Breaking News

ಹರಿಜನ ಮತ್ತು ಮಾದಿಗ ಸಮಾಜದವರಿಗೆ 2 ಎಕರೆಸ್ಮಶಾನಸಾಕಾಗುವುದಿಲ್ಲ

2 acre cemetery is not enough for Harijan and Madiga community

ಜಾಹೀರಾತು

ಗಂಗಾವತಿ:ಇಂದು ದಿನಾಂಕ – 08-11-2024 ರಂದು ಹೊಸಕರಾ ಗ್ರಾಮ ಪಂಚಾಯತ್ ವಾಪ್ತಿಯ ಹೊಸ್ಕರಾ, ಹೊಸ್ಕರಾ ಡಗ್ಗಿ 4-30 ಎಕರೆ ಜಮೀನಿನಲ್ಲಿ ಮುಸ್ಲಿಂ, ಎಲ್ಲಾ ಜಾತಿಯವರಿಗೆ ಸ್ಮಶಾನಕ್ಕಾಗಿ ಇಟ್ಟಿದ್ದು, ಇದರಲ್ಲಿ ಹರಿಜನ ಮತ್ತು ಮಾದಿಗ ಸಮಾಜದವರಿಗೆ ಎಕರೆ ಜಮೀನನ್ನು ಬೇರೆಯಾಗಿ ಮೀಸಲಾಗಿ ಇಟ್ಟಿದ್ದು ಇರುತ್ತದೆ. ಸದ್ಯ ಮಾದಿಗ ಜನಾಂಗದವರ ಬೇಡಿಕೆ ಏನಂದರೆ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು ಮತ್ತು ಸ್ಮಶಾನ ದೂರಗುತ್ತಿದ್ದು 2 ಎಕರೆ ಸ್ಮಶಾನ ಸಾಕಾಗುವುದಿಲ್ಲ ಸರ್ವಜಾತಿವರಿಗೆ ಮೀಸಲಾಗಿ ಇಟ್ಟಿರುವ 4-30 ಎಕರೆ ಗುಂಟೆ

ಜಮೀನಿನಲ್ಲಿ ನಮಗೆ 20 ಗುಂಟೆ ಜಮೀನನ್ನು ನೀಡಬೇಕು ಎಂದು ಬೇಡಿಕೆಯಾಗಿದೆ ಸರ್. ಆದರೆ ಹೊಸಕರಾ, ಹೊಸಕರಾ ಡಗ್ಗಿ ಗ್ರಾಮದಲ್ಲಿ ಮುಸ್ಲಿಂ ಮತ್ತು ಸರ್ವ ಜಾತಿಯವರ ಜಾಗದಲ್ಲಿ ಇನ್ನೂ 20 ಗುಂಟೆ ಜಾಗ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಮುಸ್ಲಿಂ ಮತ್ತು ಸರ್ವಜಾತಿಯವರು ಈ ಸ್ಮಶಾನದಲ್ಲಿ ಕೋಟೆಯ ಕ್ಯಾಂಪು ಹೊಸಕೆರಾ ಡಗ್ಗಿ, ಹೊಸಕೆರಾ, ಹೊಸಕೆರೆ ಕ್ಯಾಂಪ್ ನ ಎಲ್ಲ ಜಾತಿಯವರು ಬಂದು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದು

