Breaking News

ಸರ್ಕಾರಿ ನೌಕರರ ಸಂಘದ ಶಾಂತಿಯುತ ಮತದಾನ,15ಸ್ಥಾನಗಳಿಗೆ ಅವಿರೋಧವಾಗಿ

Peaceful polling of Government Employees Union, unopposed for 15 seats

ಜಾಹೀರಾತು





ಕೊಟ್ಟೂರು 29.10.2024 :- ಸರ್ಕಾರಿ ನೌಕರರ ಸಂಘದ ಶಾಂತಿಯುತ ಮತದಾನ
ಕೊಟ್ಟೂರು ತಾಲೂಕು ಸರ್ಕಾರಿ ನೌಕರರ ಸಂಘದ 2024-2029 ರ ಅವಧಿಗೆ 11 ಇಲಾಖೆಯ 20 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 9 ಇಲಾಖೆಯಿಂದ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಪಶುಸಂಗೋಪನೆ- ಯೋಗೀಶ್ವರ ಡಿ, 2.ಕಂದಾಯ- ಎಸ್ ಎಂ ಗುರುಬಸವರಾಜ, ಕೆ ರಮೇಶ್, 3.ಪ್ರೌಢಶಾಲೆ- ಎಂ ಸೋಮಶೇಖರರಾಜ್, ಶಶಿಕಲಾ ಹೆಚ್, 4. ಪದವಿ-ಪೂರ್ವ ಶಿಕ್ಷಣ ಇಲಾಖೆ – ಡಾ.ಜಗದೀಶಚಂದ್ರಭೋಸ್, 5. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ-ವೀರೇಶ ತುಪ್ಪದ, 6.ಅರಣ್ಯ-ಹೇಮಚಂದ್ರ.ಕೆ. 7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ – ಮೀನಾಕ್ಷಿ ವಿ, ಜಗದೀಶ.ಕೆ, ಮಂಜುನಾಥ ಬಿ ಟಿ, ನೂರ್ ಅಹ್ಮದ್, 8. ಖಜಾನೆ- ರವಿಕುಮಾರ್,
8.ಎಪಿಎಂಸಿ-ಎ.ಕೆ.ವೀರಣ್ಣ, 9. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – ಕಛೇರಿ ಸಿಬ್ಬಂದಿ ಕೆ.ಪುಷ್ಪಲತಾ ಹೀಗೆ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ದಿನಾಂಕ: 28.10.2024 ರಂದು 5 ಸ್ಥಾನಗಳಿಗೆ ಮತದಾನ ನಡೆದಿದ್ದು, ಶಿಕ್ಷಣ ಇಲಾಖೆಯ 4 ಸ್ಥಾನಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.ಸಿದ್ದಪ್ಪ ಜಿ-305 ಮತಗಳು, 2.ಶಿವಕುಮಾರ ಎಂ-304 ಮತಗಳು, 3.ಎ.ಬಿ.ಗುರುಬಸವರಾಜ-274 ಮತಗಳು, 4.ಚನ್ನೇಶಪ್ಪ ಎಸ್-246 ಮತಗಳನ್ನು ಪಡೆದು ವಿಜೇತರಾದರೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇತರೆ ಸಿಬ್ಬಂದಿಯ 1 ಸ್ಥಾನಕ್ಕೆ 2 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗಂಗಾಧರ ಸಿ.ಹೆಚ್.ಎಂ ಇವರು -18 ಮತಗಳನ್ನು ಪಡೆದು ವಿಜೇತರಾಗಿರತ್ತಾರೆಂದು ಚುನಾವಣಾಧಿಕಾರಿಗಳಾದ ಎಸ್ ಸುರೇಶ್ ಇವರು ಮಾಹಿತಿಯನ್ನು ನೀಡಿರುತ್ತಾರೆ.
ಬೆಳಗಿನಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿ ಮಂದಗತಿಯಲ್ಲಿ ಸಾಗಿದ್ದು, ಮಧ್ಯಾಹ್ನದ ಅವಧಿಯಲ್ಲಿ ವೇಗವನ್ನು ಪಡೆಯಿತು. ಪರಸ್ಪರ ಬಿರುಸಿನ ಪ್ರಚಾರ ನಡೆದಿದ್ದು ಕುತೂಹಲದಿಂದ ಕೂಡಿತ್ತು. ಎಲ್ಲರೂ ಪರಸ್ಪರ ಸ್ನೇಹಯುತವಾಗಿ ಮತದಾನ ಕಾರ್ಯದಲ್ಲಿ ತೊಡಗಿದ್ದು ಶಾಂತಿಯುತವಾಗಿ ಮತದಾನ ಪ್ರಕ್ರಯೆ ಸಂಜೆ 4.00 ಗಂಟೆಗೆ ಪೂರ್ಣಗೊಂಡು, ನಂತರ ಸಂಜೆ 4.30 ಗಂಟೆಯ ನಂತರ ಮತ ಎಣಿಕೆ ಪ್ರಾರಂಭವಾಗಿ ರಾತ್ರಿ 7.00 ಗಂಟೆಗೆ ಎಣಿಕೆ ಕಾರ್ಯ ಮುಕ್ತಾಯವಾಯಿತು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.