Successfully conducted health camp for school children.
ವರದಿ : ಬಂಗಾರಪ್ಪ .ಸಿ.
ಹನೂರು : ಕಾಡಂಚಿನ ಗ್ರಾಮಗಳ ಶಾಲಾ ಮಕ್ಕಳಿಗೆ
ಎರಡು ದಿನಗಳ ದಂತ ಚಿಕಿತ್ಸೆ ಹಾಗೂ ಶಾಲಾ ಮಕ್ಕಳ ಆರೋಗ್ಯ ಶಿಬಿರವನ್ನು ನಮ್ಮೂರ ಶಾಲೆಯಾದ ಮಲೆಮಹಾದೇಶ್ವರ ಬೆಟ್ಟದಲ್ಲಿ,
ರಾಷ್ಟ್ರೀಯ ಸೇವಾ ಯೋಜನೆ, ರೋಟರಾಕ್ಟ್, ರಾಮಯ್ಯ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆ, ದಂತ ವಿಜ್ಞಾನ ವಿದ್ಯಾಲಯ ಮತ್ತು ರೋಟರಿ ಬೆಂಗಳೂರು ಮಾನ್ಯತ ಸಹಯೋಗದಲ್ಲಿ ನಡೆಸಲಾಯಿತು .
ಹನೂರು ತಾಲ್ಲೂಕಿನ ಕೋಣನಕೆರೆ ಬುಡಕಟ್ಟು ಆಶ್ರಮ ಶಾಲೆ ಮತ್ತು ಬುಡಕಟ್ಟು ಆಶ್ರಮ ಶಾಲೆ ಪೊನ್ನಾಚಿ, ಗಳಲ್ಲಿ ದಿನಾಂಕ 09 & 10 ನವೆಂಬರ್ 2024 ರಂದು ಆಯೋಜಿಸಲಾಗಿತ್ತು.
ನಮ್ಮೂರ ಶಾಲೆ ಶಿಬಿರವನ್ನು ಬುಡಕಟ್ಟು ಮಕ್ಕಳ ಹಾಗೂ ಕಾಡಂಚಿನ ಗ್ರಾಮಸ್ಥರ ದಂತ, ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಧ್ಯೇಯೋದ್ದೇಶದೊಂದಿಗೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ ನುರಿತ ದಂತ ವೈದ್ಯರು, ಮಕ್ಕಳ ಆರೋಗ್ಯ ತಜ್ಞರು, ಸ್ವಯಂ ಸೇವಕರು ಭಾಗವಹಿಸಿದ್ದರು. ರಾಮಯ್ಯ ದಂತ ವಿದ್ಯಾಲಯದಿಂದ ಡಾ|| ಪುಷ್ಪಾಂಜಲಿ, ಡಾ|| ಅನಿತಾ ಸಾಗರ್ಕಾರ್ ಮತ್ತು ತಂಡ ದಂತ ಪರೀಕ್ಷೆಯ ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಮಕ್ಕಳಿಗೆ ನೀಡಿದರು. ಬಾಯಿಯ ಆರೋಗ್ಯ, ಹಲ್ಲುಗಳ ಆರೋಗ್ಯ, ದಂತ ಕುಳಿ ಮತ್ತು ಅದನ್ನು ನಿಭಾಯಿಸುವಲ್ಲಿ ಮಕ್ಕಳು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಮಕ್ಕಳಿಗೆ ಮನವರಿಕೆ ಮಾಡಿದರು. ರಾಮಯ್ಯ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆಯ ತಂಡ ಡಾ|| ಅನಂತರಾಮ್ ರವರ ಮಾರ್ಗದರ್ಶನದಲ್ಲಿ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ನಡೆಸಿ ಅಗತ್ಯವಿರುವ ಔಷಧಗಳನ್ನು ವಿತರಿಸಿದರು. ಹಲವು ವರ್ಷಾಗಳಿಂದ ಶಿಬಿರಗಳನ್ನು ಆಯೋಜಿಸುವ ಮೂಲಕ ಮಕ್ಕಳ ಆರೋಗ್ಯ ಸ್ಥಿತಿ-ಗತಿಗಳ ಮಾಹಿತಿಯನ್ನು ಕ್ರೂಡೀಕರಿಸಿ ಸೂಕ್ತ ಪರಿಹಾರಗಳನ್ನು ಕೈಗೊಳ್ಳುವ ಯೋಜನೆಯ ಬಗ್ಗೆ ತಿಳಿಸಲಾಯಿತು.
