Chandrasekharaiah Hiremath selected for Sahakar Ratna Award

ವರದಿ : ಪಂಚಯ್ಯ ಹಿರೇಮಠ,,
ಕುಕನೂರು (ಯಲಬುರ್ಗಾ) : ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (ಫಿಕಾರ್ಡ) ಅಧ್ಯಕ್ಷರಾಗಿರುವ ಚಂದ್ರಶೇಖರಯ್ಯ ವಿ, ಹಿರೇಮಠ ಅವರಿಗೆ ರಾಜ್ಯ ಸರಕಾರದ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ.
ಕಳೆದ 15 ವರ್ಷಗಳಿಂದ ಚಂದ್ರಶೇಖರಯ್ಯ ಅವರು ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಇದನ್ನು ಪರಿಗಣಿಸಿ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ನ.17 ರಂದು ಭಾನುವಾರ ಬಾಗಲಕೋಟೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಪಕ್ಕದ ಮೈದಾನದಲ್ಲಿ ಆಯೋಜಿಸಲಾದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸಹಕಾರ ಕ್ಷೇತ್ರ : ಕಳೆದ 15 ವರ್ಷಗಳಿಂದ ನಿರಂತರವಾಗಿ ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. 2010ರಲ್ಲಿ ಫಿಕಾರ್ಡ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ, 2012 ರಿಂದ 2015ರವರಗೆ ಅಧ್ಯಕ್ಷರಾಗಿ ಸೇವೆ, ಮತ್ತೆ ಪುನ 2015ರಿಂದ 2017ರವರಗೆ ನಿದೇಶಕರಾಗಿ, ಅದ್ಯಕ್ಷರಾಗಿ ಕೆಲಸ, 2017 ರಿಂದ 2020ರ ವರಗೆ ನಿದೇರ್ಶಕರಾಗಿ, ಅಧ್ಯಕ್ಷರಾಗಿ ಕೆಲಸ, ಇತ್ತೀಚೆಗೆ ನೂತನವಾಗಿ ಕುಕನೂರು ತಾಲೂಕಿನ ಭಾನಾಪೂರದ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ ಒಮ್ಮೆ ಆಯ್ಕೆ ಆದರೇ ಮರಳಿ ಆಯ್ಕೆಯಾಗುವುದು ಸುಲಭದ ಮಾತಲ್ಲ, ಇವರು ಬರೊಬ್ಬರಿ 15 ವರ್ಷಗಳಿಂದ ನಿರಂತರ ಆಯ್ಕೆಗೊಳುತ್ತಿರುವದಕ್ಕೆ ಇವರ ಕಾರ್ಯದಕ್ಷತೆಯೇ ಕಾರಣವಾಗಿದೆ, ಇವರ ದಕ್ಷ ಆಡಳಿತಕ್ಕೆ ಆಡಳಿತ ಮಂಡಳಿ ಸದಸ್ಯರು ಕೈ ಜೋಡಿಸಿದ್ದಾರೆ. ತಾಲೂಕಿನ ಸಹಕಾರಿಗಳು, ರೈತರು ಇವರ ಆಡಳಿತವನ್ನು ಮೆಚ್ಚಿಕೊಂಡು ಸೈ ಎಂದಿದ್ದಾರೆ.
ಈ ಕುರಿತು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಗೊಂಡ ಚಂದ್ರಶೇಖರಯ್ಯ ಹಿರೇಮಠ ಪತ್ರಿಕೆಯೊಮದಿಗೆ ಮಾತನಾಡಿ ಫಿಕಾರ್ಡ ಬ್ಯಾಂಕ್ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡಿದ್ದು, ಶಾಸಕ ಬಸವರಾಜ ರಾಯರಡ್ಡಿ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ರೈತಪರ ಕೆಲಸ ಕಾರ್ಯಗಳನ್ನು ಮಾಡಿರುವೆ, ಕ್ಷೇತ್ರದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಅಭಿವೃದ್ದಿಯಲ್ಲಿ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿಯವರ ಪರಿಶ್ರಮ ಕೊಡುಗೆ ಅಪಾರವಾಗಿದೆ, ಉತ್ತಮ ಕಾರ್ಯಗಳಿಂದ ಪ್ರಶಸ್ತಿ ಸಂದಿದೆ, ಪ್ರಶಸ್ತಿಯಿಂದ ಜವಬ್ದಾರಿ ಹೆಚ್ಚಾಗಿದೆ, ಶಾಸಕ ಬಸವರಾಜ ರಾಯರಡ್ಡಿಯವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇನೆ ಎಂದರು.