The role of teachers in creating national consciousness is great – Chakraborty Sulibele
ಬೆಂಗಳೂರು, ನ, ೨೭; ರಾಷ್ಟ್ರಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದದ್ದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ನಗರದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಒಂದು ದಿನದ ಶಿಕ್ಷಕರ ಕಾರ್ಯಗಾರ “ಪ್ರೇರಣಾ ಪ್ರವಾಹ” ಕಾರ್ಯಗಾರದಲ್ಲಿ “ವ್ಯಕ್ತಿತ್ವ ನಿರ್ಮಾಣಕ್ಕಾಗಿ ಬೋಧನೆ” ವಿಷಯವಾಗಿ ಮಾತನಾಡಿದ ಅವರು, ಶಿಕ್ಷಕರು ನಕಾರಾತ್ಮಕ ಮನೋಭಾವನೆಯಿಂದ ಹೊರಬಂದು, ತಮ್ಮ ಬದುಕನ್ನು ವಿದ್ಯಾರ್ಥಿಗಳಿಗಾಗಿ ಸಮರ್ಪಿಸಬೇಕು. ಮಾದರಿಯಾಗಿ ನೈತಿಕ ಶಿಕ್ಷಣ ಬೋಧಿಸಬೇಕು ಎಂದರು.
ಶಿಕ್ಷಕರು ಗೊಂದಲಕ್ಕೆ ಒಳಗಾಗದೇ ತಮ್ಮ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಭಾರತ ಮುಂಬರುವ ದಿನಗಳಲ್ಲಿ 6ಜಿ ತಂತ್ರಜ್ಞಾನದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬೆಂಗಳೂರಿನ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಮೇಲ್ವಿಚಾರಕರಾದ ಸ್ವಾಮಿ ತದ್ಯುಕ್ತಾನಂದಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ವ್ಯಾಪಕ ಅವಕಾಶಗಳಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.
ಎಪಿಎಸ್ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ.ವಿಷ್ಣುಭರತ್ ಮಾತನಾಡಿ ಶ್ರೇಷ್ಟ ಭಾರತದ ನಿರ್ಮಾಣಕ್ಕೆ ಶಿಕ್ಷಕರೆ ರೂವಾರಿಗಳಾಗಬೇಕು. ಸೇವೆ, ತ್ಯಾಗ ಭಾರತದ ಅವಳಿರತ್ನಗಳಾಗಿದ್ದು, ವ್ಯಕ್ತಿಗಿಂತ ಸಂಸ್ಥೆ ಮುಖ್ಯವಾಗಿರಬೇಕು, ಸಾಮಾಜಿಕ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ಅಂಶಗಳನ್ನು ಬಿತ್ತಬೇಕು ಎಂದು ಹೇಳಿದರು.
ಶಿಕ್ಷಕರ ಕಾರ್ಯಾಗಾರ ಮೊದಲನೆ ಗೋಷ್ಠಿಯಲ್ಲಿ ಡಾ.ಶರತ್ ಕುಮಾರ್ ಎಂ.ಎನ್ ಅವರು ‘ಆಸಕ್ತಿಕರ ಬೋಧನೆ” ಕುರಿತ ವಿಷಯ ಮಂಡಿಸಿದರು.