A request from Herur to extend the Bangalore-Hospeter Railway up to Sindhanurnagar.

ಗಂಗಾವತಿ: ಬೆಂಗಳೂರು-ಹೊಸಪೇಟೆ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೇಲ್ವೆಯನ್ನು ಸಿಂಧನೂರು ನಗರದವರೆಗೂ ವಿಸ್ತರಿಸುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ಬೆಂಗಳೂರು-ಹೊಸಪೇಟೆ ರೇಲ್ವೆ ಸಂಖ್ಯೆ:06243 ಮತ್ತು ಹೊಸಪೇಟೆ-ಬೆಂಗಳೂರು ರೇಲ್ವೆ ಸಂಖ್ಯೆ: 06244 ಈ ರೇಲ್ವೆಗಳನ್ನು ರಾಯಚೂರು ಜಿಲ್ಲೆಯ ಸಿಂಧನೂರು ನಗರದವರೆಗೂ ವಿಸ್ತರಿಸಲು ಇಮೇಲ್ ಮೂಲಕ ರೇಲ್ವೆ ಸಚಿವರಿಗೆ ಒತ್ತಾಯಿಸಿದ್ದಾರೆ.
ಸಿಂಧನೂರು ನಗರವು ಆಟೋಮೊಬೈಲ್ ವ್ಯವಹಾರದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು ಮತ್ತು ಅತಿ ಹೆಚ್ಚು ಭತ್ತ ಬೆಳೆಯುವ ಮತ್ತು ಅದಕ್ಕೆ ಬಳಸುವ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಖರೀದಿಸುವಲ್ಲಿ ಹಾಗೂ ಸಿಮೆಂಟ್,ಕಬ್ಬಿಣ ಉತ್ಪನ್ನಗಳಲ್ಲಿ ಹೆಚ್ಚಿನ ವಹಿವಾಟು ಹೊಂದಿದೆ.
ಗಂಗಾವತಿ ನಗರ ಮತ್ತು ಕಾರಟಗಿ ಪಟ್ಟಣ ಸಹಿತ ನೀರಾವರಿ ಪ್ರದೇಶವಾಗಿದ್ದು ,ಭತ್ತ ಬೆಳೆ ಕ್ರಿಮಿನಾಶಕ, ಖರಿಧಿಗೆ ಹಾಗೂ ಸಿಮೆಂಟ್,ಕಬ್ಬಿಣ ವ್ಯವಹಾರದಲ್ಲಿ ಮುಂದಿದೆ.
ಈ ಭಾಗದಲ್ಲಿ ಸ್ವಾತಂತ್ರ್ಯ ನಂತರದ ಬಹುತೇಕ 70 ವರ್ಷಗಳ ಕಾಲ ರೈಲು ಸೌಲಭ್ಯ ಇರಲಿಲ್ಲ.ಸಧ್ಯಕ್ಕೆ ಸಿಂಧನೂರು ನಗರದಿಂದ ರಾತ್ರಿ ಸಂಚರಿಸುವ ಒಂದು ರೈಲು ಮಾತ್ರ ಇದೆ.ಆದ ಕಾರಣ ಬೆಂಗಳೂರು ಮತ್ತು ಹೊಸಪೇಟೆ ನಡುವೆ ಹಗಲು ಹೊತ್ತು ಸಂಚರಿಸುವ ರೈಲು ಸಂಖ್ಯೆ: 06243 ಮತ್ತು ರೈಲು ಸಂಖ್ಯೆ:06244 ಗಳನ್ನು ಸಿಂಧನೂರು ನಗರದವರೆಗೂ ವಿಸ್ತರಿಸುವಂತೆ ಕ್ರಮಕೈಗೊಳ್ಳಲು ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ಜನಾರ್ಧನ ರೆಡ್ಡಿಯವರನ್ನು ಸಹ ಒತ್ತಾಯಿಸಿದ್ದಾರೆ.