
ಬೆಂಗಳೂರು, ನ, 14; ಪ್ರತಿಧೀ ಫೌಂಡೇಶನ್ ನಿಂದ “ಸ್ವಸ್ಥ ಕರ್ನಾಟಕ 2024” ಬೃಹತ್ ರಾಷ್ಟ್ರ ಮಟ್ಟದ ಉಚಿತ ಸಮಗ್ರ ಆರೋಗ್ಯ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ನ. 15 ಮತ್ತು 16 ರಂದು ನಗರದ ಅರಮನೆ ಮೈದಾನದ 9ನೇ ಗೇಟ್ ಪ್ರಿನ್ಸಸ್ ಶ್ರೈನ್ ನಲ್ಲಿ ಆಯೋಜಿಸಲಾಗಿದೆ.
ಸಮಗ್ರ ಆರೋಗ್ಯ ಕ್ಷೇತ್ರವನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಜೊತೆಗೆ ಆರೋಗ್ಯ ವಲಯದವರಿಗಾಗಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಎಚ್. ಎಮ್ ರೇವಣ್ಣ, ರಾಜೀವ್ ಗಾಂಧಿ ಯೂನಿವರ್ಸಿಟಿ ಓಫ್ ಹೆಲ್ತ್ ಸೈನ್ಸಸ್, ಬೆಂಗಳೂರು ಇವೆಂಟ್ ಡೈರೆಕ್ಟರ್ ಡಾ. ಎಸ್. ಸಚ್ಚಿದಾನಂದ್ ಅವರು ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ. ಪ್ರಜ್ವಲ ರಾಜ್ ತಿಳಿಸಿದ್ದಾರೆ.
ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ಸಮಾಲೋಚನೆಗೆ ವ್ಯವಸ್ಥೆ ಮಾಡಿದ್ದು, ಇಸಿಜಿ, ಇಕೋ ಜೊತೆಗೆ ನುರಿತ ಹೃದಯ ತಜ್ಞರಿಂದ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ, ಇ.ಎನ್.ಟಿ ಪರೀಕ್ಷೆ ಮತ್ತು ಆಡಿಯೋಮೆಟ್ರಿ ಮತ್ತು ತಜ್ಞ ವೈದ್ಯರಿಂದ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಗರ್ಭ ಕಂಠದ ಕ್ಯಾನ್ಸರ್ ಪರೀಕ್ಷೆಗಳು, ಗುದ ದ್ವಾರದ ತೊಂದರೆಗಳ ಪರೀಕ್ಷೆ ಮತ್ತು ಸ್ಥನ ಕ್ಯಾನ್ಸರ್ ಪತ್ತೆ ಹಚ್ಚಲು ಮ್ಯಾಮೋಗ್ರಾಮ್, ಇತರೆ ಕ್ಯಾನ್ಸರ್ ಪತ್ತೆ ಮಾಡುವ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಗುದದ್ವಾರದ ಸಮಸ್ಯೆಗಳಿಗೆ ಪರಿಹಾರ, ಚರ್ಮ ರೋಗ ತಪಾಸಣೆ, ಫಲವತ್ತತೆ ಕುರಿತ ಸಮಾಲೋಚನೆ, ಮಕ್ಕಳ ತಜ್ಞರು, ನರರೋಗ ತಜ್ಞರು ಉಪಯುಕ್ತ ಸಲಹೆ ನೀಡಲಿದ್ದಾರೆ. ಜೊತೆಗೆ ಆರೋಗ್ಯ ವಲಯದವರಿಗೆ ಉಚಿತ ಉದ್ಯೋಗ ಮೇಳ ಹಮ್ಮಿಕೊಂಡು ಉದ್ಯೋಗಾವಕಾಶಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ : 9886533393 ಹಾಗೂ 9449097947