Breaking News

ಮಾಜಿಮುಖ್ಯಮಂತ್ರಿಗಳಾದ ದಿವಂಗತ ನಿಜಲಿಂಗಪ್ಪನವರಿಗೆ ಸೇರಿದ್ದುಮನೆ ಮಾರಾಟಕ್ಕಿದೆ

A house belonging to former Chief Minister late Nijalingappa is up for sale

ಜಾಹೀರಾತು

ಮನೆಯ ಹೆಸರು “ವಿನಯ”. ಚಿತ್ರದುರ್ಗದ ಡಿಸಿ ಕಚೇರಿ ಬಳೆ ಇರುವ ಮನೆಯಿದು. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ನಿಜಲಿಂಗಪ್ಪನವರಿಗೆ ಸೇರಿದ್ದು. ಪ್ರಾಮಾಣಿಕವಾಗಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ಶ್ರೀ ನಿಜಲಿಂಗಪ್ಪನವರು ಪ್ರಮುಖರು. ಇಂತಹ ಮಹಾನುಭಾವರಿಗೆ ಸೇರಿದ ಮನೆ ಇಂದು ಮಾರಾಟಕ್ಕಿದೆ ಎಂಬ ಈ ಜಾಹೀರಾತು ನೋಡಿ ಮನಸ್ಸಿಗೆ ನಿಜಕ್ಕೂ ವೇದನೆ ಆಯಿತು. ಇದನ್ನು ಒಂದು ಸ್ಮಾರಕ ಮಾಡಿ, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರ ಜೀವನ, ಆಡಳಿತ, ರಾಜ್ಯಕ್ಕೆ ಕೊಡುಗೆ, ಅಂದಿನ ವಿದ್ಯಮಾನಗಳು… ಇವುಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಪ್ರಯತ್ನಿಸ ಬೇಕಾಗಿತ್ತು. ಆದರೆ ದಿವ್ಯ ನಿರ್ಲಕ್ಷವೇ ಈ ಮಾರಾಟದ ಜಾಹೀರಾತಿಗೆ ಕಾರಣ! ಈ ಮಹಾನುಭಾವರ ಮನೆ ಮಾರಾಟದ ಸರಕಾಗದೆ, ಸ್ಮಾರಕವಾಗುವ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. 2008-2013 ಅವಧಿಯಲ್ಲಿ ನಮ್ಮ ಸರ್ಕಾರ ಇದ್ದಾಗ, ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು ವಾಸ ಮಾಡಿದ್ದ ಮನೆಯನ್ನು ಈಗ ಮಾಲೀಕರಾಗಿರುವರು ಒಂದು ವಾಣಿಜ್ಯ ಸಂಕೀರ್ಣ ಮಾಡಲು ಹೊರಟದ್ದನ್ನು ಕೇಳಿ, ನಗರಾಭಿವೃದ್ಧಿ ಸಚಿವ ನಾಗಿದ್ದ ನಾನು ಕೂಡಲೇ ಅದನ್ನು ಒಂದು ಹೆರಿಟೇಜ್ ಕಟ್ಟಡವೆಂದು ಘೋಷಿಸಿ, ಸರ್ಕಾರ ಅದನ್ನು ಒಳ್ಳೆ ಸ್ಮಾರಕ ಮಾಡುವ ದಿಕ್ಕಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಹೆಜ್ಜೆ ಹಾಕಿದ್ದೆ. ಆ ಸ್ಮಾರಕದ ಶಂಕು ಸ್ಥಾಪನೆಗೆ ಅಂದಿನ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಬಂದಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅದೇ ರೀತಿ ಕರ್ನಾಟಕದ ಹೆಮ್ಮೆಯ ಲೇಖಕ ಮಾಲ್ಗುಡಿ ಡೇಸ್ ಖ್ಯಾತಿಯ ಶ್ರೀ ಆರ್ ಕೆ ನಾರಾಯಣ್ ಅವರು ವಾಸಿಸುತ್ತಿದ್ದ ಮೈಸೂರಿನ ಮನೆಯನ್ನು ವಾಣಿಜ್ಯ ಸಂಕೀರ್ಣ ಮಾಡಲು ಹೊರಟಾಗ ಅದಕ್ಕೂ ತಡೆ ಒಡ್ಡಿ ಅದನ್ನು ಒಂದು ಸ್ಮಾರಕ ಮಾಡುವುದರಲ್ಲಿ ಯಶಸ್ವಿಯಾಗಿದ್ದೆವು. ಶ್ರೀ ನಿಜಲಿಂಗಪ್ಪನವರು ನಮ್ಮ ನಾಡಿನ ಹೆಮ್ಮೆಯ ನಾಯಕ. ಇಂತಹ ನಾಯಕರ ಮನೆ, ಮುಂದಿನ ಪೀಳಿಗೆಗೆ ಪ್ರೇರಣೆ ಉಂಟುಮಾಡುವ ಸ್ಮಾರಕವಾಗುವುದು ಅತ್ಯಗತ್ಯ.

About Mallikarjun

Check Also

2ನೂತನಅಂಗನವಾಡಿಯನ್ನು ನಗರಸಭೆ ಸದಸ್ಯ ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ಇವರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ

2 New Anganwadi Centers Inaugurated by Municipal Council Member Shri Mati “Huligemma Yara” ಕರ್ನಾಟಕ ಸರ್ಕಾರಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.