19th Nov. Student Union Mass Meeting: NG Karatagi

ಗಂಗಾವತಿ: ನಗರದ ವಿದ್ಯಾಗಿರಿಯಲ್ಲಿರುವ ಶ್ರೀ ಹೆಚ್.ಆರ್.ಎಸ್.ಎಂ. ಪದವಿ ಕಾಲೇಜು ಪ್ರಾರಂಭಗೊಂಡು ೫೦ ವರ್ಷ ಗತಿಸಿದ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸುವುದಕ್ಕಾಗಿ ಹಳೇಯ ವಿದ್ಯಾರ್ಥಿಗಳ ಸಭೆಯನ್ನು ನವೆಂಬರ್ ೧೯ ಬೆಳಗ್ಗೆ ೧೧-೦೦ ಗಂಟೆಗೆ ಪ್ರಾಚಾರ್ಯರಾದ ಲಲಿತಾಬಾವಿಕಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ಕರೆಯಲಾಗಿದೆ.
೧೯೭೪ ರಿಂದ ೧೭೨೩ ರವೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಭೆ ಆಗಮಿಸಿ ಕಾರ್ಯಕ್ರಮದ ರೂಪರೇಶ ಚರ್ಚಿಸಬೇಕಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಹೆಚ್.ಆರ್.ಎಸ್.ಎಂ. ಕಾಲೇಜು ಹಳೇಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಜಿ.ಕಾರಟಗಿ ತಿಳಿಸಿದ್ದಾರೆ.
ಕಾಲೇಜಿಗೆ ೫೦ ವರ್ಷ ತುಂಬುತ್ತಿರುವುದರಿAದ ಸಾಂಸ್ಕೃತಿಕ ಸೇರಿದಂತೆ ಚಟುವಟಿಕೆ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಭೆಯಲ್ಲಿ ಸಮಿತಿ ರಚಿಸಿ ಜವಬ್ದಾರಿ ವಹಿಸಲಾಗುತ್ತಿದೆ ಎಲ್ಲಾ ಹಳೇಯ ವಿದ್ಯಾರ್ಥಿಗಳು ಅಭಿಮಾನದಿಂದ ಆಗಮಿಸಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
Kalyanasiri Kannada News Live 24×7 | News Karnataka
