Breaking News

ದೆಹಲಿ ರೈತ ಚಳುವಳಿ ನಡೆದು೪ವರ್ಷಗಳಾದರೂರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರನಿರ್ಲಕ್ಷ್ಯ

Even after 4 years of Delhi farmers’ movement, central government is neglecting to fulfill the demands of farmers

ಜಾಹೀರಾತು

ಗಂಗಾವತಿ: SKM ನೇತೃತ್ವದಲ್ಲಿ ನಡೆದ ರೈತರ ಐತಿಹಾಸಿಕ ದೆಹಲಿ ರೈತ ಚಳುವಳಿ ಪೂರೈಸಿ ನವೆಂಬರ್ ೨೬ಕ್ಕೆ ನಾಲ್ಕು ವರ್ಷಗಳಾದರೂ ಲಿಖಿತ ಭರವಸೆ ಈಡೇರಿಸದ ಕೇಂದ್ರ ಸರ್ಕಾರದ ಜನದ್ರೋಹಿ ನೀತಿಗಳ ವಿರುದ್ಧ ನವೆಂಬರ್ ೨೬ ರಂದು ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ.
ನವಂಬರ್ ೨೬ ರಂದು ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್-೨೨ ಶುಕ್ರವಾರ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ನೇತೃತ್ವದಲ್ಲಿ ಗಂಗಾವತಿಯ ಉದ್ಯಾನವನ (ಬಸ್ ಸ್ಟಾಂಡ್) ದ ಹತ್ತಿರ ಪ್ರಚಾರ ಆಂದೋಲನ ನಡೆಯಿತು.
ಕೇಂದ್ರ ಸರ್ಕಾರ ಐತಿಹಾಸಿಕ ರೈತ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕೊಟ್ಟಿದ್ದ ಭರವಸೆಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಮಾಡಬೇಕು. ಸ್ವಾಮಿನಾಥನ್ ವರದಿ ಆಧರಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಹೊಸ ಭೂ-ಸುಧಾರಣೆ ತಿದ್ದುಪಡಿ ಎ.ಪಿ.ಎಮ್.ಸಿ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಕನಿಷ್ಠ ೨೭ ಸಾವಿರ ವೇತನ ಮತ್ತು ಸಾಮಾಜಿಕ ಭದ್ರತೆ ಖಾತ್ರಿಯಾಗಬೇಕು. ಯುವ ಜನರಿಗೆ ಉದ್ಯೋಗ ಭದ್ರತೆ ನೀಡಬೇಕು ಹಾಗೂ ಜಿ.ಎಸ್.ಟಿ ಮತ್ತು ಸೆಸ್ ಅನ್ನು ತಗ್ಗಿಸುವ ಮೂಲಕ ಬೆಲೆ ಏರಿಕೆಯನ್ನು ಇಳಿಸಬೇಕು. ರಾಜ್ಯ ಸರ್ಕಾರ ಎಲ್ಲಾ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ ಒದಗಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕೆಜೋಳ, ಸಜ್ಜೆ, ಭತ್ತ, ತೊಗರಿ, ಜೋಳ, ಹತ್ತಿ ಖರೀದಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು. ಅತಿವೃಷ್ಟಿಗೆ ಒಳಗಾಗಿ ಮೆಕ್ಕೆಜೋಳ, ಸಜ್ಜೆ, ಹತ್ತಿ ಭತ್ತ ಮತ್ತು ಮೆಣಸಿನಕಾಯಿ ಬೆಳೆಗಾರರು, ಬೆಳೆನಾಶದಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದು, ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಎರಡು ತಲೆಮಾರಿನಿಂದ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುವ ಜಿಲ್ಲೆಯ ರೈತರಿಗೆ ಭೂ ಮಂಜೂರಾತಿ ಕೊಡಬೇಕು. ಹೀಗೆ ಪ್ರಮುಖ ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಈಡೇರಿಸುವ ನಿಟ್ಟಿನಲ್ಲಿ ಕ್ರಮಜರುಗಿಸಬೇಕೆಂದು ಒತ್ತಾಯಿಸಲಾಗುತ್ತದೆ.
ಈ ಸಂದರ್ಭದಲ್ಲಿ ಏಖS ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ಏಖS ಮುಖಂಡರಾದ ರಮೇಶ ಪಾಟೀಲ್, ಚಿಟ್ಟಿಬಾಬು, ಏಖಖS ಗಂಗಾವತಿ ತಾಲೂಕ ಅಧ್ಯಕ್ಷ ವಿರೇಶ ಹಣವಾಳ, ಏಗಿS ದುರುಗೇಶ ಬರಗೂರ, ಶರಣು ಕುಮಾರ್, ಏಖಖS ಮುಖಂಡರಾದ, ಯಮುನಾ ಏಗಿS., ಲಕ್ಷ್ಮಿ ಏಗಿS., ಅಮರೇಶ ಹಣವಾಳ, ಏಖS ಕನಕಗಿರಿ ತಾಲೂಕು ಅಧ್ಯಕ್ಷ ಪಾಮಪ್ಪ ಭಾಗವಹಿಸಿದ್ದರು.

About Mallikarjun

Check Also

ಮೇಘರಾಜ್ ರೆಡ್ಡಿ ಹೊಸಮನಿ ನವೋದಯ ವಸತಿ ಶಾಲೆಗೆ ಆಯ್ಕೆ: ಸನ್ಮಾನ.

Megharaj Reddy Hosamani selected for Navodaya Residential School: Honor. ಕಾರಟಗಿ:, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಸತಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.