Breaking News

ಊಟಕ್ಕೆ ಎಷ್ಟಾಗುತ್ತದೆ?

How much is lunch?

ಜಾಹೀರಾತು
Screenshot 2024 10 31 09 54 04 51 A23b203fd3aafc6dcb84e438dda678b6 1

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು….. ಊಟಕ್ಕೆ ಎಷ್ಟಾಗುತ್ತದೆ?

ಮಾಲಿಕ ಉತ್ತರಿಸಿದರು….

ಚಪಾತಿ ಬೇಕಿದ್ದರೆ 50 ರೂಪಾಯಿ, ಬರೀ ಅನ್ನ ಸಾಂಬಾರ್ ಆದರೆ
30 ರೂಪಾಯಿ….

ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ…

ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು…. ಬರೀ ಅನ್ನವಾದರೂ ಸಾಕು..

ಹಸಿವು ನೀಗಿದರೆ ಸಾಕು..

ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ….

ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು….

ಹೋಟೆಲ್ ಮಾಲಿಕ ಚಪಾತಿ ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು….

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ… ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಲ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು…

ನೀವ್ಯಾಕೆ ಅಳುತಿದ್ದೀರಾ?

ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು….

ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು…
ಮೂರು ಜನರಿಗೂ ಒಳ್ಳೆಯ ಕೆಲಸವಿದೆ… ನನಗೆ ಸಿಕ್ಕದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ…. ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು…. ಇಪ್ಪತ್ತೆಂಟು ವರುಷದ ಪ್ರವಾಸ ಜೀವನ…..

ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು…. ಆಸ್ತಿ ಪಾಲು ಮಾಡುವವರೆಗೆ ನಾನಂದರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ…. ಮುಟ್ಟದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು… ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ… ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು ಉಪ್ಪುರಸ‌ವಾಗುತಿತ್ತು ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತಿರಲಿಲ್ಲ… ಕಾರಣ ಮತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು… ಯಾವಾಗಳು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು… ಮರುಭೂಮಿಯಲ್ಲಿ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಮನೆ… ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿ. ಬಿಟ್ಟು ಹೋಗಲು ಮನಸು ಕೇಳಲಿಲ್ಲ.
ಅದರೇ ನಿನ್ನೆ ಹೊರಟು ಬಿಟ್ಟೆ… ಸೊಸೆಯ ಒಡವೆ ಕದ್ದೆ ಎಂದು ಮಗ ನನ್ನಲ್ಲಿ ಸಿಟ್ಟುಗೊಂಡ. ಹೊಡೆದಿಲ್ಲ ಭಾಗ್ಯಕ್ಕೆ… ಇನ್ನೂ ಅಲ್ಲಿ ನಿಂತರೆ ಅದೂ ನಡೆಯಬಹುದು.. “ಅಪ್ಪನಿಗೆ ಹೊಡೆದ ಮಗ” ಎಂಬ ಹೆಸರು ಬರಬಾರದಲ್ಲ.,.. ಸಾಯಲು ಭಯವಿಲ್ಲ ಅಲ್ಲದೆ ಇನ್ಯಾರಿಗೆ ಬೇಕಾಗಿ ಬದುಕಬೇಕು.

ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಿಕರೆಂದರು ಬೇಡ ಕೈಯಲ್ಲಿ ಇರಲಿ….

ಯಾವಾಗ ಬೇಕಿದ್ದರು ಇಲ್ಲಿಗೆ ಬರಬಹುದು…

ನಿಮಗಿರುವ ಊಟ ಇಲ್ಲಿ ಇರಬಹುದು..

ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು

ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. ಧರ್ಮಕೆ ತಿಂದು ಅಭ್ಯಾಸವಿಲ್ಲ. ಏನೂ ತಿಳಿಯದಿರಿ.. ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು…
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.

ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತದೆಯೆಂದು ಚಿಂತಿಸುತಿಲ್ಲ.???

ಬೇಡದ್ದು ,ಬೇಕಾದದ್ದು ಕಳುಹಿಸುವಾಗಲೂ ಇಂತಹ
ಒಂದು ಪೋಷ್ಟು ಕೂಡಾ ಷೇರು ಮಾಡಿ.
ಯಾರಾದರು ಒಬ್ಬರ ಮನಸಾದರೂ ಬದಲಾದರೆ…..

ಕೃಪೆ :ಫೇಸ್ಬುಕ್ ,

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.