Breaking News

ನಮ್ಮಮಾತೃಭಾಷೆಯನ್ನು ನಾವೇಯೋಗ್ಯವಾಗಿ ಬಳಸುತ್ತಿಲ್ಲ ಕನ್ನಡ ಪಂಡಿತ ಜಯಶೇಖರ ವಿಷಾದ

Kannada Pandit Jayasekhara regrets that we ourselves are not using our mother tongue properly

ಜಾಹೀರಾತು

ಕೊಳ್ಳೇಗಾಲ, ನ.೧೬:ನಮ್ಮ ಮಾತೃ ಭಾಷೆಯನ್ನು ನಾವೇ ಯೋಗ್ಯವಾಗಿ ಬಳಸುತ್ತಿಲ್ಲ ಕನ್ನಡ ಪಂಡಿತ ಜಯಶೇಖರ ವಿಷಾದ
ಅವರು ಕೊಳ್ಳೇಗಾಲ ತಾಲ್ಲೂಕು ಮುಳ್ಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನವು ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡವನ್ನು ಶುದ್ದವಾಗಿ ಮಾತನಾಡುವ, ಸ್ಪಷ್ಟವಾಗಿ ಉಚ್ಚರಿಸುವ, ಸ್ಪಷ್ಟವಾಗಿ ಉಚ್ಚರಿಸಿದ್ದನ್ನು ಕೇಳುವ ಭಾಗ್ಯ ಮುಂದಿನ ಪೀಳಿಗೆಯವರಿಗೆ ಇದೆಯೆಂದು ಅನಿಸುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ವಿದೇಶಿಯರನ್ನು ಹಾಗೂ ಹೊರ ರಾಜ್ಯದವರನ್ನು ಬಿಡಿ ಸ್ವತಃ ನಾವೇ, ನಮ್ಮವರೇ, ಇಲ್ಲಿಯೇ ಹುಟ್ಟಿ, ಇಲ್ಲಯೇ ಬೆಳೆದು, ಇಲ್ಲಿಯೇ ಜೀವಿಸುತ್ತಿರುವ ಬಹಳಷ್ಟು ಮಂದಿ ಕನ್ನಡವನ್ನು ಮಾತನಾಡಲು ಪರದಾಡುತ್ತಾ, ತಪ್ಪಾಗಿ ಉಚ್ಚರಿಸುತ್ತಾರೆ. ಇದಕ್ಕಿಂತ ದೊಡ್ಡ ದುರಂತವಿಲ್ಲ. ಶತಮಾನಗಳ ಇತಿಹಾಸವಿದೆ, ಭವ್ಯ ಪರಂಪರೆ ಇದೆ, ಇಂತಹ ನಮ್ಮ ಕನ್ನಡ ಭಾಷೆಯನ್ನು ಸರಿಯಾಗಿ ಸ್ಪಷ್ಟವಾಗಿ ಅಭಿಮಾನದಿಂದ ಮಾತನಾಡಲು ನಮಗೇತರ ಹಿಂಜರಿಕೆ? ಕೀಳು ಭಾವನೆ? ಕೆಲವೇ ಸಾವಿರ ಜನರಿರುವ, ಲಿಪಿಯೂ ಸಹ ಇಲ್ಲದಿರುವವರು ಸ್ವಾಭಿಮಾನದಿಂದ ತಮ್ಮ ಭಾಷೆಯನ್ನು ಮಾತನಾಡುವಾಗ, ಅವರಿಗಿಲ್ಲದ, ಇರದ ಆತಂಕ, ಮುಜುಗರ ಏಳು ಕೋಟಿ ಕನ್ನಡಿಗರಿರುವ ನಮಗೇಕೆ? ಭಾಷೆ ಕೇವಲ ಮಾತನಾಡುವ ಒಂದು ಮಾಧ್ಯಮವೇ? ಭಾಷಾ ಮಿತಿ ಸಂವಹನಕ್ಕೆ ಮಾತ್ರ ಸೀಮಿತವೇ? ಖಂಡಿತ ಇಲ್ಲ. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಭಾಷೆಯಲ್ಲಿ ಅಸಂಖ್ಯಾತ ಭಾವನೆಗಳಿವೆ. ಭಾಷೆಯಲ್ಲಿ ಒಲವಿದೆ ಗೆಲುವಿದೆ ನಾವಿದ್ದೇವೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮೊಳಗೊಂದು ಭಾಷೆಯಿದೆ. ನಮ್ಮೆಲ್ಲರ ಅಸ್ತಿತ್ವ ಈ ಭಾಷೆಯಲ್ಲಿದೆ. ಭಾಷೆ ಉಳಿಸಲು ಅದರ ದಿನನಿತ್ಯ ಬಳಕೆ ಅತ್ಯಂತ ಮುಖ್ಯ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕನ್ನಡದಲ್ಲೇ ಮಾತನಾಡೋಣ, ಕನ್ನಡದಲ್ಲೇ ಬರೆಯೋಣ, ಕನ್ನಡದಲ್ಲೇ ವ್ಯವಹರಿಸೋಣ, ಕನ್ನಡ ಪತ್ರಿಕೆ ಓದೋಣ, ಕನ್ನಡ ಸಾಹಿತ್ಯ ಅರಿಯೋಣ, ಕನ್ನಡದ ಇತಿಹಾಸ ತಿಳಿಯೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಮಾತನಾಡಿ, ಕರುನಾಡೆ ಜೀವ, ಕನ್ನಡವೇ ನಮ್ಮ ಭಾವ ಎನ್ನುತಾ ಬದುಕುವವರು ಇದ್ದಾರೆ. ಅಮರರಾದ ಅದೆಷ್ಟೋ ಮಹಾನುಭಾವರು ಕನ್ನಡ ಭಾಷೆಯಿಂದ ಮಾತ್ರವೇ ಇನ್ನೂ ಜೀವಂತವಾಗಿದ್ದಾರೆ. ಅಂತಹವರನ್ನು ಸ್ಮರಿಸುತ್ತಾ, ಅವರು ತೋರಿದ ದಾರಿಯಲ್ಲಿ ನಡೆಯೋಣ ಎಂದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರ.ಮುಖ್ಯ ಶಿಕ್ಷಕಿ ಮಂಜುಳಾ, ಸಹ ಶಿಕ್ಷಕರಾದ ರಾಜೇಶ್ವರಿ, ಶಿವರಾಮ, ಮಮತಾ, ಸತೀಶ, ಅನುಪಮಾ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

About Mallikarjun

Check Also

ವಾರ್ಡ್ ಶಿಬಿರಗಳಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಿ:ನಾಗೇಶ್,

Obtain form-3 through online software in ward camps : Nagesh,, ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.