Blood donation is for the good of saving one’s life:K.Nemiraj Naik
ಕ್ಷೇತ್ರದ ಹಗರಿಬೊಮ್ಮನಹಳ್ಳಿ ,ಕೊಟ್ಟೂರು ಮರಿಯಮ್ಮನಹಳ್ಳಿ ,ಏಕಕಾಲಕ್ಕೆ ಸಿಂಧೂರ ಬಂಡಾರ ಕಾರ್ಯಕ್ರಮದ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಜನರ ಹಿತಕ್ಕಾಗಿ ರಕ್ತದಾನವು ಒಬ್ಬರ ಜೀವವನ್ನು ಉಳಿಸಲು ಒಳಿತಿಗಾಗಿ ಪ್ರೇರಣೆ ಮೂಲಕ ಹೇಳಿದರು
ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ರವರ ಆದೇಶದಂತೆ ಸಿಂಧೂರ ಬಂಡಾರ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಬುಧವಾರ ಆಯೋಜಿಸಲಾಗಿತ್ತು.
ತೇರು ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಮಾನ್ಯ ಶಾಸಕರ ಆಪ್ತ ಸಹಾಯಕರಾದ ದೊಡ್ಡಬಸಪ್ಪ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕರಾದ ಕೆ ನೇಮಿರಾಜ ನಾಯ್ಕ್ ಅವರು ಕ್ಷೇತ್ರದ ಜನತೆಗೆ ಸಂದೇಶ ಹೇಳುವ ಮೂಲಕ ನೀವು ದಾನ ಮಾಡುವ ರಕ್ತವು ಯಾರಿಗಾದರೂ ಜೀವನದಲ್ಲಿ ಮತ್ತೊಂದು ಅವಕಾಶವನ್ನು ನೀಡುತ್ತದೆ. ಒಂದು ದಿನ ಯಾರಾದರೂ ನಿಕಟ ಸಂಬಂಧಿ, ಸ್ನೇಹಿತ, ಪ್ರೀತಿಪಾತ್ರರು ಅಥವಾ ನೀವೂ ಆಗಿರಬಹುದು.
ನಿಯಮಿತ ರಕ್ತ ಪೂರೈಕೆಯ ನಿರಂತರ ಅವಶ್ಯಕತೆಯಿದೆ ಏಕೆಂದರೆ ಬಳಕೆಗೆ ಮೊದಲು ರಕ್ತವನ್ನು ಸೀಮಿತ ಸಮಯದವರೆಗೆ ಮಾತ್ರ ಸಂಗ್ರಹಿಸಬಹುದು.
ಸಾಕಷ್ಟು ಸಂಖ್ಯೆಯ ಆರೋಗ್ಯವಂತ ಜನರ ನಿಯಮಿತ ರಕ್ತದಾನದ ಅಗತ್ಯವಿದೆ. ನಾವು ಎಲ್ಲಕ್ಕಿಂತ ಜೀವನವನ್ನು ಗೌರವಿಸುತ್ತೇವೆ. ರಕ್ತದಾನವು ಒಬ್ಬರ ಜೀವವನ್ನು ಉಳಿಸಲು ಸುರಕ್ಷಿತ, ಎಂದು ಪ್ರೇರಣೆ ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಶ್ರೀ ಭಾಸ್ಕರ್ , ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಪ್ರದೀಪ್ ,ಆಡಳಿತ ವೈದ್ಯಾಧಿಕಾರಿಗಳಾದ ಬದ್ಧನಾಯಕ್ , ಆಪ್ತ ಸಮಾಲೋಚಕರಾದ ಮರುಳಾರಾದ್ಯ ಪ್ರಶಾಂತ್ ಮಹಾಂತೇಶ ಹಿರಿಯ ನಿರೀಕ್ಷಣಾಧಿಕಾರಿಗಳ ಶ್ರೀಯುತ ಜಗದೀಶ್ ಮಂಜುಳ ಮುಂತಾದವರಿದ್ದರು.