Breaking News

ದೇಹ ಅಥವಾ ಯಾವುದೇ ಅಂಗಾಂಗ ದಾನ ಮಾಡಲು ಅವಕಾಶವಿದೆ.ಮತ್ತು ಪರಿಸರ , ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದುವುದು ಅವಶ್ಯವಿದೆ-ಡಾ//.ವಿ.ಚಿನಿವಾಲರ

It is possible to donate body or any organ. And it is necessary to take special care about environment, health-Dr//.V.Chiniwala

ಜಾಹೀರಾತು

ಗಂಗಾವತಿ: ಸಂಘ ಸಂಸ್ಥೆಗಳು ದೇಹ ಮತ್ತು ಅಂಗಾಂಗ ದಾನ ಹಾಗೂ ಪರಿಸರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಎನ್ನುವ ಹಾಗೆ ನಾವು ಭೂಮಿಯ ಮೇಲೆ ಜನಿಸಿದ ಮೇಲೆ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡುವುದು ಅವಶ್ಯವಾಗಿದೆ ಎಂದು ಇತ್ತೀಚಿಗೆ ಕರ್ನಾಟಕ ಭಾರತೀಯ ವೈದ್ಯಕೀಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸಿದ್ಧ ವೈದ್ಯರಾದ ಡಾಕ್ಟರ್ ವಿ. ವಿ. ಚಿನಿವಾಲರ ರವರು ತಮ್ಮ ಆಸ್ಪತ್ರೆ ಆವರಣದಲ್ಲಿ ಗಂಗಾವತಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಾನವನ ದೇಹ ಮರಣ ಹೊಂದಿದ ಮೇಲೆ ಮಣ್ಣಲ್ಲಿ ಹೂತು ಮತ್ತು ಅಗ್ನಿಸ್ಪರ್ಶಗೊಂಡು ಅದರಿಂದ ಏನು ಲಾಭ ಆಗೋದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಮರಣದ ನಂತರ ಸಮಾಜಮುಖಿಯಾಗಿ ತಮ್ಮ ದೇಹ ಅಥವಾ ಯಾವುದೇ ಅಂಗಾಂಗ ದಾನ ಮಾಡಲು ಅವಕಾಶವಿದೆ. ಹಾಗಾಗಿ ಈ ದಿಶೆಯಲ್ಲಿ ಪರಿಸರ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದುವುದು ಅವಶ್ಯವಿದೆ ಎಂದು ಡಾಕ್ಟರ್ ವಿ.ವಿ.ಚಿನಿವಾಲರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಸುಮಾರು 1700 ಭಾರತೀಯ ವೈದ್ಯಕೀಯ ಸಂಘಗಳು ಇದ್ದು ಸುಮಾರು ಮೂರುವರೆ ಲಕ್ಷ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ 180 ಭಾರತೀಯ ವೈದ್ಯಕೀಯ ಸಂಘಗಳು ಸುಮಾರು ಮೂವತ್ತು ಸಾವಿರ ವೈದ್ಯರು ಆರೋಗ್ಯ ಸೇವೆಯನ್ನು ಮಾಡುತ್ತಿದ್ದಾರೆ.
ಹೀಗಾಗಿ ಪ್ರತಿಯೊಬ್ಬರು ದೇಹ ಮತ್ತು ಅಂಗಾಂಗ ದಾನ ಮಾಡಲು ಸಾರ್ವಜನಿಕರಿಗೆ ವಿನಂತಿಸಿದರು
ಈ ಸಂದರ್ಭದಲ್ಲಿ ಗಂಗಾವತಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಟಿ ಆಂಜನೇಯ ರವರು ನಗರದಲ್ಲಿ ತುಂಬಾ ವರ್ಷಗಳಿಂದ ಡಾ!! ವಿ. ವಿ .ಚಿನಿವಾಲರ ಮತ್ತು ತಮ್ಮ ಕುಟುಂಬ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಡಾಕ್ಟರ್ ವಿ. ವಿ. ಚಿನಿವಾಲರ ರವರು ಸರಳ ಮತ್ತು ಉತ್ತಮ ನಡತೆಯ ಕೇವಲ ವೈದ್ಯಕೀಯ ಅಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ. ಅಲ್ಲದೇ ನಗರದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ, ಈ ವರ್ಷ ರಾಜ್ಯದಲ್ಲಿ ಗಂಗಾವತಿ ವೈದ್ಯಕೀಯ ಸಂಘ ರಾಜ್ಯದಲ್ಲಿಯೇ ಉತ್ತಮ ಸಂಘ ಎಂದು ಪ್ರಶಸ್ತಿ ನಡೆಯಲು ಕಾರಣೀಭೂತರಾಗಿದ್ದಾರೆ.
ನಮ್ಮ ರೊಟರಿ ಸಂಸ್ಥೆ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾಗಿದ್ದು ಅನೇಕ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಾರ್ವಜನಿಕರಿಗೆ ಸಹಾಯ ಸಹಕಾರ ಮತ್ತು ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು
ಡಾಕ್ಟರ್ ವಿ. ವಿ. ಚಿನಿವಾಲರ ಅವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವ ಪೂರ್ವಕ ಅಭಿನಂದನೆಗಳನ್ನು ತಿಳಿಸಲಾಯಿತು
ವಿಜಯಕುಮಾರ್ ಗಡ್ಡಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವಾಸು ಕೊಳಗದ ವಂದಿಸಿದರು
ಈ ಸನ್ಮಾನ ಕಾರ್ಯಕ್ರಮದಲ್ಲಿ ರೋಟರಿ ಹಿರಿಯ ಪದಾಧಿಕಾರಿಗಳಾದ ಅಜಿತ್ ರಾಜ ಸುರಾನ, ಜೆ.ನಾಗರಾಜ,ಉಗಮರಾಜ ಜೈನ ,ದೊಡ್ಡಯ್ಯ, ಸಲಹುದ್ದೀನ, ಶಿವಕುಮಾರ,ಎಂ. ರಾಘವೇಂದ್ರ ರಾವ್ಗು, ಸುರೇಶ ಬಂಬ, ಜಗದೀಶ, ಎಚ್. ಎಮ್. ಮಂಜುನಾಥ್, ಟಿ. ಸಿ. ಶಾಂತಪ್ಪ ,ಡಾಕ್ಟರ್ ವೀರನಗೌಡ, ಸುರೇಶ ಸೋಲಂಕಿ,
ಅರಿಕೇರಿ ವೀರೇಶ್ ,ಡಾಕ್ಟರ್ ಎಂ.ಟಿ. ಮಾಂತೇಶ್, ಡಾಕ್ಟರ್ ಎಸ್. ಬಿ. ಗೌಡರ, ಎಮ್ .ಶ್ರೀಪಾದ ರಾವ್,ಇನ್ನಿತರ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.