗೆ ಸ್ವಲ್ಪವಾದರೂ ಬುದ್ಧಿ ಬೇಡವೇ ? ಕೆಲವರ ಪ್ರಕಾರ ಕೆಲ ಪ್ರಮುಖ ಮಠಗಳು ಇಂತಹ ಚಲನ ಚಿತ್ರವನ್ನು ನಿರ್ಮಿಸಲು ಹಣ ಹೂಡಿಕೆ ಮಾಡಿದ್ದಾರೆ ಎಂಬ ಗುಸು ಗುಸು ಮಾತು ಕೇಳಿ ಬರುತ್ತದೆ. ಲಿಂಗಾಯತ ಧರ್ಮ ಸಿದ್ಧಾಂತಕ್ಕೆ ಕಳಂಕ ತರುವ
ವಚನ ದರ್ಶನದಂತಹ ಪುಸ್ತಕವಾಗಲೀ ಶರಣರ ಹೆಸರಿಗೆ ಕಪ್ಪು ಮಸಿ ಹಚ್ಚುವ ಶರಣರ ಶಕ್ತಿ ಎಂಬ ಅಥವಾ ನೋಡುವುದು ಪ್ರೋತ್ಸಾಹಿಸುವುದು ಬಸವ ದ್ರೋಹದ ಕಾರ್ಯವಾಗಿದೆ. ಇಂತಹ ಕಪಟ ವ್ಯಕ್ತಿಗಳಿಗೆ ನಮ್ಮ ಧಿಕ್ಕಾರವಿದೆ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.