ಇರುತ್ತದೆಆದಕಾರಣ ನಮಗೆ ಇಷ್ಟು ಜಾಗ ಸಾಕಾಗುವುದಿಲ್ಲ ನಾವು ಕೊಡುವುದಿಲ್ಲ ಎಂದು ವಾದವನ್ನು ಮಾಡುತ್ತಿದ್ದಾರೆ ಸರ್. ಸದರಿ ವಿಷಯ ತಿಳಿದು ಹೊಸಕರಾ ಗ್ರಾಮಕ್ಕೆ ಆಗಮಿಸಿ ಹೊಸಕೆರಾ ಗ್ರಾಮ ಪಂಚಾಯಿತಿಯಲ್ಲಿ ಸರ್ವಜಾತಿ ಮತ್ತು ಮಾದಿಗ ಸಮಾಜದವರನ್ನು ಕರೆದು ಸಭೆಯನ್ನು ಮಾಡಿದ್ದು ಇರುತ್ತದೆ ಸರ್. ಸದ್ರಿ ಸಮಯದಲ್ಲಿ ಎರಡು ಸ್ಮಶಾನ ಕ್ಕೆ ಖುದ್ದಾಗಿ ಭೇಟಿ ನೀಡಿದ್ದು ಸದ್ರಿ ಸಮಯದಲ್ಲಿ ಯಾರು ಯಾರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಅವರನ್ನ ಅಲ್ಲಿಂದ ಜಾಗ ಖಾಲಿ ಮಾಡಿಸಲಾಗುವುದು, ಹೆಚ್ಚುವರಿಯಾಗಿ ಮಾದಿಗ ಜನಾಂಗದವರಿಗೆ ಸ್ಮಶಾನವನ್ನು ನೀಡಲು ಬರುತ್ತದೆ ಇಲ್ಲ ಎಂಬುದನ್ನು ನೋಡಿ ಪರಿಶೀಲನೆ ಮಾಡಿ 15 ದಿನಗಳಲ್ಲಿ ಸದ್ರಿ ಸಮಸ್ಯೆ ಬಗೆಹರಿಸಲಾಗುವುದೆಂದು ಮಾನ್ಯ ಶ್ರೀ ಸಿದ್ದರಾಮೇಶ್ವರ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೊಪ್ಪಳ ರವರು ಭರವಸೆ ನೀಡಿದರು ಅಲ್ಲಿವರಿಗೂ ಯಾರು ಕೂಡ ಜಗಳ ಮಾಡದ ಶಾಂತತೆ ಕಾಪಾಡಿಕೊಳ್ಳಬೇಕೆಂದು ಮತ್ತು ಯಥಾ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.ಹಾಗೂ ಸದ್ಯ ಶೌರದಂಗಡಿ ಮತ್ತು ಹೋಟೆಲ್, ದೇವಸ್ಥಾನ, ಪ್ರವೇಶದ ಬಗ್ಗೆ ಯಾವುದೇ ತಕರಾರಿಲ್ಲ ಎಲ್ಲ ಮುಕ್ತವಾಗಿದೆ ಎಂದು ಸದ್ರಿ ವೇಳೆ ಹಾಜರಿದ್ದ ಮಾದಿಗ ಸಮಾಜದವರು ಹೇಳಿದರು,ಸದ್ರಿ ವೇಳೆ ಭಾಗವಹಿಸಿದ ಅಧಿಕಾರಿಗಳು ಮಾನ್ಯ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೊಪ್ಪಳ,ಶ್ರೀ ನಾಗರಾಜ್ ಮಾನ್ಯ ತಶೀಲ್ದಾರ ಗಂಗಾವತಿ, ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳು ಗಂಗಾವತಿ, ಮಾನ್ಯ ಸಂಗಪ್ಪ ಜೇನರ್, ಸಮಾಜ ಕಲ್ಯಾಣ ಅಧಿಕಾರಿಗಳು ಗಂಗಾವತಿ, ಮಾನ್ಯ ಸೋಮಶೇಖರ್ ಜೂಟ್ಟಲ್ ಪೊಲೀಸ್ ಇನ್ಸ್ಪೆಕ್ಟರ್ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ, ಶ್ರೀ ಹಾಲೇಶ್ RI ಮರಳಿ,ಶ್ರೀ ಕೃಷ್ಣ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಹೊಸಕೆರಾ ಹಾಗೂ ಶ್ರೀ ಮರಿ ನಾಗಪ್ಪ ಕರ್ನಾಟಕ ಪ್ರಾಂತ ಕೂಲಿ ಕಾರ್ಮಿಕರ ಸಂಘ ಗಂಗಾವತಿ ತಾಲೂಕ ಅಧ್ಯಕ್ಷರು , ಮತ್ತು ಮಾದಿಗ ಸಮಾಜದ ಮುಖಂಡರು, ಹೊಸಕೆರಾ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಶ್ರೀ ಶ್ರೀ ಪ್ರಶಾಂತ್ ಹೊಸಕೇರಾ ತಾಲೂಕ ಅಕ್ರಮ ಸಕ್ರಮ ಬಗರುಕುಂ ಸಾಗುವಳಿ ಸದಸ್ಯರು ಗಂಗಾವತಿ. ಹೊಸಕೆರಾ ಗ್ರಾಮದ ಎಲ್ಲ ಸರ್ವಜಾತಿಯ ಸಾರ್ವಜನಿಕರು ಸದರಿ ವೇಳೆ ಭಾಗವಹಿಸಿದ್ದರು .

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.