Breaking News

ಬಿಸಿಎಂ ಹಾಸ್ಟಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮಲ್ಲೇಶ ನಾಯ್ಕ್ ಆಗ್ರಹ

Mallesha Naik demands strict action against BCM hostels

ಜಾಹೀರಾತು

ಗಂಗಾವತಿ, ನ.೨೭: ತಾಲೂಕು ವ್ಯಾಪ್ತಿಯ ಬಿ.ಸಿ.ಎಂ. ಹಾಸ್ಟಲ್‌ಗಳಲ್ಲಿ ಕಳಪೆ ಊಟ ನೀಡುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಕೂಡಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಪ್ರತಿ ತಿಂಗಳು ಹಾಸ್ಟಲ್‌ಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜನಸೈನ್ಯ ತಾಲೂಕ ಅಧ್ಯಕ್ಷ ಮಲ್ಲೇಶ ನಾಯ್ಕ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತೀಚಿಗೆ ತಾಲೂಕು ವ್ಯಾಪ್ತಿಯ ಬಿಸಿಎಂ ಹಾಸ್ಟಲ್‌ಗಳಲ್ಲಿ ಅತ್ಯಂತ ಕಳಪೆ ಆಹಾರ ಸಾಮಾಗ್ರಿಗಳು ಪೂರೈಕೆಯಾಗುತ್ತಿದ್ದು, ಗುತ್ತಿಗೆದಾರರ ಬದಲಾಗಿ ಹಾಸ್ಟಲ್‌ನ ವಾರ್ಡನ್‌ಗಳೇ ಕಳಪೆ ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಹಾಸ್ಟಲ್ ವಿದ್ಯಾರ್ಥಿಗಳಿಗೆ ಅತ್ಯಂತ ಕಳಪೆ ಊಟ ವಿತರಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದ್ದು, ವಿದ್ಯಾರ್ಥಿನಿಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಗುತ್ತಿಗೆದಾರರು ಮತ್ತು ಹಾಸ್ಟಲ್ ವಾರ್ಡನ್‌ಗಳ ಒಳ ಒಪ್ಪಂದದಿAದಾಗಿ ವಿದ್ಯಾರ್ಥಿಗಳು ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುವAತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬAತೆ ಇತ್ತೀಚಿಗೆ ಗಂಗಾವತಿ ತಾಲೂಕು ವ್ಯಾಪ್ತಿಯ ಬಿಸಿಎಂ ಹಾಸ್ಟಲ್‌ಗಳ ಆಹಾರ ಗುಣಮಟ್ಟ ಪರಿಶೀಲನೆ ವರದಿಯೂ ಕೂಡ ಕಳಪೆ ಆಹಾರ ಪೂರೈಕೆಯನ್ನು ಸಾಬೀತುಪಡಿಸಿದೆ. ತಾಲೂಕು ವ್ಯಾಪ್ತಿಯ ಎಲ್ಲಾ ಹಾಸ್ಟಲ್‌ಗಳಲ್ಲೂ ಕಳಪೆ ಆಹಾರ ಪೂರೈಕೆಯಾಗುತ್ತಿದ್ದರೂ ಕೂಡ ಅತ್ತ ಗಮನ ಹರಿಸದೇ ಕೇವಲ ನಗರ ಹೊರವಲಯದ ಹಾಸ್ಟಲ್ ಒಂದನ್ನೇ ಮಾತ್ರ ದೋಷಿಯನ್ನಾಗಿ ಮಾಡಿದ್ದು ಸಂಶಯಕ್ಕೆ ಕಾರಣವಾಗಿದೆ. ಅದಲ್ಲದೇ ಸಂಬAಧಿಸಿದ ಹಾಸ್ಟಲ್ ವಾರ್ಡನ್‌ಗಳ ಮೇಲೆ ಕ್ರಮ ಜರುಗಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ಹಾಸ್ಟಲ್ ವಾರ್ಡನ್‌ಗಳ ಮತ್ತು ಗುತ್ತಿಗೆದಾರರ ಒಡಂಬಡಿಕೆಯಿAದಾಗಿ ವಿದ್ಯಾರ್ಥಿಗಳು ಕಳಪೆ ಆಹಾರ ಹಾಗೂ ಅಗತ್ಯ ಸೌಕರ್ಯಗಳಿಂದ ವಂಚಿತರಾಗುವAತಾಗಿದೆ. ಕೂಡಲೇ ತಾಲೂಕು ವ್ಯಾಪ್ತಿಯ ಎಲ್ಲಾ ಬಿಸಿಎಂ ಹಾಸ್ಟಲ್‌ಗಳಲ್ಲಿ ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ಬಿಸಿನೀರು, ಹಾಸ್ಟಲ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳ ಆಹಾರ ಗುಣಮಟ್ಟದ ಪರಿಶೀಲನಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮಲ್ಲೇಶ ನಾಯ್ಕ್ ಅವರು ಒತ್ತಾಯಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.