Public Notice from Kukanur Town Panchayat,,
ಕುಕನೂರ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರೆಗೆ ಪಾವತಿದಾರರಿಗೆ ತಿಳಿಯಪಡಿಸುವುದೇನೆಂದರೆ, ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕಾಗಿ ರುವುದರಿಂದ ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ- 03ನ್ನು ವಿತರಿಸಲು ಶಿಬಿರಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಆಯೋಜಿಸಲಾಗಿದೆ.
ಸದರಿ ಸ್ಥಳಗಳಲ್ಲಿ ಆಯಾ ವಾರ್ಡಿನ ಸಾರ್ವಜನಿಕರು ಶಿಬಿರಕ್ಕೆ ಭೇಟಿ ನೀಡಿ ತಮ್ಮ ತಮ್ಮ ಆಸ್ತಿಗಳ ದಾಖಲಾತಿಗಳನ್ನು ಅಲ್ಲಿ ನಿಯೋಜಿಸಿರುವ ಸಿಬ್ಬಂಧಿ, ಅಧಿಕಾರಿಗಳಿಗೆ ನೀಡಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ -3ನ್ನು ಪಡೆದುಕೊಳ್ಳಲು ಕೋರಲಾಗಿದೆ.
ದಿ. 25.11.24 ರಂದು ಶಿಬಿರ ಆಯೋಜಿಸಿರುವ ಸ್ಥಳ
ಇಟಗಿ ಭೀಮಾಂಬಿಕ ದೇವಸ್ಥಾನದ ಹತ್ತಿರ 01ನೇ, 02ನೇ, ಮತ್ತು 17 ನೇ ವಾರ್ಡ್ ನವರಿಗೆ ಆಯೋಜಿಸಲಾಗಿದೆ.
ದಿ.26.11.24 ರಂದು ಪಟ್ಟಣದ ಚಾವಡಿ ಹತ್ತಿರ ವಾರ್ಡ್ ಸಂಖ್ಯೆ 03, 04, 05, 06, 10 ನೇ ವಾರ್ಡ್ ನವರಿಗೆ.
ದಿ. 27.11.24ರಂದು ಪಟ್ಟಣದ ಇಟಗಿ ಮಸೀದಿ ಹತ್ತಿರ ವಾರ್ಡ್ ಸಂಖ್ಯೆ 07 ನೇ, 08ನೇ, 09ನೇ ವಾರ್ಡ್ ನವರಿಗೆ.
ದಿ. 28-11-2024 ರಂದು ಸತ್ಯಪ್ಪಜ್ಜನ ಮಠದ ಹತ್ತಿರ ಗದಗ ರಸ್ತೆ 11ನೇ 12ನೇ ವಾರ್ಡ್ ನವರಿಗೆ.
ದಿ. 29-11-2024 ರಂದು ಚೆಳ್ಳೇಶ್ವರ ದೇವಸ್ಥಾನದ ಹತ್ತಿರ 13ನೇ, 14ನೇ ಮತ್ತು 15ನೇ ವಾರ್ಡ್ ನವರಿಗೆ.
ದಿ.30.11.24ರಂದು ಹರಪನಹಳ್ಳಿ ಇವರ ಮನೆಯ ಹತ್ತಿರ ಗುದ್ನೇಪ್ಪನಮಠ ರಸ್ತೆ 16ನೇ 18ನೇ ವಾರ್ಡ್ ನವರಿಗೆ.
ದಿ. 01.12.2024 ರಂದು ಗುದ್ನೇಪ್ಪನಮಠದಲ್ಲಿ 19ನೇ ವಾರ್ಡ್ ನವರಿಗೆಶಿಬಿರ ಆಯೋಜಿಸಲಾಗಿದೆ.
ಈ ಮೇಲಿನಂತೆ ನಿಗದಿಪಡಿಸಲಾದ ಸ್ಥಳ ಹಾಗೂ ದಿನಾಂಕದಂದು ತಮಗೆ ಹತ್ತಿರವಾಗುವ ನೋಂದಣಿ, ಬದಲಾವಣೆ ಪ್ರತಿ, 2024-25ನೇವ ಸಾಲಿನ ಆಸ್ತಿತೆರಿಗೆ /ನಳದ ತೆರಿಗೆ ಪಾವತಿಯ ಪ್ರತಿ ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ / ಪ್ತಯಾನ್ /ಡಿ.ಎಲ್ / ಪಡಿತರ ಚೀಟಿ, ಆಸ್ತಿ ಮಾಲೀಕರ – ಭಾವಚಿತ್ರ ಆಸ್ತಿಯ, ಕೆ.ಜೆ.ಪಿ ನಕ್ಷೆ, (ಕಟ್ಟಡ ಇದ್ದಲ್ಲಿ) ಕಟ್ಟಡ ಪರವಾನಿಗೆ, ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ವಿದ್ಯುತ್ ಮೀಟರ್ ಆರ್.ಆರ್ ಸಂಖ್ಯೆ ಇವುಗಳನ್ನು ಸಲ್ಲಿಸಿ ಇ-ಆಸ್ತಿ ತಂತ್ರಾಂಶದಲ್ಲಿ ಅರ್ಹ ಆಸ್ತಿಗಳಿಗೆ ನಮೂನೆ – 3 ರನ್ನು ಪಡೆಯಲು ಈ ಅವಕಾಶವನ್ನು ಸಾರ್ವಜನಿಕರು ಆಸ್ತಿ ಮಾಲೀಕರು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.