Breaking News

ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

2,200 crore bribe in India to get contract – US court arrest warrant against Adani

ಜಾಹೀರಾತು

ವಾಷಿಂಗ್ಟನ್‌: ಕಳೆದ ವರ್ಷ ಭಾರತದಲ್ಲಿ ೨೦,೦೦೦ ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸರ‍್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್‌ ಚಾಲನೆ ನೀಡುವ ಸಂರ‍್ಭದಲ್ಲಿ ) ವರದಿ ಪ್ರಕಟಗೊಂಡು ಶಾಕ್‌ ನೀಡಿತ್ತು. ಈಗ ಅಮೆರಿಕದಲ್ಲಿ ಅದಾನಿ ಗ್ರೀನ್‌ ಎರ‍್ಜಿಗಾಗಿ ೬,೦೦೦ ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿದ್ದ ಗೌತಮ್‌ ಅದಾನಿ ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆ ಶಾಕ್‌ ನೀಡಿದೆ.

ಗೌತಮ್‌ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ರ‍್ಕಾರಿ ಅಧಿಕಾರಿಗಳಿಗೆ ೨೬೫ ಮಿಲಿಯನ್ ಡಾಲರ್‌ಗೂ (ಅಂದಾಜು ೨೨೩೮ ಕೋಟಿ ರೂ.) ಹೆಚ್ಚು ಲಂಚದ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದೆ.

ನ್ಯೂಯರ‍್ಕ್‌ ಕರ‍್ಟ್‌ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರೆಂಟ್‌ ಹೊರಡಿಸಿದೆ. ಆ ವಾರೆಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ.


ಗೌತಮ್ ಅದಾನಿ, ಸೈರಿಲ್ ಕೆಬನೆಸ್, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅರ‍್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅರ‍್ವಾಲ್ ಅವರ ವಿರುದ್ಧ ವಂಚನೆ ಪಿತೂರಿ ಆರೋಪ ಮಾಡಲಾಗಿದೆ.

ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ೬,೦೦೦ ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಆರ‍್ಷಿಸಲು ಮುಂದಾಗಿದ್ದ ಅದಾನಿ ಗ್ರೀನ್ ಎರ‍್ಜಿ ಕಂಪನಿಯು ತನ್ನ ನರ‍್ಧಾರದಿಂದ ಹಿಂದೆ ಸರಿಯುದಾಗಿ ತಿಳಿಸಿದೆ.

ಆರೋಪ ಏನು?
ಅಧಿಕಾರಿಗಳಿಗೆ ಲಂಚ ನೀಡಿ ಹೂಡಿಕೆದಾರರನ್ನು ವಂಚಿಸಿದ್ದಾರೆ. ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳ ಮೂಲಕ ಯುಎಸ್ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲು ಬಹು ಶತಕೋಟಿ ಡಾಲರ್ ಯೋಜನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಅದಾನಿ ಗ್ರೀನ್ ಎರ‍್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ೨೬೫ ಮಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದೆ. ಮುಂದಿನ ಎರಡು ದಶಕಗಳಲ್ಲಿ ೨ ಶತಕೋಟಿ ಲಾಭವನ್ನು ಗಳಿಸಲು ಲಂಚ ನೀಡಲಾಗಿದೆ.

ಅದಾನಿ ಗ್ರೀನ್ ಎರ‍್ಜಿಗಾಗಿ ೩ ಶತಕೋಟಿ ಡಾಲರ್‌ ಸಾಲ ಮತ್ತು ಬಾಂಡ್‌ಗಳನ್ನು ಪಡೆಯಲು ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಕರ‍್ಯನರ‍್ವಾಹಕ ವಿನೀತ್ ಜೈನ್ ಹೂಡಿಕೆದಾರರರಿಗೆ ಹಲವಾರು ವಿಷಯಗಳನ್ನು ಮರೆಮಾಡಿ ವಂಚಿಸಿದ್ದಾರೆ.

ಸೌರಶಕ್ತಿ ಯೋಜನೆಗಾಗಿ ೨೦೨೧ರ ಜುಲೈ ಮತ್ತು ೨೦೨೨ರ ಫೆಬ್ರವರಿ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಿಗಳಿಗೆ ೧,೭೫೦ ಕೋಟಿ ರೂ. (೨೨೮ ಮಿಲಿಯನ್ ಡಾಲರ್‌) ನೀಡಿದೆ. ಛತ್ತೀಸ್‌ಗಢ, ಒಡಿಶಾ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯ ವಿದ್ಯುತ್ ಕಂಪನಿಗಳಿಗೆ ಲಂಚವನ್ನು ನೀಡಿದೆ ಎಂದು ಆರೋಪಿಸಿದೆ. ಈ ಆರೋಪಗಳು ವಿದೇಶಿ ಭ್ರಷ್ಟಚಾರ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ಆರೋಪ ಪಟ್ಟಿಯಲ್ಲಿರುವ ಆರೋಪಗಳು ಸಾಬೀತಾಗುವವರೆಗೂ ಅವರನ್ನು ನರ‍್ದೋಷಿಗಳೆಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿರುವುದಾಗಿ ಅಮೆರಿಕದ ಅಟರ‍್ನಿ ಕಚೇರಿ ತಿಳಿಸಿದೆ.

ಅದಾನಿಯಿಂದ ಎಫ್‌ಪಿಒ ರದ್ದು:
೨೦,೦೦೦ ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸರ‍್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ ೨೦೨೩ರ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ ೩,೧೧೨ರಿಂದ ೩,೨೭೬ ರೂ. ಆಫರ್‌ ಮಾಡಲಾಗಿತ್ತು. ಈ ಸಂರ‍್ಭದಲ್ಲಿ ಹಿಂಡೆನ್‌ರ‍್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪರ‍್ಣಗೊಂಡಿತ್ತು.

ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ ೨೦ ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Shಚಿಡಿe) ಮೌಲ್ಯ ಕುಸಿದಿದೆ. ಈ ಸಂರ್ಭ ದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.