Brahma Habba’ fair for three days

ಸಾವಳಗಿ: ನಗರದ ಆರಾಧ್ಯ ದೈವ ಶ್ರೀ ಬ್ರಹ್ಮ ದೇವರ (ಬ್ರಹ್ಮ ಹಬ್ಬ) ಜಾತ್ರೆಯನ್ನು ಅಕ್ಟೋಬರ್ 29 ರಿಂದ ಅಕ್ಟೋಬರ್ 31 ರವರಗೆ ಮೂರು ದಿನಗಳ ಕಾಲ ನಡೆಯುತ್ತದೆ.
ಬ್ರಹ್ಮ ಹಬ್ಬ ಜಾತ್ರೆಯು ಅ 29 ರಂದು ಮಂಗಳವಾರ ಬೆಳಗ್ಗೆ ಹೋಮ್ ಹವನಗಳ ಮೂಲಕ ಜಾತ್ರೆ ಪ್ರಾರಂಭ ಆಗುವುದು, ಸಾಯಂಕಾಲ 4 ಗಂಟೆಗೆ ಗ್ರಾಮದ ಹಾಗೂ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು, ರಾತ್ರಿ 10 ಗಂಟೆಗೆ ಡೊಳ್ಳಿನ ಪದಗಳು ಜರುಗುತ್ತವೆ.
ಅ 30 ಬುಧವಾರ ರಂದು ಬೆಳಿಗ್ಗೆ 9 ಗಂಟೆಗೆ ಕುಂಭಮೇಳದೊಂದಿಗೆ ಎಲ್ಲ ಪಲ್ಲಕ್ಕಿಗಳ ಪ್ರದಕ್ಷಿಣೆ ಹಾಗೂ ಗಂಗಾಪೂಜೆ ಸಕಲ ವಾದ್ಯ ಮೇಳಗಳೊಂದಿಗೆ ನೆರವೇರುವುದು. ಸಾಯಂಕಾಲ 5 ಗಂಟೆಗೆ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ, ರಾತ್ರಿ 9 ಗಂಟೆಗೆ ‘ಸಂಗೀತ ರಸ ಸಂಜೆ’ ಕಾರ್ಯಕ್ರಮ ಜರುಗುವುದು.
ಅ 31 ರಂದು ಗುರುವಾರ ಎಲ್ಲ ಪಲ್ಲಕ್ಕಿಗಳ ದೇವರಗಳ ಕರಿ ಹರಿಯುವ ಕಾರ್ಯಕ್ರಮ ನೆರವೇರುವುದು. ಮೂರು ದಿನಗಳ ಕಾಲ ಪ್ರತಿದಿನ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಾತ್ರಾ ಕಮಿಟಿ ಯವರನ್ನು ಸಂಪರ್ಕಿಸುವಂತೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
Kalyanasiri Kannada News Live 24×7 | News Karnataka
