Visit of Regional Joint Director of College Education Department to the city

*ಪದವಿ ಕಾಲೇಜುಗಳಲ್ಲಿರುವ ಹಾಸ್ಟೇಲ್ ಕೂಡಲೇ ಆರಂಭಕ್ಕೆ ಮನವಿ ಸಲ್ಲಿಕೆ*
*ಮಹಿಳಾ ಸರಕಾರಿ ಪದವಿ ಕಾಲೇಜು ಆರಂಭಕ್ಕೆ ಶಿಫಾರಸ್ಸು.
ಗಂಗಾವತಿ: ನಗರದ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಕಲಬುರಗಿ ಪ್ರಾದೇಶಿಕ ವಲಯದ ಜಂಟಿ ನಿರ್ದೇಶಕ ಶಿವಶರಣಪ್ಪ ಗೊಳ್ಳೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಪದವಿ ಕಾಲೇಜುಗಳಲ್ಲಿ ಇರುವ ಹಾಸ್ಟೇಲ್‌ಗಳನ್ನು ಕೂಡಲೇ ಆರಂಭೀಸಬೇಕು ಹಾಗೂ ಪ್ರಾಧ್ಯಾಪಕರ ಆಡಳಿತಾತ್ಮಕ ಹಲವು ಸಮಸ್ಯೆಗಳಿಗೆ ಸ್ಪಂದಿಸುವಂತೆ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಪಕರ ಸಂಘದ ಬಳ್ಳಾರಿ ವಿವಿ ವಲಯದ ಅಧ್ಯಕ್ಷ ಕರಿಗೂಳಿ ಸುಂಕೇಶ್ವರ ಮನವಿ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗನುಗುಣವಾಗಿ ಗುಣಮಟ್ಟದ ಉನ್ನತ ಶಿಕ್ಷಣ ನೀಡಬೇಕು. ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಕಾಲಕಾಲಕ್ಕೆ ನೇಮಿಸಬೇಕು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮಂಜೂರಾದ ಮಾದರಿಯ ವಸತಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಮೂಲಭೂತ ಸೌಕರ್ಯ ಒದಗಿಸಿ ವಸತಿ ಸೌಲಭ್ಯ ಒದಗಿಸಬೇಕು. ಗಂಗಾವತಿಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರು ಪದವಿ ಶಿಕ್ಷಣ ಅಭ್ಯಾಸ ಮಾಡುತ್ತಿದ್ದು ಮಹಿಳಾ ಸರಕಾರಿ ಮಹಾವಿದ್ಯಾಲಯ ಆರಂಭಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು.ಹಾಗೂ ಸoಬಂಧಪಟ್ಟ ಇಲಾಖೆಗೆ ಹಾಸ್ಟೆಲ್ ಒಪ್ಪಿಸಿ ಬರುವ ಶೈಕ್ಷಣಿಕ ವರ್ಷದಿಂದ ಪ್ರವೇಶ ಹೆಚ್ಚಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಎಸ್‌ಕೆಎನ್‌ಜಿ ಕಾಲೇಜು ಪ್ರಾಚಾರ್ಯರಾದ ಡಾ.ಮುಮ್ತಾಜ್ ಬೇಗಂ, ಪ್ರಾಧ್ಯಾಪಕರಾದ ಶಿವರಾಜ್ ಗುರಿಕಾರ, ಫಣಿರಾಜ್, ವ್ಯವಸ್ಥಾಪಕಿ ರಾಘಮ್ಮ, ಪ್ರಾದೇಶಿಕ ವಲಯ ಕಲಬುರಗಿಯ ಶಿಂಧೆ ಹಾಗೂ ಶಶಿಶೇಖರ ರೆಡ್ಡಿ ಇದ್ದರು