Drivers union demands withdrawal of GPS, panic button
ಕೊಟ್ಟೂರು: ರಾಜ್ಯ ಸರ್ಕಾರವು ಹೊರಡಿಸಿರುವ ಜಿಪಿಎಸ್, ಫ್ಯಾನಿಕ್ ಬಟನ್ (ವಿ. ಎಲ್. ಟಿ.ಡಿ ) ಡಿವೈಸನ್ನು ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಂಬುಲೆನ್ಸ್ ಹಾಗೂ ಶಾಲಾ ವಾಹನಗಳಿಗೆ ಕಡ್ಡಾಯ ಆದೇಶ ವಿರೋಧಿಸಿ ನಮ್ಮ ವಾಹನಗಳಿಗೆ ಆಲ್ ಇಂಡಿಯಾ ಪರ್ಮಿಟ್ ( All India Permit) ನೀಡಬೇಕೆಂದು ಎ ಐ ಆರ್ ಟಿ ಡಬ್ಲ್ಯೂ ಎಫ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂವಿಜಯನಗರ ಜಿಲ್ಲಾ ಸಂಚಾಲಕರು ಕೆ ಎನ್ ಸಂತೋಷ್ ಕುಮಾರ್ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೆ ಬಿ ಆಟೋ ನಿಲ್ದಾಣದಲ್ಲಿ ನಡೆದ ಆಟೋ ಚಾಲಕರು ಕಾರ್ ಚಾಲಕರು ಹಾಗೂ ಗೂಡ್ಸ್ ಕ್ಯಾಪ್ ಚಾಲಕರು ಉದ್ದೇಶಿಸಿ ಮಾತನಾಡಿದರು ಯಾವುದೇ ಕಾರಣಕ್ಕೂ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಸಿಕೊಳ್ಳುವುದಿಲ್ಲ ಇದರಿಂದ ಸಾಕಷ್ಟು ಡೈವರ್ಸ್ ಗಳ ಹೊಟ್ಟೆ ಮೇಲೆ ಒಡೆಯುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುರೂತ್ತಿದೆ. ಕೇಂದ್ರ ಸಾರಿಗೆ ಇಲಾಖೆಯು 7,550 ರೂ ನಿಗದಿ ಮಾಡಿದ್ದರೆ ರಾಜ್ಯದಲ್ಲಿ 13 ರಿಂದ 15 ಸಾವಿರವರೆಗೆ ರೂಪಾಯಿ ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿಗೆ ಜಿಲ್ಲೆಯ ಆರ್ ಟಿ ಓ ಗಳಿಗೆ ಕಮಿಷನ್ ಸಿಗಲಿದೆ. ಹೀಗಾಗಿಯೇ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಹಿಂ ಪಡೆಯಬೇಕೆಂದು ನವಂಬರ್ 15 ಶುಕ್ರವಾರದಂದು ಬೆಳ್ಳಿಗೆ ವಿಜಯನಗರ ಜಿಲ್ಲೆಯ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣೆಯಿಂದ ಪ್ರತಿಭಟನೆಯೂ ಆರಂಭವಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತ, ಪುನೀತ್ ರಾಜಕುಮಾರ್ ಸರ್ಕಲ್, ವೀರ ಮದಕರಿ ಸರ್ಕಲ್, ಎಪಿಎಂಸಿ ಸರ್ಕಲ್ ಮುಖಾಂತರ ತೆರಳಿ ಆರ್ ಟಿ ಓ ಆಫೀಸ್ ಪ್ರತಿಭಟನೆ ನಡೆಯಲಿದೆ ಹಾಗೂ ನಂತರ ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕರಾದ ಎಚ್. ಆರ್ ಗವಿಯಪ್ಪ ಅವರ ನಿವಾಸಕ್ಕೆ ತೆರಳಿ ಮನವಿ ಪತ್ರ ನೀಡಲಾಗುತ್ತದೆ. ಆದ್ದರಿಂದ ಎಲ್ಲರೂ ಡ್ರೈವರ್ಸ್ ಮತ್ತು ಮಾಲೀಕರು ಈ ಪ್ರತಿಭಟನೆಗೆ ಕೈಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಕಾರ್ ಚಾಲಕರ ಸಂಘದ ಅಧ್ಯಕ್ಷ ಗಿರೀಶ್, ಗೋಪಿನಾಥ್, ಕೊಟ್ಟೂರು ತಾಲೂಕು ಆಟೋರಿಕ್ಷಾ ಸಂಘದ ರಾಜಣ್ಣ, ಬಂಡಿ ಕೊಟ್ರೇಶ್ ಉಪಾಧ್ಯಕ್ಷ, ಕಾರ್ಯದರ್ಶಿ ಕೊಟ್ರೇಶ್ ತೇನಗ್ಗಿನಕೇರಿ, ಕೆ. ಹಾಲೇಶ್ ,ಕಾರ್ ಮತ್ತು ಆಟೋ ಚಾಲಕರ ಸರ್ವ ಪದಾಧಿಕಾರಿಗಳು ಇತರ ಉಪಸ್ಥರಿದ್ದರು.