Strict order to clear the parking space of Kukanur town: Headmaster
ವಹಿಸಿದ ಕೆಲಸ ಸರಿಯಾಗಿ ಮಾಡದಿದ್ದರೇ ದನ ಕಾಯಲು ಹೋಗಿ ಸಿಬ್ಬಂದಿಗೆ ಮುಖ್ಯಾಧಿಕಾರಿ ತರಾಟೆ,,,
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕುಕನೂರು ಪಟ್ಟದಲ್ಲಿ ಅತಿಕ್ರಮಣವಾದ ಪಾರ್ಕಿಂಗ್ ಜಾಗೆಗಳನ್ನು ಕಟ್ಟು ನಿಟ್ಟಿನ ಆದೇಶದೊಂದಿಗೆ ಶೀಘ್ರದಲ್ಲಿ ತೆರವುಗೊಳಿಸಲಾಗುವುದು ಇದಕ್ಕೆ ಯಾವುದೇ ಮುಲಾಜೆ ಇಲ್ಲಾ ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಕಡಕ್ ಆಗಿ ಹೇಳಿದರು.
ಅವರು ಪಟ್ಟಣದ ನೀರಿಕ್ಷಣ ಮಂದಿರದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಈ ಕುರಿತು ಹಲವಾರು ಫಿರ್ಯಾದೆಗಳು ಬಂದಿದ್ದು ಬಸವೇಶ್ವರ ನಗರ, ಸಂಜಯ ನಗರ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಒತ್ತುವರಿಯಾಗಿರುವ ಜಾಗೆಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ವಹಿಸಲಾಗುವುದು ಎಂದರು.
ನಂತರದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸಿದ್ದು ಉಳ್ಳಾಗಡ್ಡಿ ಮಾತನಾಡಿ 13ನೇ ವಾರ್ಡ್ ನಲ್ಲಿ ಅಂಗನವಾಡಿ ಕೇಂದ್ರಕ್ಕೆ ಜಾಗೆ ಕೇಳಿದರು ನೀಡುತ್ತಿಲ್ಲಾ ಹಾಗೂ ಅಂಗನವಾಡಿ ದುರಸ್ಥಿಗಳ ಕುರಿತು ಮಾತನಾಡದಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದರು.
ಪಟ್ಟಣದ ತೇರಿನಗಡ್ಡಿಯ ಹತ್ತಿರವಿರುವ ಶೌಚಾಲಯ ನಿರ್ವಹಣೆ ಕೊರತೆ ಇದ್ದು ಸಮರ್ಪಕ ನೀರಿನ ವ್ಯವಸ್ಥೆ ಇಲ್ಲಾ ಹಾಗೂ ವಾರ್ಡ್ ಗಳು ಸ್ವಚ್ಚವಾಗಿಲ್ಲಾ ಎಂದು ಸದಸ್ಯ ಮಲ್ಲು ಚೌಧರಿ ಹೇಳುತಿದ್ದಂತೆ, ಗರಂ ಆದ ಮುಖ್ಯಾಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಿಮಗೆ ವಹಿಸಿದ ಕಾರ್ಯವನ್ನು ಸರಿಯಾಗಿ ಮಾಡಲು ಆಗದಿದ್ದರೇ ದನ ಕಾಯಲು ಹೋಗಿ ಎಂದು ಆಕ್ರೋಶ ವ್ಯಕ್ತ ಪಡಿಸಿ, ಎಲ್ಲವನ್ನು ಸರಿಪಡಿಸುವಂತೆ ಆರೋಗ್ಯ ಸಹಾಯಕಿಯವರಿಗೆ ತಿಳಿಸಿದರು.
ವಿವಿಧ ಸದಸ್ಯರು ಹಲವಾರು ಬೇಡಿಕೆಗಳಲ್ಲಿ ಪಟ್ಟಣದ ಅಂಜನಾದ್ರಿ ನಗರದಲ್ಲಿ ಹಾಳು ಹನುಮಪ್ಪ ದೇವಸ್ಥಾನಕ್ಕೆ ಜಾಗೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಅದರಂತೆ ವಿನೋಭಾನಗರ, ಗೃಹ ರಕ್ಷಕ ದಳ, ಅಲೆಮಾರಿ ಜನಾಂಗಕ್ಕೆ ಭವನ ನಿರ್ಮಾಣಕ್ಕೆ ಸ್ಥಳಗಳನ್ನು ಪರಿಶೀಲನೆ ಮಾಡಿ ಜಾಗೆ ನೀಡಲಾಗುವುದು ಎಂದ ಅವರು ಹಾಗೂ ಎಸ್ ಸಿ, ಎಸ್ ಟಿ ಶೌಚಾಲಯಕ್ಕೆ ಹೋಗುವ ದಾರಿಯನ್ನು ಮಾಡಿಕೊಡಲು ಸದಸ್ಯರು ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಸದಸ್ಯರೊರ್ವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪತ್ತಿನ ಸಂಘದ ಜಾಗೆಗೆ ಬೇಡಿಕೆ ಇಟ್ಟಿದ್ದು ಜಾಗೆ ನೀಡಲು ಸದಸ್ಯರು ಸಹಮತಿಸಲಿಲ್ಲಾ.