ರೋಟರಿ ಬೆಂಗಳೂರು ಮಾನ್ಯತ ಸಂಸ್ಥೆ ಮತ್ತು ರಾಮಯ್ಯ ರೋಟರಾಕ್ಟ್ ಕ್ಲಬ್ ನ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಲೇಖನ ಸಾಮಗ್ರಿಗಳನ್ನು ಮತ್ತು ಕಾಡಂಚಿನ ಅಗತ್ಯವಿರುವ ಕುಟುಂಬಗಳಿಗೆ ಸೋಲಾರ್ ಆಧಾರಿತ ವಿದ್ಯುತ್ ದೀಪಗಳನ್ನೂ ಸಹ ವಿತರಿಸಲಾಯಿತು. ರೋಟರಿ ಬೆಂಗಳೂರು ಮಾನ್ಯತ ಅಧ್ಯಕರಾದ ರೋ. ರವೀಂದ್ರ . ಎಂ ರವರು ಶಿಬಿರವನ್ನು ಆಯೋಜಿಸುವಲ್ಲಿ ರಾಮಯ್ಯ ತಂಡದ ಪರಿಶ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಂದುವರಿದು ಶಾಲೆಯ ಅಗತ್ಯತೆಗಳನ್ನು ಪೂರೈಸಲು ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದರು.
ರಾಮಯ್ಯ ರೋಟರಾಕ್ಟ್ ಕ್ಲಬ್ನ ವತಿಯಿಂದ ಶಿಬಿರದ ಮುಖ್ಯಸ್ಥರಾದ ರೋ. ನಂದಿನಿ ಎಂ. ಎಸ್, ರೋ. ಯಶವಂತ ಗೌಡ ಇವರ ಮುಂದಾಳತ್ವದಲ್ಲಿ ಕ್ಲಬ್ ನ ಸದಸ್ಯರು ಮಕ್ಕಳಿಗೆ ವಿವಿಧ ರೀತಿಯ ಆಟೋಟಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಿ, ಮಕ್ಕಳಿಗೆ ದೀಪಗಳನ್ನು ತಯಾರಿಸುವ ಮತ್ತು ಬಣ್ಣವನ್ನು ಮಾಡುವ ಕೌಶಲ್ಯವನ್ನು ಮನನ ಮಾಡಿಸಿದರು.
ಕಾನನ ಶಿಬಿರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಶಿಬಿರದಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಕಾಡಂಚಿನ ಗ್ರಾಮಸ್ಥರಿಗೆ ಇದರಿಂದ ಅನುಕೂಲವಾಗಿದೆಯೆಂದು ತಿಳಿಸಿದರು. ಈ ರೀತಿ ಶಿಬಿರಗಳ ಮಹತ್ವವನ್ನು ಅರಿತು ಕಾಡಂಚಿನ ಜನರಿಗೆ ಅಕ್ಷರ, ಆರೋಗ್ಯದ ಸಹಾಯಹಸ್ತವನ್ನು ಚಾಚಿದ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮತ್ತು ಶಿಬಿರದ ಜೊತೆಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.ಚಾಮರಾಜನಗರ. ತಾಲೂಕು ಸೋಲಿಗ ಅಭಿವೃದ್ಧಿ ಸಂಘ. ಹನೂರು ಇವರ ಸಹಕಾರ ದೊಂದಿಗೆ ಕಾರ್ಯಕ್ರಮ ನಡೆಯಿತು .