Breaking News

ಹೊಸಳ್ಳಿ ಗ್ರಾಮದಲ್ಲಿ ಶ್ರೀ ಮರಿಯಮ್ಮದೇವಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ.

Installation of Shri Mariammadevi temple idol in Hosalli village.

ಜಾಹೀರಾತು

ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಇಂದು ನೂತನವಾಗಿ ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಮರಿಯಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹೋಮ ಹವನಗಳಿಂದ ವಿಜೃಂಭಣೆಯಿAದ ಜರುಗಿತು.
ಈ ಸಮಾರಂಭದ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಸ್ವಾಮಿಗಳು, ಸುಳೆಕಲ್ ಮಠದ ಸ್ವಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮಾಜಿ ಸಚಿವರಾದ ಮಲ್ಲಿಕಾರ್ಜುನ್ ನಾಗಪ್ಪ, ಬಿಜೆಪಿ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ದುರುಗಪ್ಪ ಆಗೋಲಿ, ವಾಣಿಜ್ಯೋಧ್ಯಮಿಗಳಾದ ಕೆ ಕಾಳಪ್ಪ, ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಈ ದೇವಸ್ಥಾನಕ್ಕೆ ವಿಶೇಷವಾಗಿ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿಯವರು ವೈಯಕ್ತಿಕವಾಗಿ ೫ ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿರುತ್ತಾರೆ. ದೇವಸ್ಥಾನದ ಸುತ್ತ ಮುತ್ತ ಹಾಗೂ ಮುಂಭಾಗದಲ್ಲಿ ಸಿಸಿ ರಸ್ತೆ ಕಾಮಗಾರಿ ನಿರ್ಮಿಸಲು, ದೇವಸ್ಥಾನ ಸುಂದರೀಕರಣಕ್ಕಾಗಿ ೯.೫೦ ಲಕ್ಷ ಅನುದಾನವನ್ನು ನೀಡಿದ್ದಾರೆ. ಈ ಕಾರ್ಯಕ್ರಮ ಅವರ ನೇತೃತ್ವದಲ್ಲಿಯೇ ನಡೆಯಬೇಕಿತ್ತು, ಆದರೆ ಸಂಡೂರು ಉಪಚುನಾವಣೆ ಹಿನ್ನೆಲೆಯಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಜರುಗಿದವು. ಮುಂದಿನ ದಿನಗಳಲ್ಲಿ ವಿಶೇಷವಾಗಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಅಭಿನಂದಿಸಲಾಗುವುದು ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
ನಂತರ ಹೊಸಳ್ಳಿ ಗ್ರಾಮದ ಯುವಕರಿಗೆ ಸಂಜೆ ರಸಮಂಜರಿ ಕಾರ್ಯಕ್ರಮ ಜರುಗಿತು. ಈ ಸಮಾರಂಭದಲ್ಲಿ ಊರಿನ ಸರ್ವ ಸಮಾಜದ ಮುಖಂಡರು, ಗಣ್ಯರು, ಮಹಿಳೆಯರು ಪಾಲ್ಗೊಂಡಿದ್ದರು.

About Mallikarjun

Check Also

ಸಂಡೂರು ಮನೆ ಮನೆ ಪ್ರಚಾರ : ಕಾಂಗ್ರೆಸ್ ಅನ್ನಪೂರ್ಣ ಗೆಲುವು ಖಚಿತ : ಜ್ಯೋತಿ

Sandur house to house campaign: Congress sure to win Annapurna: ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಗ್ಯಾರಂಟಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.