ಇನ್ನೂ ಹೊಸ ನಿವೇಶನಗಳಲ್ಲಿ ಬೋರ್ ವೆಲ್ ಹಾಕಿಸುವವರು ಎನ್ ಓಸಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪಡೆಯುವಂತೆ ಹೇಳಿದರು.
ಇನ್ನೂಳಿದಂತೆ ಸದಸ್ಯ ಸಿರಾಜ್ ಕರಮುಡಿ ಲೇ ಔಟ್ ಗಳ ಕುರಿತು ಮಾಹಿತಿ ಕೇಳುತಿದ್ದಂತೆ ಅವುಗಳ ಕುರಿತು ನಮ್ಮಲ್ಲಿ ಸಮರ್ಪಕ ದಾಖಲೆಗಳಿವೆ ಅವುಗಳನ್ನು ಕೊಡುವುದಾಗಿ ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು .
ಪಟ್ಟಣದಲ್ಲಿ ಹಲವಾರು ಸಮಸ್ಯೆಗಳಿದ್ದರು ಪಟ್ಟಣ ಪಂಚಾಯತಿ ಸದಸ್ಯರೂ ಹೆಚ್ಚು ಚರ್ಚಿಸಲಿಲ್ಲಾ ಎಂದೆನಿಸಿತು.
ಇನ್ನೂಳಿದಂತೆ 10 ನೇ ವಾರ್ಡ್ ಆರ್.ಓ ಪ್ಲಾಂಟ್ ಗುದ್ನೇಪ್ಪನಮಠ ಕಮಿಟಿಗೆ ಕೊಡಲು ಚರ್ಚಿಸಲಾಯಿತು, ಅಂಬೇಡ್ಕರ್ ಭವನದ ಕಂಪೌಂಡ ನಿರ್ಮಾಣ, ಎಸ್.ಎಫ್.ಸಿ ಟೆಂಡರ್ ದರ ಮಂಜೂರಾತಿ, ವಾಣಿಜ್ಯ ಮಳಿಗೆ ಕಾಮಗಾರಿ, ಸಿ.ಎ ನಿವೇಶನ ಮಂಜೂರಾತಿ, ಹಾಗೂ ಸರಕಾರಿ ಶಾಲೆಗಳನ್ನು ಮಾತ್ರ ದಾಖಲು ಮಾಡಿಕೊಳ್ಳಲು, ಪ್ರೋತ್ಸಾಹ ಧನ ಕುರಿತು, ಹೊಸ ನಳಗಳ ಸಂಪರ್ಕ ಕುರಿತು ಹಾಗೂ ಇನ್ನೂಳಿದ ವಿಷಯಗಳನ್ನು ಕುರಿತು ಅಧ್ಯಕ್ಷರ, ಸದಸ್ಯರ ಸಮ್ಮುಖದಲ್ಲಿ ಚರ್ಚಿಸಲಾಯಿತು. ನಂತರದಲ್ಲಿ ನಾಮ ನಿರ್ಧೆಶನ ಸದಸ್ಯರ ಆಯ್ಕೆ ಜರುಗಿತು.
ಈ ಸಭೆಯಲ್ಲಿ ಉಪಾಧ್ಯಕ್ಷ ಪ್ರಶಾಂತ ಆರ್ ಬೆರಳಿನ, ಸದಸ್ಯರಾದ ನೇತ್ರಾವತಿ ಮಾಲಗಿತ್ತಿ, ರಾಧಾ ದೊಡ್ಡಮನಿ, ನೂರುದ್ದಿನ್ ಸಾಬ ಗುಡಿಹಿಂದಲ್, ಕವಿತಾ ಹೂಗಾರ, ಮಲ್ಲು ಚೌದರಿ, ಗಗನ ನೋಟಗಾರ, ಮಂಜುನಿಥ ಕೋಳೂರು, ಸಿರಾಜ್ ಕರಮುಡಿ, ಮಂಜುಳಾ ಕಲ್ಮನಿ, ರಾಮಣ್ಣ ಬಂಕದಮನಿ, ಲಕ್ಷ್ಮೀ ಸಬರದ, ಬಾಲರಾಜ ಗಾಳಿ, ಸಿದ್ದು ಉಳ್ಳಾಗಡ್ಡಿ, ಶಿವರಾಜ ಯಲ್ಲಪ್ಪಗೌಡ್ರ, ಜಗನ್ನಾಥ ಭೋವಿ ಸೇರಿದಂತೆ ಪಟ್ಟಣ ಪಂಚಾಯತ ಸಿಬ್ಬಂದಿಯವರು ಇದ್ದರು.