Congress stood for daylight robbery under the pretext of development: Ex-minister Halappa Achara allegation
ಕೊಪ್ಪಳ : ರಾಜ್ಯದ ಅಭಿವೃದ್ದಿಯ ನೆಪದಲ್ಲಿ ಕಾಂಗ್ರೆಸ್ ಸರಕಾರ ಹಗಲು ದರೋಡೆಗೆ ನಿಂತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಆರೋಪಿಸಿದರು.
ಅವರು ಕುಕನೂರು ಪಟ್ಟಣದ ಮಸಬಹಂಚಿನಾಳನ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಂಘಟನಾ ಪರ್ವ ಮಂಡಲದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅಭಿವೃದ್ದಿ ನೆಪದಲ್ಲಿ ಹಿಂದೂ ದೇವಸ್ಥಾನದ ಆಸ್ತಿಯನ್ನು ಲೂಟಿ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ಅಭಿವೃದ್ದಿಗೆ ಸಾಕಷ್ಟು ಜಾಗೆಗಳಿದ್ದು ದೇವಸ್ಥಾನದ ಆಸ್ತಿಯನ್ನು ಕೇಳುವುದು ಯಾವ ನ್ಯಾಯ ಅಲ್ಲದೆ ಕರ್ನಾಟಕದಲ್ಲಿ ಇಂದು ಹಗಲು ದರೋಡೆ ಮಾಡುವ ಸರ್ಕಾರ ಯಾವುದಾದರು ಇದೆ ಎಂದರೇ ಅದು ಸಿದ್ದರಾಮಯ್ಯನವರ ಸರ್ಕಾರವಾಗಿದೆ ಎಂದು ಗುಡುಗಿದರು.
ನಮ್ಮ ಭಾಜಪ ವಿಶ್ವದಲ್ಲಿಯೇ ಅತ್ತ್ಯುತ್ತಮ ಸಂಘಟನೆ ಹೊಂದಿದಪಕ್ಷವಾಗಿದೆ. ಜಿಲ್ಲೆಯಲ್ಲಿ 33 ಸಾವಿರ ಪ್ರಾಥಮಿಕ ಸದಸ್ಯಸತ್ವ ಹೊಂದಿರುವ ವಿಧಾನಸಭಾ ಕ್ಷೇತ್ರ ಎಂದರೇ ಅದು ಯಲಬುರ್ಗಾ ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿ ಪ್ರಥಮವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ದಿನಗಳಲ್ಲಿ ಏಳು ಸಾವಿರ ಪ್ರಾಥಮಿಕ ಸದಸ್ಯಸತ್ವವನ್ನು ಮಾಡುವ ಮೂಲಕ ಕರ್ನಾಟಕದಲ್ಲಿ ಪ್ರಥಮವಾಗಬೇಕು ಅದಕ್ಕೆ ಎಲ್ಲಾ ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು.
ನಂತರ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣವರ್ ಮಾತನಾಡಿ ಜಿಲ್ಲೆಯಲ್ಲಿ 1.32 ಲಕ್ಷ ಜನ ಭಾಜಪ ಸದಸ್ಯತ್ವವನ್ನು ಪಡೆದಿದ್ದಾರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಜಿಲ್ಲೆ ನಮ್ಮದಾಗಿದೆ ಎಂದರು.
ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷ ಮಾರುತಿ ಗಾವರಾಳ, ಬಸಲಿಂಗಪ್ಪ ಭೂತೆ, ಸಿ ಎಚ್ ಪೊಲೀಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಸಿದ್ದು ಮಣ್ಣಿನವರು, ಮುಖಂಡರಾದ ಬಸವನಗೌಡ ತೊಂಡಿಹಾಳ, ಶರಣಪ್ಪ, ಅಂದಯ್ಯ, ನರಸಿಂಗರಾವ್ ಕುಲಕರ್ಣಿ , ಶಿವಲೀಲಾ ದಳವಾಯಿ, ಹಾಗೂ ಇತರರು ಇದ್ದರು.