Our Bhoomi-Our Right BJP protest

ಕೊಪ್ಪಳ: ರಾಜ್ಯದಲ್ಲಿ ಕೃಷಿ ಭೂಮಿ, ಮಠ, ದೇವಸ್ಥಾನ ದ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ಷಡ್ಯಂತ್ರ ಮಾಡಿರುವುದನ್ನೂ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ “ನಮ್ಮ ಭೂಮಿ-ನಮ್ಮ ಹಕ್ಕು” ಆಂದೋಲನದ ಬೃಹತ್ ಪ್ರತಿಭಟನೆ ಮಾಡಲಾಯಿತು.
ರೈತರಿಗಾಗಿ ಮಾಡುತ್ತಿರುವ ನಮ್ಮ ಹೋರಾಟಕ್ಕೆ ಪೂಜ್ಯ ಶ್ರೀ ಮೈನಳ್ಳಿ ಸ್ವಾಮಿಗಳು, ಪೂಜ್ಯ ಶ್ರೀ ಅನ್ನದಾನೇಶ್ವರ ಶ್ರೀಗಳು ಹಾಗೂ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದು ನಮ್ಮೆಲ್ಲರಿಗೂ ಮತ್ತಷ್ಟು ಹೋರಾಟ ಮಾಡಲು ಶಕ್ತಿ ತಂದಿದೆ.
ವಕ್ಫ್ ಕುರಿತಾಗಿರುವ ಗೆಜೆಟ್‌ನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ವಕ್ಫ್ ವಶಪಡಿಸಿಕೊಂಡಿರುವ ರೈತರ, ದೇವಸ್ಥಾನಗಳ ಜಮೀನುಗಳನ್ನು ಹಿಂತಿರುಗಿಸುವವರೆಗೂ ಬಿಜೆಪಿ ಪಕ್ಷವು ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸುತ್ತದೆ.
ಇ ಹೋರಾಟದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ನವೀನ ಗುಳಗಣ್ಣನವರ್, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಶರಣು ತಳ್ಳಿಕೇರಿ, ಶಾಸಕರಾದ ಶ್ರೀ ಗಾಲಿ ಜನಾರ್ಧನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಮಾಜಿ ಶಾಸಕರಾದ ಶ್ರೀ ಬಸವರಾಜ ಧಡೆಸೂಗೂರು, ರೈತ ಪರ ಸಂಘಟನೆಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.